ದೋಣಿ ದುರಂತ: ನಾಪತ್ತೆಯಾದ 9 ಮೀನುಗಾರರ ಪತ್ತೆಗೆ ಶೋಧ ಮುಂದುವರಿಕೆ
ಸರಕು ಹಡಗಿಗೆ ಡಿಕ್ಕಿ ಹೊಡೆದು ಈ ತಿಂಗಳ 12 ರಂದು ಸಮುದ್ರದಲ್ಲಿ ಮುಳುಗಿದ ಕೇರಳದ ಮೀನುಗಾರಿಕಾ ದೋಣಿಯಲ್ಲಿದ್ದ 14 ಮೀನುಗಾರರ ಪೈಕಿ ಒಂಬತ್ತು ಮೀನುಗಾರರು ಇನ್ನೂ ಪತ್ತೆಯಾಗಿಲ್ಲ.
Published: 16th April 2021 03:09 PM | Last Updated: 16th April 2021 03:09 PM | A+A A-

9 ಮೀನುಗಾರರ ಪತ್ತೆಗೆ ಶೋಧ
ಮಂಗಳೂರು: ಸರಕು ಹಡಗಿಗೆ ಡಿಕ್ಕಿ ಹೊಡೆದು ಈ ತಿಂಗಳ 12 ರಂದು ಸಮುದ್ರದಲ್ಲಿ ಮುಳುಗಿದ ಕೇರಳದ ಮೀನುಗಾರಿಕಾ ದೋಣಿಯಲ್ಲಿದ್ದ 14 ಮೀನುಗಾರರ ಪೈಕಿ ಒಂಬತ್ತು ಮೀನುಗಾರರು ಇನ್ನೂ ಪತ್ತೆಯಾಗಿಲ್ಲ.
ಈ ಮಧ್ಯೆ, ಪತ್ತೆಯಾದ ಮೂವರು ಮೀನುಗಾರರ ಮೃತದೇಹಗಳ ಪೈಕಿ ಇಬ್ಬರ ಮೃತದೇಹಗಳನ್ನು ಅವರ ಸ್ವಂತ ಸ್ಥಳವಾದ ತಮಿಳುನಾಡಿಗೆ ಹಾಗೂ ಮತ್ತೋರ್ವ ಮೀನುಗಾರನ ಮೃತದೇಹವನ್ನು ಆತನ ಸ್ವಂತ ಸ್ಥಳವಾದ ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ.
ನಾಪತ್ತೆಯಾದ ಉಳಿದ ಮೀನುಗಾರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಕರಾವಳಿ ಭದ್ರತಾ ಪೊಲೀಸ್ ಪಡೆ, ಹೆಲಿಕಾಪ್ಟರ್ ಮತ್ತು ಕಾರವಾರ ನೌಕಾ ನೆಲೆಯ ಹಡಗು ಈ ಕಾರ್ಯದಲ್ಲಿ ನಿರತವಾಗಿವೆ. ಪರಿಣಿತ ಈಜು ತಜ್ಞರನ್ನೂ ಶೋಧ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ.