ಏ.20ರೊಳಗೆ ಪಠ್ಯ ಭಾಗಗಳ ಪೂರ್ಣಗೊಳಿಸಿ: ಎಸ್ಎಸ್ಎಲ್'ಸಿ, ಪಿಯುಸಿ ಮಂಡಳಿಗೆ ಸಚಿವ ಸುರೇಶ್ ಕುಮಾರ್ ಸೂಚನೆ

ಏ.20ರೊಳಗೆ ಪಠ್ಯ ಭಾಗಗಳ ಪೂರ್ಣಗೊಳಿಸಿ ಎಂದು ಎಸ್ಎಸ್ಎಲ್'ಸಿ, ಪಿಯುಸಿ ಮಂಡಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶನಿವಾರ ಸೂಚನೆ ನೀಡಿದ್ದಾರೆ. 
ಸುರೇಶ್ ಕುಮರ್
ಸುರೇಶ್ ಕುಮರ್

ಬೆಂಗಳೂರು: ಏ.20ರೊಳಗೆ ಪಠ್ಯ ಭಾಗಗಳ ಪೂರ್ಣಗೊಳಿಸಿ ಎಂದು ಎಸ್ಎಸ್ಎಲ್'ಸಿ, ಪಿಯುಸಿ ಮಂಡಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶನಿವಾರ ಸೂಚನೆ ನೀಡಿದ್ದಾರೆ. 

ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಬಳಿಕ ಮಾತನಾಡಿರುವ ಅವರು, ಪರೀಕ್ಷೆಗಳು ಯೋಜನೆಯಂತೆಯೇ ನಡೆಯಲಿವೆ. ಇದೇ ವೇಳೆ ಸರ್ಕಾರ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ. ಮೇ.24 ರಂದು ಪಿಯುಸಿ ಪರೀಕ್ಶೆ ಹಾಗೂ ಜೂ.21ರಿಂದ ಎಸ್ಎಸ್ಎಲ್'ಸಿ ಪರೀಕ್ಷೆಗಳು ನಡೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. 

ಇದೇ ವೇಳೆ ಪುನರಾವರ್ತನೆ ಮಾಡಲು ಮಕ್ಕಳಿಗೆ ಕಾಲಾವಕಾಶ ಬೇಕಿದ್ದು,  ಏಪ್ರಿಲ್ 20ರೊಳಗೆ ಎಲ್ಲಾ ಪಠ್ಯಭಾಗಗಳನ್ನು ಪೂರ್ಣಗೊಳಿಸುವಂತೆಯೂ ಎಸ್ಎಸ್ಎಲ್'ಸಿ, ಪಿಯುಸಿ ಮಂಡಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಪರೀಕ್ಷಾ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಪ್ರತೀನಿತ್ಯ ಶಾಲಾ ಕೊಠಡಿಗಳಲ್ಲಿ ಸ್ಯಾನಿಟೈಸ್ ಮಾಡುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ತಮ್ಮ ತಮ್ಮ ಶಾಲೆಗಳ ಫಲಿತಾಂಶ ಉತ್ತಮವಾಗಿ ಬರಲುವಂತೆ ಮಾಡಲು ಹಚ್ಚಿನ ಗಮನ ನೀಡುವಂತೆ ಶಿಕ್ಷಕರಿಗೆ ಮನವಿ ಮಾಡಿಕೊಂಡಿದ್ದಾರೆ. ಶಾಲೆಗಳಲ್ಲಿ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com