ಕೊರೋನಾ ಉಲ್ಬಣದ ನಡುವೆ ಒಕ್ಕಲಿಗರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಸದಸ್ಯರಲ್ಲಿ ಆತಂಕ

ಒಕ್ಕಲಿಗರ ಸಂಘಕ್ಕೆ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು ಸಂಘವು ಸೋಮವಾರ ತನ್ನ ವೆಬ್‌ಸೈಟ್‌ನಲ್ಲಿ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಅಲ್ಲದೆ ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸುವಂತೆ ಮತದಾರರನ್ನು ಮನವಿ ಮಾಡಿದೆ. ಆದರೆ ಕೋವಿಡ್ ಸೋಂಕು ತಾರಕ್ಕೇರಿರುವ ಈ ಸಮಯದಲ್ಲಿ ಸಂಘವು ತನ್ನ ಮೇ 16 ರ ಚುನಾವಣೆಯನ್ನು ಹೇಗೆ ನಡೆಸಲಿದೆ ಎನ್ನುವುದು ಪ್ರಶ್ನೆಯಾಗಿ
ಒಕ್ಕಲಿಗರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್
ಒಕ್ಕಲಿಗರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್

ಬೆಂಗಳೂರು: ಒಕ್ಕಲಿಗರ ಸಂಘಕ್ಕೆ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು ಸಂಘವು ಸೋಮವಾರ ತನ್ನ ವೆಬ್‌ಸೈಟ್‌ನಲ್ಲಿ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಅಲ್ಲದೆ ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸುವಂತೆ ಮತದಾರರನ್ನು ಮನವಿ ಮಾಡಿದೆ. ಆದರೆ ಕೋವಿಡ್ ಸೋಂಕು ತಾರಕ್ಕೇರಿರುವ ಈ ಸಮಯದಲ್ಲಿ ಸಂಘವು ತನ್ನ ಮೇ 16 ರ ಚುನಾವಣೆಯನ್ನು ಹೇಗೆ ನಡೆಸಲಿದೆ ಎನ್ನುವುದು ಪ್ರಶ್ನೆಯಾಗಿ ಕಾಡುತ್ತಿದೆ.

ಚುನಾವಣೆಯನ್ನು ನಡೆಸುವುದರಿಂದ ಇಡೀ ಒಕ್ಕಲಿಗ ಸಮುದಾಯವನ್ನು ಅಪಾಯಕ್ಕೆ ಸಿಲುಕಿಸಿದಂತಾಗಬಹುದು ಎಂದು ಸದಸ್ಯರು ಆತಂಕ ಹೊರಹಾಕಿದ್ದಾರೆ.ಕೆಲವು ಸದಸ್ಯರು ಪ್ರಚಾರದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮಗಳ ಮೊರೆಹೋಗಿದ್ದಾರೆ.

ಗುರುತಿನ ಚೀಟಿಯಲ್ಲಿ ತಪ್ಪಿದ್ದವರು ಅಥವಾ ಗುರುತು ಚೀಟಿ ಕಳೆದುಹೋದವರು ಮೇ 5 ರೊಳಗೆ ಅವುಗಳನ್ನು ಸಂಗ್ರಹಿಸಬೇಕಾಗಿದೆ ಎಂದು ಶಿಕ್ಷಣ ಸಂಸ್ಥೆಗಳು ಮತ್ತು ಕಲ್ಯಾಣ ಕೇಂದ್ರಗಳನ್ನು ನಡೆಸುತ್ತಿರುವ ಸಂಘ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ ನಿರ್ದೇಶಕ ಮತ್ತು ಕರ್ನಾಟಕ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯ ಡಾ.ಮಂಜುನಾಥ್ ಈ ಸಮಯವನ್ನು "ಅತೀತ" ಎಂದು ಪರಿಗಣಿಸಿ ಚುನಾವಣೆಯನ್ನು ಮುಂದೂಡಬೇಕು. ಈ ಸಮಯದಲ್ಲಿ ಚುನಾವಣೆಗಳನ್ನು ನಡೆಸುವುದು ಸುರಕ್ಷಿತವಲ್ಲ. ರಾಜ್ಯದಲ್ಲಿ ಉಪಚುನಾವಣೆ ಮತ್ತು ಚುನಾವಣೆ ನಡೆಸುವುದು ಅತ್ಯಂತ ಅಪಾಯಕಾರಿ ಎಂದು ನಾನು ಹೇಳುತ್ತೇನೆ ಎಂದರು.

ಸಂಘದ ಪ್ರಮುಖ ಸದಸ್ಯರಾದ ಕೆ ವಿ ಚಂದ್ರಶೇಖರ್ ಅವರು ಈಗ ಚುನಾವಣೆ ನಡೆಸುವುದು ಸುರಕ್ಷಿತವೇ ಎಂದು ಕೇಳಲು ಸಾಮಾಜಿಕ ಮಾಧ್ಯಮಗಳ ಮೊರೆ ಹೋಗಿದ್ದಾರೆ. ಕೋವಿಡ್ ಹೆಚ್ಚುತ್ತಿದೆ.ಎಂದು ಪರಿಗಣಿಸಿ ಪ್ರಕ್ರಿಯೆಯನ್ನು ಮುಂದೂಡಲು ಸಾಧ್ಯವಾಗದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಹಿರಿಯ ಐಎಎಸ್ ಅಧಿಕಾರಿ (ನಿವೃತ್ತ) ತಿಮ್ಮೆ ಗೌಡ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜತೆ ಮಾತನಾಡಿ "ಒಕ್ಕಲಿಗರ ಸಂಘವು ಲಕ್ಷಾಂತರ ಸದಸ್ಯರನ್ನು ಹೊಂದಿರುವ ಸಂಸ್ಥೆಯಾಗಿದೆ, ಮತ್ತು ಜಿಲ್ಲೆಗಳಲ್ಲಿ ಹೆಚ್ಚಿನ ಉಪಸ್ಥಿತಿಯನ್ನು ಹೊಂದಿದೆ. , ಪ್ರಚಾರ, ದೊಡ್ಡ ಸಭೆಗಳು ಮತ್ತು ಆಕಾಂಕ್ಷಿಗಳ ಮನೆ ಮನೆ ಭೇಟಿ ಇರಬಹುದು. ಇದು ಸದಸ್ಯರನ್ನು ಅಪಾಯಕ್ಕೆ ಸಿಲುಕಿಸಬಾರದು ಮತ್ತು ತಜ್ಞರು ಮೇ ಮಧ್ಯದಲ್ಲಿ ಕೋವಿಡ್ ಸೋಂಕು ತನ್ನ ಮೇರುಸ್ಥಿತಿ ತಲುಪಲಿದೆ ಎಂದಿದ್ದಾರೆ ಹಾಗಾಗಿ ಚುನಾವಣೆಯನ್ನು ಒಂದು ತಿಂಗಳವರೆಗೆ ಅಥವಾ ಪರಿಸ್ಥಿತಿ ಸುಧಾರಿಸುವವರೆಗೆ  ಮುಂದೂಡುವುದು ಉತ್ತಮ" ಎಂದರು.

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮುಂದೂಡಿಕೆ?

 ಪ್ರತಿ ಐದು ವರ್ಷಗಳಿಗೊಮ್ಮೆ ರಾಜ್ಯ ಮತ್ತು ಜಿಲ್ಲಾ ಘಟಕಗಳಿಗೆ ನಡೆಯುವ  ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸಹ ಇದೇ ಮೇ 9 ರಂದು ಇದ್ದು ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಈ ಚುನಾವಣೆಯನ್ನೂ ಮುಂದೂಡಬೇಕೇ ಎಂಬ ಆತಂಕ ಕೆಲವು ಭಾಗಗಳಲ್ಲಿ ಇದೆ. ಪರಿಷತ್ತು ರಾಜ್ಯಾದ್ಯಂತ 3.1 ಲಕ್ಷ ಸದಸ್ಯರನ್ನು ಹೊಂದಿದ್ದು, ಚುನಾವಣೆಯ ಸಭೆಗಳು ಈಗಾಗಲೇ ಪ್ರಾರಂಭವಾಗಿವೆ.

ಆದರೆ ಈ ಚುನಾವಣೆಯನ್ನು ಮುಂದೂಡಬೇಕು ಎಂದು ತಜ್ಞರ ಅಭಿಪ್ರಾಯವಿದೆ. ಬೆಂಗಳೂರಿನ 28 ಕ್ಷೇತ್ರಗಳು ಮತ್ತು ಅನೆಕಲ್ ನಲ್ಲಿ 39,000 ಸದಸ್ಯರು ಮತ್ತು ಮಂಡ್ಯದಲ್ಲಿ 24,000 ಸದಸ್ಯರು ಇದ್ದಾರೆ ಎಂಬುದನ್ನು ಗಮನಿಸಿ ಚುನಾವಣೆಯನ್ನು ಮುಂದೂಡುವುದು ಸರಿಯಾದ ಮಾರ್ಗ ಎಂದು ಹಲವರು ಭಾವಿಸುತ್ತಾರೆ. ಆದರೆ ಹೆಚ್ಚಿನ ಜಿಲ್ಲೆಗಳಲ್ಲಿ 10,000 ಕ್ಕಿಂತ ಕಡಿಮೆ ಸದಸ್ಯರಿದ್ದಾರೆ ಮತ್ತು ಚುನಾಯಿತರಾಗಲು ಬಯಸುವವರು ಸಭೆಗಳನ್ನು ಬಿಡುವುಲ್ಲದಂತೆ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com