ಕೆಲಸಕ್ಕೆ ಮರಳಿದ ಮತ್ತಷ್ಟು ಕೆಎಸ್ಆರ್ಟಿಸಿ ಸಿಬ್ಬಂದಿ: ಮುಷ್ಕರ ಮಾತ್ರ ಅನಿರ್ದಿಷ್ಟಾವಧಿ ಮುಂದುವರಿಕೆ 

ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದ್ದು, ಎರಡನೇ ದಿನವಾದ ನಿನ್ನೆ ಹಲವು ಚಾಲಕರು ಮತ್ತು ನಿರ್ವಾಹಕರು ಕೆಲಸಕ್ಕೆ ಹಾಜರಾಗಿದ್ದರು.
ಬಸ್ ಮುಷ್ಕರ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಕಂಡುಬಂದ ದೃಶ್ಯ
ಬಸ್ ಮುಷ್ಕರ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಕಂಡುಬಂದ ದೃಶ್ಯ

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದ್ದು, ಎರಡನೇ ದಿನವಾದ ನಿನ್ನೆ ಹಲವು ಚಾಲಕರು ಮತ್ತು ನಿರ್ವಾಹಕರು ಕೆಲಸಕ್ಕೆ ಹಾಜರಾಗಿದ್ದರು.

ಕೆಲವು ನೌಕರರು ತಮ್ಮನ್ನು ಒತ್ತಾಯಪೂರ್ವಕವಾಗಿ ಕೆಲಸಕ್ಕೆ ಕರೆಸಿಕೊಂಡಿದ್ದಾರೆ ಎಂದು ಹೇಳಿದರೆ, ಇನ್ನು ಕೆಲವರು ಪ್ರಯಾಣಿಕರು ಸಾಮಾನ್ಯ ಜನತೆ ಕಷ್ಟಪಡುವುದು ನೋಡಲಾರದೆ ಕೆಲಸಕ್ಕೆ ಮರಳಿರುವುದಾಗಿ ಹೇಳಿದ್ದಾರೆ.

ಸಾರಿಗೆ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ, ನಾಲ್ಕೂ ನಿಗಮಗಳಿಗೆ ಸೇರಿದ 446 ಬಸ್ಸುಗಳು ನಿನ್ನೆ ಸಂಚಾರ ಆರಂಭಿಸಿದವು. ಸರ್ಕಾರ ಪ್ರಯಾಣಿಕರಿಗೆ ಬದಲಿ ಸಂಚಾರ ಕ್ರಮವಾಗಿ ಸುಮಾರು 4 ಸಾವಿರದ 412 ಖಾಸಗಿ ಬಸ್ಸುಗಳನ್ನು ರಾಜ್ಯ ರಸ್ತೆ ಸಾರಿಗೆಗೆ ಪಡೆದಿದ್ದು, ಅವುಗಳಲ್ಲಿ 2,188 ವಾಯವ್ಯ ಸಾರಿಗೆಗೆ, 4,278 ಬಸ್ಸುಗಳನ್ನು ಈಶಾನ್ಯ ಸಾರಿಗೆಗೆ ಸೇರಿಸಿಕೊಂಡಿತ್ತು.

ತಮಿಳು ನಾಡಿನಿಂದ 524 ಬಸ್ಸುಗಳು, ಆಂಧ್ರ ಪ್ರದೇಶದಿಂದ 299, ತೆಲಂಗಾಣದಿಂದ 25 ಮತ್ತು ಕೇರಳದಿಂದ 30 ಬಸ್ಸುಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣಿಕರನ್ನು ಹೊತ್ತು ಸಂಚರಿಸಿವೆ.

ಸಾರಿಗೆ ಇಲಾಖೆ ನೌಕರರ ಒಕ್ಕೂಟ ತಮ್ಮ ಬಿಗಿ ಪಟ್ಟನ್ನು ಮುಂದುವರಿಸಿದ್ದು ಅಧಿಕಾರಿಗಳು ಅವರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ನಿನ್ನೆ ಸಭೆ ನಡೆಸಿದ ಒಕ್ಕೂಟ ಮುಷ್ಕರ ಅನಿರ್ದಿಷ್ಟಾವಧಿಗೆ ಮುಂದೂಡುವುದಾಗಿ ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com