ಕೊರೋನಾ 2ನೇ ಅಲೆ ನಡುವೆ ಯುಗಾದಿ; ಹೊಸ ತಡಕಿಗೆ ಪಾಪಣ್ಣ ಮಟನ್ ಸ್ಟಾಲ್ ಸರ್ವ ಸನ್ನದ್ಧ!

ಮಾರಕ ಕೊರೋನಾ ವೈರಸ್ ನ 2ನೇ ಅಲೆಯ ನಡುವೆಯೇ ಯುಗಾದಿ ಸಂಭ್ರಮ ಗರಿಗೆದರಿದ್ದು, ಇತ್ತ ಹೊಸ ತಡಕಿಗೆ ಗ್ರಾಹಕರಿಗೆ ಮಟನ್ ಮಾರಾಟ ಮಾಡಲು ಪಾಪಣ್ಣ ಮಟನ್ ಸ್ಟಾಲ್ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.
ಪಾಪಣ್ಣ ಮಟನ್ ಸ್ಟಾಲ್
ಪಾಪಣ್ಣ ಮಟನ್ ಸ್ಟಾಲ್

ಬೆಂಗಳೂರು: ಮಾರಕ ಕೊರೋನಾ ವೈರಸ್ ನ 2ನೇ ಅಲೆಯ ನಡುವೆಯೇ ಯುಗಾದಿ ಸಂಭ್ರಮ ಗರಿಗೆದರಿದ್ದು, ಇತ್ತ ಹೊಸ ತಡಕಿಗೆ ಗ್ರಾಹಕರಿಗೆ ಮಟನ್ ಮಾರಾಟ ಮಾಡಲು ಪಾಪಣ್ಣ ಮಟನ್ ಸ್ಟಾಲ್ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.

ಯುಗಾದಿಯ ನಂತರದ ದಿನ, ಮಟನ್ ಸ್ಟಾಲ್‌ಗಳ ಹೊರಗೆ ಜನರು ಸರತಿ ಸಾಲಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಾರೆ. ಪ್ರಮುಖವಾಗಿ ದಕ್ಷಿಣ ಕರ್ನಾಟಕದಲ್ಲಿ ವರ್ಷಾ ತಡಕನ್ನು ಮಾಂಸಾಹಾರಿ ಭಕ್ಷ್ಯಗಳ ಮೂಲಕ ಹಬ್ಬ ಆಚರಿಸುವುದು ಸಂಪ್ರದಾಯವಾಗಿದೆ. ಇತ್ತ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ  ಪಾಪಣ್ಣ ಮಟನ್ ಸ್ಟಾಲ್ ನಲ್ಲಿ ಮಟನ್ ಖರೀದಿಸುವವರ ಸಂಖ್ಯೆ ಹೆಚ್ಚು. ಬೆಂಗಳೂರಿನ ಮೂಲೆ ಮೂಲೆಗಳಿಂದಲೂ ಜನ ಸರತಿ ಸಾಲಲ್ಲಿ ನಿಂತು ಮಟನ್ ಖರೀದಿಸುತ್ತಾರೆ. ಉತ್ತಮ ಗುಣಮಟ್ಟದ ಮತ್ತು ತಾವು ಕೇಳಿದಂತೆ ಮಟನ್ ನೀಡುತ್ತಾರೆ ಎಂಬ ಕಾರಣಕ್ಕೆ ಬೆಲೆ ಕೊಂಚ ಹೆಚ್ಚಾದರೂ ಗ್ರಾಹಕರು ಇಲ್ಲಿ ಸರತಿ  ಸಾಲಲ್ಲಿ ನಿಂತು ಮಟನ್ ಖರೀದಿಸುತ್ತಾರೆ. 

ಮಟನ್ ಖರೀದಿ ಮೇಲೆ ಕೊರೋನಾ 2ನೇ ಅಲೆ ಕರಿ ನೆರಳು
ಇತ್ತ ಹೊಸ ತಡಕಿಗೆ ಕೊರೋನಾ 2ನೇ ಅಲೆ ಹೊಸ ತೊಡಕಾಗಿ ಪರಿಣಮಿಸಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿಯೇ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇತ್ತ ಪಾಪಣ್ಣ ಮಟನ್ ಸ್ಟಾಲ್ ಸಿಬ್ಬಂದಿ ಗ್ರಾಹಕರು ಮತ್ತು ವ್ಯಾಪರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ  ಮುಂಜಾಗ್ರತೆ ವಹಿಸಿ ಸಕಲ ರೀತಿಯ ಸಿದ್ಧತೆ ನಡೆಸಿದ್ದಾರೆ. ಸುಮಾರು 74 ವರ್ಷಗಳ ಇತಿಹಾಸವಿರುವ ಪಾಪಣ್ಣ ಮಟನ್ ಸ್ಟಾಲ್ ನಲ್ಲಿ ಇದೀಗ ಮೂರನೇ ತಲೆಮಾರಿಗೂ ಮುಂದುವರೆದುಕೊಂಡು ಬಂದಿದೆ. ಪ್ರಸ್ತುತ ಪಾಪಣ್ಣ ಅವರ ಮೊಮ್ಮಗ ರೋಹಿತ್ ಅಂಗಡಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.ಕೋವಿಡ್  ಸಾಂಕ್ರಾಮಿಕದ ಈ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ನಾಳೆ ಮುಂಜಾನೆ 5ರಿಂದ ವ್ಯಾಪಾರ ಆರಂಭವಾಗಲಿದೆ. 

ಆಯ್ದ ಮತ್ತು ಉತ್ತಮ ಗುಣಮಟ್ಟದ ಕುರಿಗಳ ಬಳಕೆ
ಪಾಪಣ್ಣ ಮಟನ್ ಸ್ಟಾಲ್ ಗೆ ಜನ ಏಕೆ ಮುಗಿಬಿದ್ದು ಮಾಂಸ ಖರೀದಿ ಮಾಡುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿ ಗುಣಮಟ್ಟಕ್ಕಷ್ಟೇ ಬೆಲೆ. ಆಯ್ದ ಮತ್ತು ಉತ್ತಮ ಗುಣಮಟ್ಟದ ಕುರಿಗಳನ್ನು ಮಾತ್ರ ಬಳಕೆ ಮಾಡಲಾಗುತ್ತದೆ. ಇಲ್ಲಿನ ಸಿಬ್ಬಂದಿಗಳು ಕುರಿಗಳನ್ನು ಕನಕಪುರ, ರಾಮನಗರ, ಗೌರಿಬಿದನೂರು ಮತ್ತು ಮಾಗಡಿಯಿಂದ  ಆರಿಸಿ ತರುತ್ತಾರೆ. ಪ್ರತಿ ವರ್ಷ ಈ ದಿನ ಸರಾಸರಿ 1,500 ಕಿಲೋ ಮಟನ್ ಅನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. 

ಈ ಬಗ್ಗೆ ಮಾತನಾಡಿರುವ ಅಂಗಡಿ ಸಿಬ್ಬಂದಿ ಮಣಿ ಅವರು, 'ನಾವು ಸಾಮಾನ್ಯವಾಗಿ ಬೆಳಿಗ್ಗೆ 4 ಗಂಟೆಗೆ ಅಂಗಡಿ ತೆರೆಯುತ್ತೇವೆ, ಆದರೆ ಈ ವರ್ಷ ರಾತ್ರಿ ಕರ್ಫ್ಯೂ ಕಾರಣ ನಾವು ಬೆಳಿಗ್ಗೆ 5 ಗಂಟೆಗೆ ತೆರೆಯುತ್ತೇವೆ. ನಮ್ಮಲ್ಲಿ 24 ಸಿಬ್ಬಂದಿ ಇದ್ದು, ಅವರೆಲ್ಲರನ್ನೂ ಪರೀಕ್ಷಿಸಲಾಗಿದೆ. ನಾವು ಸಾಮಾಜಿಕ ಅಂತರ  ಕಾಪಾಡಿಕೊಂಡು ವ್ಯಾಪಾರ ಮಾಡುತ್ತೇವೆ. ಹ್ಯಾಂಡ್ ಸ್ಯಾನಿಟೈಸರ್ ಅನ್ನು ಸಿದ್ಧವಾಗಿರಿಸಿದ್ದೇವೆ ಮತ್ತು ‘ಮಾಸ್ಕ್ ಇಲ್ಲ, ಮಟನ್ ಇಲ್ಲ’ ಎಂದು ಬೋರ್ಡ್ ಕೂಡ ಹಾಕಿದ್ದೇವೆ. ಈ ವರ್ಷ, ಸಾಂಕ್ರಾಮಿಕ ರೋಗದಿಂದಾಗಿ ಅನೇಕರು ಮಟನ್‌ ನ ಹೋಮ್ ಡೆಲಿವರಿ ಮಾಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ನಾವು ಬುಧವಾರ  ನಮ್ಮಿಂದ ಮಟನ್ ತೆಗೆದುಕೊಳ್ಳಲು ಆ್ಯಪ್ ಆಧಾರಿತ ವಿತರಣಾ ಸೇವೆಗಳಿಗೆ ಅವಕಾಶ ನೀಡುತ್ತಿದ್ದೇವೆ ಎಂದು ಹೇಳಿದರು.

ಗುಣಮಟ್ಟ ಮತ್ತು ರುಚಿ ನಮ್ಮ ಅಂಗಡಿಯ ವಿಶೇಷ..ಈ ಹಿಂದೆ, ಮಂಡ್ಯ ಜಿಲ್ಲೆಯ ಬಂಡೂರ್ ಗ್ರಾಮದಿಂದ ‘ಬನ್ನೂರು ಕುರಿ’ ಅಥವಾ ಕೊಬ್ಬಿನ ಮಾಂಸಕ್ಕೆ ಹೆಸರುವಾಸಿಯಾದ ಸಣ್ಣ ಕೊಬ್ಬಿದ ಕುರಿಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ ಈಗ ಜನರು ಆರೋಗ್ಯ ಪ್ರಜ್ಞೆ ಹೊಂದಿದ್ದಾರೆ ಮತ್ತು ಕಡಿಮೆ ಕೊಬ್ಬಿನ ಮಟನ್‌ಗೆ  ಆದ್ಯತೆ ನೀಡುತ್ತಾರೆ. ನಾವು ನಮ್ಮ ಕುರಿಗಳನ್ನು ಗೌರಿಬಿದನೂರು ಮತ್ತು ಕನಕಪುರದಿಂದ ಖರೀದಿಸಿ ತರುತ್ತೇವೆ. ಉತ್ತಮ ರುಚಿ ಇರುವುದರಿಂದ ತೂಕ ಕಡಿಮೆ ಇರುವ ಕುರಿಗಳನ್ನು ಖರೀದಿಸಲು ಅವರು ಬಯಸುತ್ತಾರೆ. ಮಟನ್ ಸಾಮಾನ್ಯ ದಿನದಲ್ಲಿ ಪ್ರತಿ ಕಿಲೋಗೆ 600 ರಿಂದ 650 ರೂ.ಗಳಷ್ಟಿದ್ದರೆ, ಯುಗಾದಿಯ  ನಂತರದ ದಿನದಂದು ಬೆಲೆ 750 ರೂ.ನಿಂದ 780 ರೂ.ಗೆ ಏರುತ್ತದೆ ಎಂದು ಮಣಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com