ಕರ್ನಾಟಕದಲ್ಲಿ ಕೋವಿಡ್ ಲಸಿಕೆಗೆ ಕೊರತೆಯಿಲ್ಲ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ 

ಕೋವಿಡ್-19 ಪ್ರಕರಣಗಳು ಕರ್ನಾಟಕದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ರೋಗಿಗಳಿಗೆ ಸಾಕಷ್ಟು ಆಮ್ಲಜನಕ ಮತ್ತು ಅಗತ್ಯ ಸೋಂಕು ನಿವಾರಕ ಔಷಧಿ ರೆಮೆಡೆಸಿವಿರ್ ನ್ನು ಪೂರೈಸಲು ಸರ್ವಸನ್ನದ್ಧವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಪ್ರಕರಣಗಳು ಕರ್ನಾಟಕದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ರೋಗಿಗಳಿಗೆ ಸಾಕಷ್ಟು ಆಮ್ಲಜನಕ ಮತ್ತು ಅಗತ್ಯ ಸೋಂಕು ನಿವಾರಕ ಔಷಧಿ ರೆಮೆಡೆಸಿವಿರ್ ನ್ನು ಪೂರೈಸಲು ಸರ್ವಸನ್ನದ್ಧವಾಗಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್, ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮೆಡೆಸಿವಿರ್ ನ ಸಾಕಷ್ಟು ಸಂಗ್ರಹವಿದ್ದು ಲಸಿಕೆಯ ಅಭಾವವಿಲ್ಲ ಎಂದಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ರೆಮೆಡೆಸಿವಿರ್‌ನ ಅಗತ್ಯವನ್ನು ನಮಗೆ ಕಳುಹಿಸುವಂತೆ ನಾವು ಕೇಳಿದ್ದು, ತಾತ್ಕಾಲಿಕ ವ್ಯವಸ್ಥೆಯಾಗಿ ನಾವು ಅವುಗಳನ್ನು ನಮ್ಮ ಸಂಗ್ರಹದಿಂದ ಪೂರೈಸುತ್ತಿದ್ದೇವೆ ಎಂದು ಹೇಳಿದರು.

ಕಪ್ಪು ಮಾರುಕಟ್ಟೆಯಲ್ಲಿ ರೆಮೆಡೆಸಿವಿರ್ ಮಾರಾಟವಾಗುತ್ತಿದೆ ಎಂದು ಕೇಳಿಬರುತ್ತಿರುವ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ, ಈ ಲಸಿಕೆಯನ್ನು ಆಸ್ಪತ್ರೆಗಳಿಗೆ ಮಾತ್ರ ಪೂರೈಸಲಾಗುತ್ತಿದ್ದು ಬೇರೆ ಕಡೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿಲ್ಲ ಎಂದಿದ್ದಾರೆ.

ನಮ್ಮ ಸರಾಸರಿ ದೈನಂದಿನ ಅವಶ್ಯಕತೆ 2.5 ಲಕ್ಷ ಡೋಸ್ ಲಸಿಕೆಯಾಗಿದ್ದು, ಸದ್ಯ ನಮಗೆ ಸಾಕಷ್ಟು ಪೂರೈಕೆ ಇದೆ ಮತ್ತು ಹೆಚ್ಚಿನ ಲಸಿಕೆ ಪ್ರಮಾಣವನ್ನು ಪೂರೈಸಲು ನಾವು ಕೇಂದ್ರವನ್ನು ಕೇಳಿದ್ದೇವೆ, ಇನ್ನು ಸರ್ಕಾರ ಕೊರೋನಾ ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚಿಸಿದೆಯಾದರೂ ಜನರು ಸಹಕರಿಸುತ್ತಿಲ್ಲ ಎಂದರು.

ಸರ್ಕಾರವು ಜನರನ್ನು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅವರ ಮನೆಬಾಗಿಲಿಗೆ ಹೋಗಿ ಹೇಳಲು ಸಾಧ್ಯವಿಲ್ಲ. ಅವರು ರೋಗಲಕ್ಷಣಗಳನ್ನು ಹೊಂದಿದ್ದರೆ ಅಥವಾ ಕೊರೋನಾ ಪರೀಕ್ಷಿಸಿ ಪಾಸಿಟಿವ್ ಬಂದ ಯಾರೊಂದಿಗಾದರೂ ಸಂಪರ್ಕದಲ್ಲಿದ್ದರೆ ಪರೀಕ್ಷೆಗೆ ಒಳಗಾಗುವುದು ನಾಗರಿಕರ ಜವಾಬ್ದಾರಿಯಾಗಿದೆ. ಅದು ಅವರ ಹಿತದೃಷ್ಟಿಯಿಂದ ಮತ್ತು ಅವರ ಕುಟುಂಬದ ಹಿತದೃಷ್ಟಿಯಿಂದ ಒಳ್ಳೆಯದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com