ಬಿಜೆಪಿ vs ಬಿಜೆಪಿ: ಹೆಲಿ ಟೂರಿಸಂ ವಿಚಾರದಲ್ಲಿ ಯೋಗೇಶ್ವರ್ ವಿರುದ್ಧ ಪ್ರತಾಪ್ ಸಿಂಹ ಕಿಡಿಕಿಡಿ!

ಹೆಲಿ ಟೂರಿಸಂ ವಿಚಾರದಲ್ಲಿ ಬಿಜೆಪಿಯೊಳಗೆ ಆಂತರಿಕ ಸಂಘರ್ಷವೇರ್ಪಟ್ಟಿದೆ. ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಕಿಡಿಕಾರಿರುವ ಸಂಸದ ಪ್ರತಾಪ್ ಸಿಂಹ, ಲಲಿತಾ ಮಹಲ್ ಅರಮನೆ ಆವರಣದಲ್ಲಿ ಹೆಲಿ ಟೂರಿಸಂಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಪ್ರತಾಪ್ ಸಿಂಹ
ಪ್ರತಾಪ್ ಸಿಂಹ

ಮೈಸೂರು: ಹೆಲಿ ಟೂರಿಸಂ ವಿಚಾರದಲ್ಲಿ ಬಿಜೆಪಿಯೊಳಗೆ ಆಂತರಿಕ ಸಂಘರ್ಷವೇರ್ಪಟ್ಟಿದೆ. ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಕಿಡಿಕಾರಿರುವ ಸಂಸದ ಪ್ರತಾಪ್ ಸಿಂಹ, ಲಲಿತಾ ಮಹಲ್ ಅರಮನೆ ಆವರಣದಲ್ಲಿ ಹೆಲಿ ಟೂರಿಸಂಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಹೆಲಿಟೂರಿಸಂ ಯೋಜನೆಯ ಉದ್ದೇಶವನ್ನು ಪ್ರಶ್ನಿಸಿರುವ ಪ್ರತಾಪ್ ಸಿಂಹ, ಪ್ರವಾಸೋದ್ಯಮ ಇಲಾಖೆ ಪ್ರಚಾರದ ಉದ್ದೇಶದಿಂದ ಬಣ್ಣ ಬಣ್ಣದ ಕಾಗೆ ಹಾರಿಸಬಾರದು ಎಂದು ಟಾಂಗ್ ನೀಡಿದ್ದಾರೆ.

ಹೆಲಿ ಟೂರಿಸಂಗಾಗಿ ಮರಗಳನ್ನು ಕಡಿಯುವುದರ ವಿರುದ್ಧ ಧ್ವನಿಗಳು ಕೇಳಿಬರುತ್ತಿರುವಂತೆಯೇ ಪ್ರತಾಪ್ ಸಿಂಹ ಈ ಹೇಳಿಕೆಯನ್ನು ನೀಡಿದ್ದಾರೆ. ಮರ ಕಡಿಯುವುದರ ವಿರುದ್ಧ ಮೈಸೂರು ರಕ್ಷಿಸಿ ಹ್ಯಾಷ್ ಟ್ಯಾಗ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸುವ ಮೂಲಕ ಮರ ಕಡಿಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪ್ರತಾಪ್ ಸಿಂಹ, ಕೆಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಪಾರ್ಕ್ ಸೇರಿದಂತೆ  ಯಾವುದೇ ಸೂಕ್ತ ಯೋಜನೆ ಇಲ್ಲದೆ, ಯೋಜನೆಗಳನ್ನು ಘೋಷಿಸುವುದು ಪ್ರವಾಸೋದ್ಯಮ ಸಚಿವರ ವಾಡಿಕೆಯಾಗಿದೆ. ಅವರು ಸಭೆಗಳನ್ನು ನಡೆಸಿ, ಯಾವುದೇ ಯೋಜನೆ ಇಲ್ಲದೆ ಗಮನ ಸೆಳೆಯಲು ಯೋಜನೆಗಳನ್ನು ಘೋಷಿಸುತ್ತಾರೆ.  ಹೊಸ ಸಚಿವರು ಬಂದಾಗ ಈ ಪ್ರಕ್ರಿಯೆಯನ್ನು ಪುನರಾವರ್ತಿಸಲಾಗುತ್ತದೆ. ಪ್ರವಾಸೋದ್ಯಮ ಇಲಾಖೆಗೆ ಸರಿಯಾದ ಯೋಜನೆ ಇಲ್ಲ.  ಪ್ರಸಾದ್ ನಂತಹ ಕೇಂದ್ರ ಸರ್ಕಾರದ ಯೋಜನೆಗೆ ಕೋಟ್ಯಂತರ ರೂಪಾಯಿ ನಿಧಿ ಇದ್ದರೂ ಅದು ಖರ್ಚಾಗದೆ ಹಾಗೆಯೇ ಉಳಿದಿದೆ ಎಂದರು.

ಮರಗಳನ್ನು ಕಡಿಯಲು ಅನುಮತಿ ನೀಡದಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ದೇಶಿಸಿದ ಪ್ರತಾಪ್ ಸಿಂಹ, ಪ್ರವಾಸೋದ್ಯಮ ಇಲಾಖೆಗೆ ಇದು ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಅಲ್ಲ, ಇದನ್ನು ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧರಿಸಬೇಕಾಗುತ್ತದೆ ಎಂದು ಅವರು ಹೇಳಿದರು. 

ಹೆಲಿ ಟೂರಿಸಂಗೆ ಯಾವುದೇ ವಿಷನ್ ಡಾಕ್ಯುಮೆಂಟ್ ಇಲ್ಲ , ಕಾರವಾರದಂತಹ ನಗರಕ್ಕೆ ಹೋಗಲು ಜನರು ಹೆಲಿಕಾಪ್ಟರ್ ಗೆ ಮೈಸೂರಿಗೆ ಬರುವುದಿಲ್ಲ,  ಎಂದು ಹೇಳಿದ ಪ್ರತಾಪ್ ಸಿಂಹ, ಇಲ್ಲವಾದರೆ,  ಬನ್ನಿ ವಿಮಾನ ನಿಲ್ದಾಣದಲ್ಲಿ ಜಾಗ ಕೊಡುತ್ತೇವೆ.ರಾಜವಂಶಸ್ಥರಿಗೆ ಸೇರಿದ ಹೆಲಿಪ್ಯಾಡ್ ಇದ್ದು, ಅದನ್ನು ಬಾಡಿಗೆ ಅಥವಾ ಬೋಗ್ಯಕ್ಕೆ ಕೇಳಿದರೆ ಕೊಡಲ್ಲ ಅಂತಾರಾ ಎಂದು ಪ್ರತಾಪ್ ಸಿಂಹ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com