ಕೋವಿಡ್-19 ಔಷಧ ರೆಮ್ ಡಿಸಿವಿರ್ ಕಾಳ ಸಂತೆ ಮಾರಾಟ ಕುರಿತ ತನಿಖೆಗೆ ಫಾರ್ಮಸಿಸ್ಟ್ ಒತ್ತಾಯ

ಕೋವಿಡ್-19 ಔಷಧ ರೆಮ್ ಡಿಸಿವಿರ್ ಕಾಳಸಂತೆ ಮಾರುಕಟ್ಟೆಗೆ ಸಂಬಂಧಿಸಿದಂತೆ ಔಷಧ ನಿಯಂತ್ರಣ ಅಧಿಕಾರಿಗಳ ವಿರುದ್ಧ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಮತ್ತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನೆಲಮಂಗಲದಲ್ಲಿರುವ ಹರ್ಷ ಆಸ್ಪತ್ರೆ ಘಟಕ ಹರ್ಷ ಮೆಡಿಕಲ್ಸ್ ಅಂಡ್ ಜನರಲ್ ಸ್ಟೋರ್ಸ್  ಪತ್ರ ಬರೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಔಷಧ ರೆಮ್ ಡಿಸಿವಿರ್ ಕಾಳಸಂತೆ ಮಾರುಕಟ್ಟೆಗೆ ಸಂಬಂಧಿಸಿದಂತೆ ಔಷಧ ನಿಯಂತ್ರಣ ಅಧಿಕಾರಿಗಳ ವಿರುದ್ಧ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಮತ್ತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನೆಲಮಂಗಲದಲ್ಲಿರುವ ಎಂಎಸ್ ರಾಮಯ್ಯ ಹರ್ಷ ಆಸ್ಪತ್ರೆ ಘಟಕ ಹರ್ಷ ಮೆಡಿಕಲ್ಸ್ ಅಂಡ್ ಜನರಲ್  ಸ್ಟೋರ್ಸ್  ಪತ್ರ ಬರೆದಿದೆ.

ಹೆಟೆರೊ ಬ್ರಾಂಡ್‌ನ ಬಾಟಲಿಯೊಂದಕ್ಕೆ ಸರ್ಕಾರ  1500 ರಿಂದ 2000 ರೂ. ನಿಗದಿಪಡಿಸಿದೆ. ಆದರೆ, ಇದರ ವಿರುದ್ಧವಾಗಿ
15,000 ರಿಂದ 25,000 ರೂ.ಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ ಎಂದು ವ್ಯವಸ್ಥಾಪಕ ಪಾಲುದಾರ 
ಎಸ್.ಶಿವಕುಮಾರ್ ತಿಳಿಸಿದ್ದಾರೆ. 

ಈ ಕುರಿತು ಸಿಬಿಐ, ಸಿಸಿಬಿ , ಸಿಐಡಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು, ರೋಗಿಗಳ ಜೀವ ಕಾಪಾಡಲು ಕಡಿಮೆ ದರದಲ್ಲಿ ದಾಸ್ತಾನು ಲಭ್ಯವಾಗುವಂತೆ ಖಾತ್ರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಿ ಅಂಡ್ ಎಫ್ (ಕ್ಲಿಯರಿಂಗ್ ಅಂಡ್ ಫಾರ್ವಡಿಂಗ್) ಏಜೆಂಟರು ಮತ್ತು ಸಗಟು ವಿತರಕರು ಲಸಿಕೆ ಅಗತ್ಯವಿರುವವರಿಗೆ
ರೆಮ್ ಡಿಸಿವಿರ್ ಇಂಜೆಕ್ಷನ್ ಪೂರೈಸುತ್ತಿಲ್ಲ. ರೆಮ್ ಡಿಸಿವಿಆರ್ ಅಗತ್ಯ ಔಷಧವಾಗಿದ್ದು, ಕೋವಿಡ್-19 ತೊಂದರೆಯಿಂದ
ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಅಗತ್ಯವಾಗಿದೆ. ರೋಗಿಗಳ ಪ್ರಾಣ ಕಾಪಾಡುವಲ್ಲಿ ಇದು ಪ್ರಮುಖವಾಗಿದೆ. ಅಲ್ಲದೇ, 
ಕೋವಿಡ್ ಕಾರಣದಿಂದ ಆಗುವ ಸಾವಿನ ಸಂಖ್ಯೆಯ ಕಡಿಮೆ ಮಾಡುತ್ತದೆ ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಕಳೆದ 10 ದಿನಗಳಿಂದಲೂ ಈ ಇಂಜೆಕ್ಷನ್ ಬಗ್ಗೆ ವಿಚಾರಿಸಿದಾಗ ದಾಸ್ತಾನು ಇಲ್ಲ ಎಂಬ ಪ್ರತಿಕ್ರಿಯೆ ಬರುತ್ತಿದೆ. ಕಾಳಸಂತೆಯಲ್ಲಿ ಕೆಲವರು ಅಕ್ರಮವಾಗಿ ಈ ಇಂಜೆಕ್ಷನ್ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ.  1500 ದಿಂದ 2000 ರೂ. ಗೆ ಮಾರಾಟ ಮಾಡುವ ಹೆಟೆರೂ- ರೆಮ್ ಡಿಸಿವಿರ್ 100 ಮಿಲಿ ಗ್ರಾಮ್. ಕೋವಿಫಾರ್ ಬ್ಯಾಚ್ ನಂ REM1210034ನ್ನು 15 ಸಾವಿರದಿಂದ 25 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಚುಚ್ಚುಮದ್ದು ಹಾಗೂ ಇತರ ಇಂಜೆಕ್ಷನ್ ಗಳ ಬಗ್ಗೆ ತನಿಖೆ ನಡೆಸುವಂತೆ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಶಿವಕುಮಾರ್, ಕಳೆದ 10 ದಿನಗಳಲ್ಲಿ ಮೆಡಿಕಲ್ ಸ್ಟೋರ್ ನಲ್ಲಿ ಕೇವಲ 12 ಬಾಟಲಿಗಳನ್ನು ಪಡೆದಿದ್ದೇನೆ. ಕಾಳ ಸಂತೆ ಮಾರುಕಟ್ಟೆ ಬಗ್ಗೆ ಸಹಾಯಕ ಔಷಧ ನಿಯಂತ್ರಕರಿಗೆ ಮೂರು ದಿನಗಳ ಹಿಂದೆಯೇ ದೂರು ನೀಡಲಾಯಿತು. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

ಏಜೆನ್ಸಿಗಳೊಂದಿಗೆ  ಔಷಧ ನಿಯಂತ್ರಕರು ಕೈ ಜೋಡಿಸಿರಬಹುದೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ರೆಮ್ ಡಿಸಿವಿರ್ ಕಾಳ ಸಂತೆ ಮಾರಾಟ ಬಗ್ಗೆ ತನಿಖೆ ನಡೆದರೆ ತಮ್ಮ ಬಳಿ ಇರುವ ದಾಖಲೆಗಳನ್ನು ಪೊಲೀಸರಿಗೆ ನೀಡುವುದಾಗಿ ಅವರು ತಿಳಿಸಿದರು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಮುಖ್ಯ ಕಾರ್ಯದರ್ಶಿಪಿ. ರವಿಕುಮಾರ್, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೂ ಕೂಡಾ ಶಿವಕುಮಾರ್ ಪತ್ರ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com