ಕೊರೋನಾ ಸಮಯದಲ್ಲಿ ಜೆಎಸ್ಎಸ್ ನ 600 ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳಿಗೆ ಪ್ರಮುಖ ಉದ್ಯೋಗ

ಕೊರೋನಾ ಸಮಯದಲ್ಲಿಯೂ ಮೈಸೂರಿನ ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಯ ಹಲವು ಪದವೀಧರ ವಿದ್ಯಾರ್ಥಿಗಳಿಗೆ ಮಹತ್ವದ ನೌಕರಿಗಳು ದೊರಕಿವೆ.

Published: 08th April 2021 10:05 AM  |   Last Updated: 08th April 2021 01:21 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಮೈಸೂರು: ಕೊರೋನಾ ಸಮಯದಲ್ಲಿಯೂ ಮೈಸೂರಿನ ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಯ ಹಲವು ಪದವೀಧರ ವಿದ್ಯಾರ್ಥಿಗಳಿಗೆ ಮಹತ್ವದ ನೌಕರಿಗಳು ದೊರಕಿವೆ.

ವರ್ಷಕ್ಕೆ ಸುಮಾರು 10.5 ಲಕ್ಷ ರು  ವೇತನದೊಂದಿಗೆ 600 ವಿದ್ಯಾರ್ಥಿಗಳಿಗೆ ಉದ್ಯೋದ ಆಫರ್ ಲೆಟರ್ ಸಿಕ್ಕಿದೆ, 

ಜೆಎಸ್ ಎಸ್ ಎಸ್ ಟಿಯು ಪ್ರೊ. ಸಿದ್ದರಾಮಯ್ಯ ಬುಧವಾರ ಮಾಹಿತಿ ನೀಡಿದ್ದು, ಸುಮಾರು 150 ಕಂಪನಿಗಳು ಕ್ಯಾಂಪಸ್ ನೇಮಕಾತಿಯಲ್ಲಿ ಭಾಗವಹಿಸಿದ್ದವು, ಅದರಲ್ಲಿ ನಮ್ಮ ವಿವಿಯ 600 ವಿದ್ಯಾರ್ಥಿಗಳು ನೌಕರಿ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಅರ್ಹ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ, ಅವರಿಗೆ ಆಫರ್ ಲೆಟರ್ ಕೂಡ ಸಿಕ್ಕಿದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ವೇತನ ದೊರಕಿದೆ, ಕಳೆದ ವರ್ಷ ವಾರ್ಷಿಕ 8 ಲಕ್ಷ ವೇತನ ಇದ್ದದ್ದು ಈ ವರ್ಷ 10.5 ಲಕ್ಷಕ್ಕೇರಿದೆ, ಮತ್ತೊಂದು ಆಸಕ್ತಿದಾಯಕ ವಿಷಯವೆಂದರೇ 19 ವಿದ್ಯಾರ್ಥಿಗಳಿಗೆ ವರ್ಷಕ್ಕೆ 27 ಲಕ್ಷ ರು. ವೇತನದ ಆಫರ್ ದೊರಕಿದೆ ಎಂದು ಹೇಳಿದ್ದಾರೆ.

ಪಾಲಿಮರ್ ವಿಜ್ಞಾನ ಶಾಖೆಯ ಬಿಇ ವಿದ್ಯಾರ್ಥಿಗಳನ್ನು ಸಹ ನೇಮಕ ಮಾಡಲಾಗಿದೆ ಮತ್ತು ಈ ಶಾಖೆಗೆ ಶೇಕಡಾ 100 ರಷ್ಟು ಉದ್ಯೋಗವಿದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಜೆಎಸ್‌ಎಸ್‌ಎಸ್‌ಟಿಯು ಮೂರನೇ ಕಾನ್ವೋಕೇಷನ್ ಶುಕ್ರವಾರ ನಗರದಲ್ಲಿ ನಡೆಯಲಿದ್ದು, ಅಲ್ಲಿ 873 ಕ್ಕೂ ಹೆಚ್ಚು ಪದವೀಧರರು, 214 ಎಂ.ಟೆಕ್, 67 ಎಂಸಿಎ, 26 ಎಂ.ಎಸ್ಸಿ ಮತ್ತು 183 ಎಂಬಿಎ ವಿದ್ಯಾರ್ಥಿಗಳು ಪದವಿಗಳನ್ನು ಪಡೆಯಲಿದ್ದಾರೆ.

ಪ್ರೊಫೆಸರ್ ಸಿದ್ದರಾಮಯ್ಯ ಅವರು ಕೋವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಶ್ರೇಣಿಯನ್ನು ಹೊಂದಿರುವವರು ಮಾತ್ರ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮನವಿ ಮಾಡಲಾಗಿದೆ. ರಾಷ್ಟ್ರೀಯ ಮಾನ್ಯತಾ ಮಂಡಳಿಯ ಅಧ್ಯಕ್ಷ ಪ್ರೊ.ಕೆ.ಅಗರ್ವಾಲ್, ಸುತ್ತೂರು ಮಠ ದರ್ಶಕ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ ಮತ್ತು ಇತರರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
 

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp