ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಮಹಿಳೆ ಯತ್ನ!

ಕೇಂದ್ರ ಸಚಿವ ಮತ್ತು ಸ್ಥಳೀಯ ಸಂಸದ ಪ್ರಹ್ಲಾದ್ ಜೋಶಿ ಅವರ ಮನೆ ಮುಂದೆ ಮಹಿಳೆಯೊಬ್ಬರು ವಿಷ ಸೇವಿಸಿರುವ ಘಟನೆ ಮಂಗಳವಾರ ವರದಿಯಾಗಿದೆ. ಸಧ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸಿರುವ ಮಹಿಳೆಯನ್ನು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Published: 07th April 2021 12:51 AM  |   Last Updated: 07th April 2021 01:32 PM   |  A+A-


ಪ್ರಹ್ಲಾದ್ ಜೋಶಿ

Posted By : Raghavendra Adiga
Source : The New Indian Express

ಹುಬ್ಬಳ್ಳಿ: ಕೇಂದ್ರ ಸಚಿವ ಮತ್ತು ಸ್ಥಳೀಯ ಸಂಸದ ಪ್ರಹ್ಲಾದ್ ಜೋಶಿ ಅವರ ಮನೆ ಮುಂದೆ ಮಹಿಳೆಯೊಬ್ಬರು ವಿಷ ಸೇವಿಸಿರುವ ಘಟನೆ ಮಂಗಳವಾರ ವರದಿಯಾಗಿದೆ. ಸಧ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸಿರುವ ಮಹಿಳೆಯನ್ನು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀದೇವಿ ವೀರಪ್ಪ ಕಮ್ಮಾರ ಅವರು ಅನಾರೋಗ್ಯದ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಧಾರವಾಡು ತಾಲ್ಲೂಕಿನ ಗರಗ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಕಳೆದ ವರ್ಷ ಆಕೆಯ ಮನೆ ಪ್ರವಾಹದ ನಿಮಿತ್ತ ಕುಸಿದು ಹಾನಿಗೊಂಡಿದೆ. ಆದರೆ ಕೇವಲ 50,000 ರೂ. ಪರಿಹಾರವನ್ನು ಮಾತ್ರ ಪಡೆದಿರುವ ಆಕೆ ಮನೆ ರಿಪೇರಿ ಮಾಡಿಸಲು ಸಾಧ್ಯವಾಗದೆ ನೊಂದಿದ್ದಾರೆ. ಹೆಚ್ಚಿನ ಪರಿಹಾರವನ್ನು ಕೋರಿ ಸಂಸದ ಜೋಶಿ ಮತ್ತು ಧಾರವಾಡ ಗ್ರಾಮೀಣ ಶಾಸಕ ಅಮೃತ್ ದೇಸಾಯಿ ಅವರನ್ನು ಭೇಟಿಯಾಗಲು ಹಲವಾರು ಬಾರಿ ಪ್ರಯತ್ನಿಸಿ ವಿಫಲವಾಗಿದ್ದ ಮಹಿಳೆ ಇಂದು ಸಂಸದರ ಮನೆ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಿಷವನ್ನು ಸೇವಿಸುವ ಮೊದಲು ಮಹಿಳೆ ತನ್ನ ಕಥೆಯನ್ನು ವಿವರಿಸುವ ಡೆತ್ ನೋಟ್ ಸಹ ಬರೆದಿದ್ದಾಳೆ.. ಕಳೆದ 5-6 ತಿಂಗಳುಗಳಿಂದ ಪ್ರಯತ್ನಿಸಿದರೂ ಸಂಸದರನ್ನು ಹುಬ್ಬಳ್ಳಿಯಲ್ಲಿ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅವರನ್ನು ಭೇಟಿಯಾಗಲು ಹೋದಾಗಲೆಲ್ಲಾ ಅವರು ದೆಹಲಿಗೆ ತೆರಳಿದ್ದರು ಎಂದು ಉತ್ತರ ಸಿಕ್ಕಿತ್ತು. ಅವರು ಶಾಸಕ ಅಮೃತ್ ದೇಸಾಯಿ ಅವರನ್ನು ಸಂಪರ್ಕಿಸಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಮತ್ತು ಸಂಸದರನ್ನು ಭೇಟಿ ಮಾಡಲು ಹೇಳಿದ್ದರು. ಅಂತಿಮವಾಗಿ, ಮಂಗಳವಾರ ಮಧ್ಯಾಹ್ನ, ಅವರು ಡೆತ್ ನೋಟ್ ಸಿದ್ಧಪಡಿಸಿದ ಆಕೆ ನಗರದ ಮಯೂರ್ ಎಸ್ಟೇಟ್ ನಲ್ಲಿರುವ ಸಂಸದ ಜೋಶಿಯವರ ಮನೆಗೆ ಭೇಟಿ ನೀಡಿ ವಿಷ ಸೇವಿಸಿ ಸಚಿವರನ್ನು ಸಂಪರ್ಕಿಸಿದ್ದಾರೆ.

ತಾನು ವಿಷ ಕುಡಿದ್ದೇನೆ ಎಂದು ಹೇಳಿಕೊಂಡ ನಂತರ ಸಹಾಯಕ್ಕಾಗಿ ಸಂಸದ ಜೋಶಿಯವರನ್ನು ಮಹಿಳೆ ಬೇಡಿದ್ದಾಳೆ.ಆಕೆಯನ್ನು ಹೊರಗೆ ಕಳುಹಿಸಲು ಕೇಂದ್ರ ಸಚಿವರು ತಮ್ಮ ಸಿಬ್ಬಂದಿಯನ್ನು ಕೇಳಿದ್ದಾರೆ. ಪೊಲೀಸರು ಮಹಿಳೆಯನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಸ್ಥಿತಿ ಗಂಭೀರವಾಗಿದೆ ಆದರೆ, ಈ ಪ್ರಕರಣ ಇನ್ನೂ ಸಂಜೆ ತನಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ.

ಏತನ್ಮಧ್ಯೆ ಕಮ್ಮಾರ ಅವರ ಮನೆ ಭಾಗಶಃ ಕುಸಿದಿದೆ (ಶೇಕಡಾ 25 ಕ್ಕಿಂತ ಕಡಿಮೆ) ಮತ್ತು 'ಸಿ' ವರ್ಗದ ಪರಿಹಾರದ ಅಡಿಯಲ್ಲಿ ಬರುತ್ತದೆ ಎಂದು ಧಾರವಾಡ ತಹಶೀಲ್ದಾರ್ ಪ್ರೆಸ್ ನೋಟ್ ನೀಡಿದ್ದಾರೆ.ಸರ್ಕಾರ ಕಮ್ಮಾರ ಕುಟುಂಬಕ್ಕೆ 50,000 ರೂ. ಪರಿಹಾರ ಒದಗಿಸಿದೆ ಎಂದು ಅದರಲ್ಲಿ ತಿಳಿಸಲಾಗಿದೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp