ಕೋವಿಡ್-19 ಎರಡನೇ ಅಲೆ, ರೋಗಲಕ್ಷಣಗಳಲ್ಲಿ ವ್ಯತ್ಯಾಸ, ತಜ್ಞರು ಏನಂತಾರೆ? 

ಕೋವಿಡ್-19 ಎರಡನೇ ಅಲೆ ಸೃಷ್ಟಿಯಾದ ಮೇಲೆ ರೋಗಿಗಳು ವಿವಿಧ ರೀತಿಯ ಸೋಂಕಿನ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಶ್ವಾಸಕೋಶತಜ್ಞರು ಹೇಳುವ ವಿಷಯಗಳ ಬಗ್ಗೆ ಹಲವು ಮಾಹಿತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಎರಡನೇ ಅಲೆ ಸೃಷ್ಟಿಯಾದ ಮೇಲೆ ರೋಗಿಗಳು ವಿವಿಧ ರೀತಿಯ ಸೋಂಕಿನ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಶ್ವಾಸಕೋಶತಜ್ಞರು ಹೇಳುವ ವಿಷಯಗಳ ಬಗ್ಗೆ ಹಲವು ಮಾಹಿತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಈ ಬಗ್ಗೆ ಕರ್ನಾಟಕದಲ್ಲಿ ಈ ಹೊಸ ಸೋಂಕಿನ ಲಕ್ಷಣಗಳ ಬಗ್ಗೆ ತಮ್ಮದೇ ರೀತಿಯಲ್ಲಿ ವಿವಿಧ ಅಭಿಪ್ರಾಯಗಳನ್ನು ಹೇಳುತ್ತಾರೆ. ಇತ್ತೀಚೆಗೆ ರೋಗಿಗಳು ಕಾಂಜಂಕ್ಟಿವಿಟಿಸ್, ತೀವ್ರವಾದ ಗ್ಯಾಸ್ಟ್ರಿಕ್ ಸಮಸ್ಯೆಗಳು, ಹೊಟ್ಟೆ ನೋವು, ಶ್ರವಣ ದೋಷ, ಕಣ್ಣಿನ ಸಮಸ್ಯೆ ಎಂದು ಹೇಳಿಕೊಂಡು ಆಸ್ಪತ್ರೆಗೆ ಬರುತ್ತಾರೆ.

ಕಣ್ಣು ಕೆಂಪಾಗಿ ಕಾಣಿಸಿಕೊಂಡು ಕಿವಿಯಲ್ಲಿ ಕೂಡ ಸಮಸ್ಯೆಯಾಗುತ್ತಿದೆ, ಸರಿಯಾಗಿ ಕೇಳಿಸುತ್ತಿಲ್ಲ ಎಂದು ಹೇಳಿಕೊಂಡು ಜನರು ಆಸ್ಪತ್ರೆಗೆ ಬರುತ್ತಾರೆ. ಇದನ್ನು ಕೋವಿಡ್-19 ಸೋಂಕಿನ ನಂತರದ ಸಮಸ್ಯೆಗಳಿಗೆ ಸಂಬಂಧ ಕಲ್ಪಸಬಹುದು ಎನ್ನುತ್ತಾರೆ ಸಾಗರ ಆಸ್ಪತ್ರೆಯ ಸಲಹಾ ತಜ್ಞ ಡಾ ಮೋಹನ್ ಜಿ.

ಕೋವಿಡ್ ಎರಡನೇ ಅಲೆಯಲ್ಲಿ ರೋಗಿಗಳಿಗೆ ಉಸಿರಾಟದ ಸಮಸ್ಯೆ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಅನೇಕ ತೊಂದರೆಗಳು ಕಾಣಿಸುತ್ತಿವೆ. ನಾನು ಕೆಲವರಲ್ಲಿ ತೀವ್ರ ಹೊಟ್ಟೆ ನೋವು ನೋಡಿದ್ದರೆ, ಹಲವರು ಅತಿಸಾರ ಮತ್ತು ಹೊಟ್ಟೆಯಲ್ಲಿ ಹಠಾತ್ ಹಿಡಿದಂತಾಗುತ್ತದೆ ಎಂದು ಹೇಳಿಕೊಂಡು ಬರುತ್ತಾರೆ. ಇವು ಹೊಸ ರೋಗಲಕ್ಷಣಗಳಲ್ಲದಿರಬಹುದು, ಆದರೆ ಈ ಹಿಂದೆ ಸುಮಾರು 2 ಪ್ರತಿಶತದಷ್ಟು ರೋಗಿಗಳು ಇದ್ದರು, ಅದು ಈಗ ಶೇಕಡಾ 50ಕ್ಕೆ ಏರಿಕೆಯಾಗಿದೆ ಎನ್ನುತ್ತಾರೆ ಏಸ್ಟರ್ ಆಸ್ಪತ್ರೆಯ ಹಿರಿಯ ತಜ್ಞ ಡಾ. ಬಿಂದುಮಠ ಪಿ ಎಲ್.

ಸೋಷಿಯಲ್ ಮೀಡಿಯಾದಲ್ಲಿ ನಾನು ಕೆಲವು ಸುದ್ದಿಗಳನ್ನು ಓದಿದೆ, ಆದರೆ ಇಲ್ಲಿಯವರೆಗೆ, ಉಡುಪಿಯಲ್ಲಿನ ರೋಗಿಗಳಲ್ಲಿ ನಾವು ಯಾವುದೇ ಹೊಸ ರೋಗಲಕ್ಷಣಗಳನ್ನು ನೋಡಿಲ್ಲ. ಆದಾಗ್ಯೂ, ಜ್ವರವಿಲ್ಲದ ರೋಗಿಗಳ ಪ್ರಕರಣಗಳು ಬಹಳ ಕಡಿಮೆ, ಎಕ್ಸರೆ ಮಾಡಿದಾಗ ಮಧ್ಯಮ ಅಥವಾ ಸೌಮ್ಯ ಪ್ರಮಾಣದಲ್ಲಿ ಎದೆಯ ನ್ಯುಮೋನಿಯಾವನ್ನು ತೋರಿಸುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸುವುದು ಈಗ ಕಷ್ಟ ಎನ್ನುತ್ತಾರೆ ಉಡುಪಿಯ ಡಾ ಟಿಎಂಎ ಪೈ ಆಸ್ಪತ್ರೆಯ ಡಾ ಶಶಿಕಿರಣ್ ಉಮಾಕಾಂತ್.

ಕೊರೋನಾ ಎರಡನೇ ಅಲೆ ತೀವ್ರ ಸೋಂಕಿನದ್ದಾಗಿದ್ದು, ಇದು ಮನುಷ್ಯನ ಶ್ವಾಸಕೋಶಕ್ಕೆ, ಉಸಿರಾಟದ ನಾಳಕ್ಕೆ ಸುಲಭವಾಗಿ ಹರಡಿ ನ್ಯುಮೋನಿಯಾವನ್ನುಂಟು ಮಾಡಬಹುದು, ಕೋವಿಡ್ ಸೋಂಕು ಇನ್ನಷ್ಟು ಹರಡಬಹುದು ಎನ್ನುತ್ತಾರೆ ಕೆಲವು ವೈದ್ಯರು.

ಕೊರೋನಾ ಸೋಂಕು ಕಳೆದ ವರ್ಷ ಬಂದ ಸಂದರ್ಭದಲ್ಲಿ ಕೂಡ ಇಂತಹದ್ದೇ ಲಕ್ಷಣಗಳಿದ್ದವು. ಆದರೆ ಈಗ ಹೆಚ್ಚು ಪರೀಕ್ಷೆ ಮತ್ತು ಜನರಲ್ಲಿ ಅರಿವು, ಜಾಗೃತಿ ಮೂಡಿರುವುದರಿಂದ ನಮಗೆ ಹೆಚ್ಚಾಗಿ ಗೊತ್ತಾಗುತ್ತಿರಬಹುದು. ಅಲ್ಲದೆ, ವೈದ್ಯರಿಗೂ ಕೂಡ ಕೊರೋನಾ ಸೋಂಕಿನ ಲಕ್ಷಣಗಳ ಬಗ್ಗೆ ಹೆಚ್ಚು ಸ್ಪಷ್ಟತೆ ಮೂಡಿರುವುದರಿಂದ ಅಂತಹ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿರಬಹುದು ಎಂದು ಖ್ಯಾತ ಶ್ವಾಸಕೋಶ ತಜ್ಞ ಡಾ ಸತ್ಯನಾರಾಯಣ ಮೈಸೂರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com