'ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಅಸಹಾಯಕ; ಜಾತಿ ಆಧಾರಿತ ನಿಗಮಗಳಿಗೆ ನೀಡುವ ಹಣವನ್ನು ನೌಕರರಿಗೆ ಕೊಡಿ'

ರಾಜ್ಯ ಸರ್ಕಾರ ಸದ್ಯ ಇರುವ ಹಣಕಾಸು ಪರಿಸ್ಥಿತಿಯಲ್ಲಿ ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.

Published: 08th April 2021 09:11 AM  |   Last Updated: 08th April 2021 01:20 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಬೆಂಗಳೂರು: ರಾಜ್ಯ ಸರ್ಕಾರ ಸದ್ಯ ಇರುವ ಹಣಕಾಸು ಪರಿಸ್ಥಿತಿಯಲ್ಲಿ ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.

ಶೇ.20 ರಷ್ಟು ವೇತನ ಏರಿಕೆ ಮಾಡುವುದರಿಂದ ಸರ್ಕಾರಕ್ಕೆ 3 ಸಾವಿರ ಕೋಟಿ ರು ಹೊರೆಯಾಗುತ್ತದೆ,ಯಾವುದೇ ಪರಿಷ್ಕರಣೆ ಮಾಡದೇ ಈ ವರ್ಷದ ವೇತನ ಪಾವತಿ ಮಾಡಲು ಸರ್ಕಾರಕ್ಕೆ 5,375 ಕೋಟಿ ರು ಹಣ ಬೇಕಾಗುತ್ತದೆ.

ಮಧ್ಯಂತರ ಕ್ರಮವಾಗಿ ಅವರ ವೇತನವನ್ನು ಶೇಕಡಾ 8 ರಷ್ಟು ಹೆಚ್ಚಿಸಲು ಸರ್ಕಾರ ಮುಂದಾಗಿದೆ ಮತ್ತು ಉಪಚುನಾವಣೆಗಳಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅದನ್ನು ಜಾರಿಗೆ ತರಲು ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಸರ್ಕಾರವು ಅಂದಾಜು ಮಾಡಿದ ಖರ್ಚಿನ ಪ್ರಕಾರ, ಶೇಕಡಾ 8 ರಷ್ಟು ಹೆಚ್ಚಳವು 271.23 ಕೋಟಿ ರೂ.ಗಳ ಹೆಚ್ಚುವರಿ ಹೊರೆಗೆ ಕಾರಣವಾಗುತ್ತದೆ. ಒಟ್ಟು ಹೊರಹೋಗುವಿಕೆಯು 5,646 ಕೋಟಿ ರೂ. ಇದ್ದು  2023 ರ ವೇಳೆಗೆ ಇದು 1,137 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವಾಗಲಿದೆ.

ನೌಕರರ ಬೇಡಿಕೆಯನ್ನು ಸರ್ಕಾರ ಪರಿಗಣಿಸಿದರೆ, ಅದಕ್ಕೆ ಹೆಚ್ಚುವರಿಯಾಗಿ 645 ಕೋಟಿ ರೂ, ಇನ್ಸೆಂಟಿವ್ ಗಾಗಿ 3,500 ಕೋಟಿ ರೂ. ಹಾಗೂ ಇನ್ಸೆಂಟಿವ್ ನೀಡದಿದ್ದರೇ 2,822 ಕೋಟಿ ರು ಹಣ ಬೇಕಾಗುತ್ತದೆ.

ಆದರೆ ಸರ್ಕಾರ ಸದ್ಯ ಇರುವ ಹಣಕಾಸು ಪರಿಸ್ಥಿತಿಯಲ್ಲಿ ಇದು ಸಾಧ್ಯವಾಗದ ಮಾತು, ನಿಗಮಗಳು ನಷ್ಟವನ್ನು ಅನುಭವಿಸುತ್ತಿರುವುದರಿಂದ ಹೆಚ್ಚುವರಿ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಬಗ್ಗೆ ರಾಜ್ಯವು ಸ್ಪಷ್ಟತೆಯನ್ನು ಹೊಂದಿರಬೇಕು,

ಪ್ರಸ್ತುತ ಆದಾಯವು ಸಂಬಳ ಮತ್ತು ಇಂಧನ ವೆಚ್ಚಗಳನ್ನು ಭರಿಸಲು ಸಾಕಾಗುತ್ತಿಲ್ಲ,. ನೌಕರರ ಬೇಡಿಕೆಯನ್ನು ತಿರಸ್ಕರಿಸಿರುವ ಸರ್ಕಾರ ಕಠಿಣ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಿದೆ, ನಿಗಮಗಳು ದಿನಕ್ಕೆ 4 ಕೋಟಿ ರೂ. ನಷ್ಟವನ್ನು ಅನುಭವಿಸುತ್ತಿವೆ, ಆದರೆ ಅದರ
ಹೊರತಾಗಿಯೂ,  ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಸರ್ಕಾರವು ಅವರ ಸಂಬಳವನ್ನು ಸರಿಯಾಗಿ ಪಾವತಿಸಿದೆ ಎಂದು  ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಮಂಗಳವಾರ ಹೇಳಿದ್ದಾರೆ.

ಆದರೆ ಸರ್ಕಾರದ ವಾದವನ್ನು ನೌಕರರು ತಿರಸ್ಕರಿಸದ್ದಾರೆ. ಹಲವು ಜಾತಿ ಆಧಾರಿತ ನಿಗಮಗಳಿಗೇಕೆ ಸರ್ಕಾರ ನೂರಾರು ಕೋಟಿ ರು ಹಣ ನೀಡಿ ಆರ್ಥಿಕ ಮುಗ್ಗಟ್ಟು ತೆಗೆದುಕೊಳ್ಳಬೇಕು ಎಂದು ಕೋಡಿ ಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ. ಅವರ ಪ್ರಕಾರ, ನಿಗಮಗಳ 1.30 ಲಕ್ಷ ಉದ್ಯೋಗಿಗಳಿಗೆ ಅನ್ಯಾಯವನ್ನು ಸರಿಪಡಿಸುವಾಗ ಸರ್ಕಾರ ಪ್ರಸ್ತಾಪಿಸಿದ ಹಣ ಹೆಚ್ಚು ಅಲ್ಲ.

ತಮ್ಮ ಬೇಡಿಕೆಗಳು ಈಡೇರುವವರೆಗೂ ಮುಷ್ಕರವನ್ನು ಮುಂದುವರಿಸುವುದಾಗಿ ಪುನರುಚ್ಚರಿಸಿದ್ದರೂ ಚಂದ್ರಶೇಖರ್ ಅವರು ರಾಜ್ಯ ಸರ್ಕಾರದೊಂದಿಗೆ ಚರ್ಚೆಗೆ ಸಿದ್ದವಾಗಿರುವುದಾಗಿ ಹೇಳಿದ್ದಾರೆ.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp