ಕೊರೋನಾ ಎಫೆಕ್ಟ್: ಈ ವರ್ಷ ಕೂಡ ಜಾಗತಿಕ ಹೂಡಿಕೆದಾರ ಸಭೆ ನಡೆಯುವ ಸಾಧ್ಯತೆ ಕಡಿಮೆ!

ಹೆಚ್ಚುತ್ತಿರುವ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷವೂ ಕೂಡ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೆಚ್ಚುತ್ತಿರುವ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷವೂ ಕೂಡ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ. 

ಜಾಗತಿಕ ಹೂಡಿಕೆದಾರರ ಸಭೆ ಆಯೋಜಿಸಲು ಸುಮಾರು ಆರು ತಿಂಗಳ ಸಮಾಯಾವಕಾಶ ಬೇಕಾಗಲಿದೆ, ಪ್ರಪಂಚದ ಎಲ್ಲಾ ರಾಷ್ಟ್ರಗಳ ಹೂಡಿಕೆದಾರರು ಭಾಗವಹಿಸುವ ನಿರೀಕ್ಷೆಯಿರುತ್ತದೆ, ಕೊನೆಯ ಬಾರಿ 2016 ರಲ್ಲಿಸಭೆ ಆಯೋಜಿಸಲಾಗಿತ್ತು, ಮುಂದ 2022 ರಲ್ಲಿ ಜಾಗತಿಕ ಹೂಡಿಕೆದಾರರ ಸಭೆ ನಡೆಯುವ ಸಾಧ್ಯತೆಯಿದೆ.

ಈ ಹಿಂದೆ ರಾಜ್ಯ ಸರ್ಕಾರ 2020ರ ನವೆಬರ್ 3 ರಂದು ಜಾಗತಿಕ ಹೂಡಿಕೆದಾರರ ಸಭೆ ಆಯೋಜಿಸಿತ್ತು,  ಆದರೆ ಕೊರೋನಾ ಸಾಂಕ್ರಾಮಿಕದಿಂದಾಗಿ ಅದನ್ನು ರದ್ಧುಗೊಳಿಸಿತು. 

ಸಂಘಟಕರಾಗಿ, ನಾವು ಭಾರತದ ಮತ್ತು ಹೊರಗಿನ ಎಲ್ಲಾ ಮೆಟ್ರೋ ನಗರಗಳಲ್ಲಿ ರೋಡ್ ಶೋಗಳನ್ನು ನಡೆಸುತ್ತೇವೆ, ಹೂಡಿಕೆದಾರರನ್ನು ಆಕರ್ಷಿಸುತ್ತೇವೆ ಮತ್ತು ಆಹ್ವಾನಿಸುತ್ತೇವೆ. ಆದರೆ ಕೊರೋನಾ ಎರಡನೇ ತರಂಗದೊಂದಿಗೆ, ನಾವು ಇತರ ದೇಶಗಳಿಗೆ ಪ್ರಯಾಣಿಸಲು ಅಥವಾ ಇತರ ನಗರಗಳಲ್ಲಿ ರೋಡ್ ಶೋಗಳನ್ನು ಆಯೋಜಿಸಲು ಸಾಧ್ಯವಿಲ್ಲ. ಜೊತೆಗೆ ಕಾರ್ಯಕ್ರಮ ಆಯೋಜಿಸಲು ಸುಮಾರು ಆರು ತಿಂಗಳ ಕಾಲ ಬೇಕಾಗಿದೆ. ಮೇ ತಿಂಗಳಲ್ಲಿ ಮತ್ತಷ್ಟು ಸೋಂಕು ಹೆಚ್ಚಾಗುವ ಸಾಧ್ಯತೆಯಿರುವ ಕಾರಣ ಈ ವರ್ಷವೂ ಕೂಡ ಸಭೆ ಆಯೋಜಿಸಲು ಸಾಧ್ಯವಾಗುವುದಿಲ್ಲ ಎಂದು ಕೈಗಾರಿಕೆ ಮತ್ತು ವಾಣಿಜ್ಯ  ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ.

2000ನೇ ಇಸವಿಯಲ್ಲಿ ಮೊದಲ ಬಾರಿಗೆ ಸಭೆ ನಡೆಸಲಾಗಿತ್ತು,ಅದಾದ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 10 ವರ್ಷದ ನಂತರ 2ನೇ ಬಾರಿಗೆ ನಡೆಯಿತು,  2012 ರಲ್ಲಿ ಮೂರನೇ ಸಭೆ ಹಾಗೂ ಕೊನೆಯದಾಗಿ 2016 ರಲ್ಲಿ ಸಮಾವೇಶ ನಡೆದಿತ್ತು.  ಅದಾದ ನಂತರ ಹಲವು ಕಾರಣಗಲಿಂದಾಗ ಹೂಡಿಕೆಗಾರರ ಸಭೆ ನಡೆಸಲಾಗಲಿಲ್ಲ,  2020 ರಲ್ಲಿ ಸರ್ಕಾರ ಸಭೆ ನಡೆಸಲು ಯೋಜಿಸಿತ್ತಾದರೂ ಸಾಧ್ಯವಾಗಲಿಲ್ಲ,

2020 ರ ನವೆಂಬರ್ ಅಥವಾ 2021 ರ ಪೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಭೆ ನಡೆಸಲು ಚಿಂತಿಸಿದ್ದೆವು, ಆದರೆ ಸಾಧ್ಯವಾಗಲಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.  ಕೋವಿಡ್ ಕಾರಣದಿಂದಾಗಿ ಸಭೆ ಮುಂದಿನ ವರ್ಷ ನಡೆಯಲಿದೆ ಎಂದು ತಿಳಿಸಿದ್ದಾರೆ. ಮೇ ಅಥವಾ ಜೂನ್ ತಿಂಗಳಿನವರೆಗೆ ಕಾದು ನೋಡುತ್ತೇವೆ, ಇದನ್ನು ವರ್ಚ್ಯೂಯಲ್ ಆಗಿ ಆಯೋಜಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಜಾಗತಿಕ ಹೂಡಿಕೆದಾರರ ಸಭೆ ಮುಂದೂಡುವುದರಿಂದ ಯಾವುದೇ ಪರಿಣಾಮ ಆಗುವುದಿಲ್ಲ, ನಾವು ಉತ್ತಮ ಹೂಡಿಕೆದಾರರನ್ನು ಅಂದರೆ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಬಂಡವಾಳಗಾರರನ್ನು ಹೊಂದಬಹುದು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com