ಸಿಬ್ಬಂದಿಗೆ ವೇತನ ನೀಡಲು ನಿಗಮದಲ್ಲಿ ಹಣವಿಲ್ಲ: ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ 

ರಾಜ್ಯದಲ್ಲಿ ಸಾರಿಗೆ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕೊರೋನಾದಿಂದ ಅನಾರೋಗ್ಯ, ಆರ್ಥಿಕ ದುಸ್ಥಿತಿ ಸಮಸ್ಯೆಗಳ ಮಧ್ಯೆ ಸಾರಿಗೆ ಇಲಾಖೆ ನೌಕರರ ಮುಷ್ಕರ ಸಾಮಾನ್ಯ ಜನತೆಗೆ ಮತ್ತು ಸರ್ಕಾರಕ್ಕೆ ಕೂಡ ತಲೆನೋವಾಗಿದೆ.
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ

ಹುಮ್ನಾಬಾದ್(ಬೀದರ್ ಜಿಲ್ಲೆ): ರಾಜ್ಯದಲ್ಲಿ ಸಾರಿಗೆ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕೊರೋನಾದಿಂದ ಅನಾರೋಗ್ಯ, ಆರ್ಥಿಕ ದುಸ್ಥಿತಿ ಸಮಸ್ಯೆಗಳ ಮಧ್ಯೆ ಸಾರಿಗೆ ಇಲಾಖೆ ನೌಕರರ ಮುಷ್ಕರ ಸಾಮಾನ್ಯ ಜನತೆಗೆ ಮತ್ತು ಸರ್ಕಾರಕ್ಕೆ ಕೂಡ ತಲೆನೋವಾಗಿದೆ.

ಈ ಬಗ್ಗೆ ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಮಾತನಾಡಿದ ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಚಾರಕ್ಕೆ ಸಾರಿಗೆಯಿಲ್ಲದೆ ಸಾರ್ವಜನಿಕರು ಇವತ್ತು ಶಾಪ ಹಾಕುತ್ತಿದ್ದಾರೆ. ನೌಕರರು ತಮ್ಮ ಹಠಮಾರಿ ಧೋರಣೆಯಿಂದ ಹೊರಬಂದು ಕೆಲಸಕ್ಕೆ ಹಾಜರಾಗಿ, ಸಂಬಳ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ, ಯಾರದ್ದೋ ಮಾತುಗಳನ್ನು ಕೇಳಿ ಅನಗತ್ಯ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿಕೊಂಡರು.

ಮುಷ್ಕರದಿಂದ ನಿಗಮದಿಂದ ಕೆಲಸ ಕಳೆದುಕೊಂಡರೆ ವಸತಿಗೃಹ ಕೂಡ ನೌಕರರಿಗೆ ಸಿಗುವುದಿಲ್ಲ. ಅವರ ಸಂಸಾರವೇ ಬೀದಿಗೆ ಬರುತ್ತದೆ. ಅನಾವಶ್ಯಕವಾಗಿ ಅಪಪ್ರಚಾರಗಳಿಗೆ, ಒತ್ತಡಗಳಿಗೆ ಒಳಗಾಗದೆ ಕೆಲಸಕ್ಕೆ ಹಾಜರಾಗಿ, ನಾಲ್ಕು ದಿನಗಳಿಂದ ನೌಕರರು ಕೆಲಸಕ್ಕೆ ಬರದೆ ಮುಷ್ಕರ ನಡೆಸಿ ಆದಾಯ ನಿಂತು ಹೋಗಿದೆ, ನೌಕರರಿಗೆ ವೇತನ ನೀಡಲು ನಿಗಮದಲ್ಲಿ ಹಣವಿಲ್ಲ, ಮತ್ತೆ ಸರ್ಕಾರದ ಮುಂದೆ ಕೈಚಾಚಬೇಕು. ಇಂತಹ ಪರಿಸ್ಥಿತಿ ಬಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com