ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಮಾಡಿದರೆ ಮಕ್ಕಳ ಭವಿಷ್ಯ ಕಷ್ಟ: ಬಸವರಾಜ ಹೊರಟ್ಟಿ

ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಮಾಡುವುದು ಸರಿಯಲ್ಲ. ಪರೀಕ್ಷೆ ರದ್ದು ಮಾಡಿದರೆ ಮಕ್ಕಳ ಭವಿಷ್ಯ ಕಷ್ಟ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಮಾಡುವುದು ಸರಿಯಲ್ಲ. ಪರೀಕ್ಷೆ ರದ್ದು ಮಾಡಿದರೆ ಮಕ್ಕಳ ಭವಿಷ್ಯ ಕಷ್ಟ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊರಟ್ಟಿ,ಕೆಲವು ಕಡೆ ಪೋಷಕರು ಪರೀಕ್ಷೆ ಬೇಡ ಎಂದರೆ ಶೇ.70ರಷ್ಟು ಪೋಷಕರು ಪರೀಕ್ಷೆ ಬೇಕು‌ ಎನ್ನುತ್ತಾರೆ. ಕೋವಿಡ್ ನೆಪ ಹೇಳಿ‌ ಪರೀಕ್ಷೆ ರದ್ದು ಮಾಡುವ ಪ್ರಯತ್ನ ಬೇಡ ಎಂದು ಸಲಹೆ ನೀಡಿದ್ದಾರೆ. 

ನಾನು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಬೇರೆ ರಾಜ್ಯಗಳ ವ್ಯವಸ್ಥೆಯೇ ಬೇರೆ, ನಮ್ಮಲ್ಲಿಯೇ ಬೇರೆ. ಬೇರೆ ರಾಜ್ಯಗಳಲ್ಲಿ ತ್ರಿಟಯರ್ ವ್ಯವಸ್ಥೆ ಇದೆ, ಮೂರು ಹಂತದ ಸ್ಕೂಲ್ ವಿಭಾಗವಿದೆ. ನಮ್ಮಲ್ಲಿ ಅಂತಹ ತ್ರಿಟಯರ್ ವ್ಯವಸ್ಥೆ ಇಲ್ಲ. ಎಸ್ ಎಸ್ ಎಲ್ ಸಿ ಆಗದೆ ಬೇರೆಯದಕ್ಕೆ ಹೋಗಲಾಗುವುದಿಲ್ಲ. ನಮ್ಮಲ್ಲಿರುವ ಎಸ್ ಎಸ್ ಎಲ್ ಸಿ ಪದ್ಧತಿ ಬೇರೆ. ಪರೀಕ್ಷೆ ನಡೆಸದಿದ್ದರೆ ಮಕ್ಕಳು ಹಾಳಾಗಿ ಹೋಗುತ್ತಾರೆ ಎಂದು ಹೇಳಿದ್ದಾರೆ.

ಮಕ್ಕಳಿಗೆ ಸ್ಯಾನಿಟೈಸ್, ಸಾಮಾಜಿಕ ಅಂತರದ ಬಗ್ಗೆ ತಿಳುವಳಿಕೆ ಮೂಡಿಸಲಿ. 20 ಮಂದಿಗೆ ಒಂದು ಕೊಠಡಿಯಲ್ಲಿ ಪರೀಕ್ಷೆ ನಡೆಸಲಿ. ಆದರೆ ಪರೀಕ್ಷೆ ರದ್ಧು ಮಾಡುವುದು ಬೇಡ. ಎಂಟು ಲಕ್ಷ ಮಕ್ಕಳಿಗೂ ಒಂದೇ ಅಂಕ ಕೊಡುತ್ತಾರೆ. ಒಂದೇ ಅಂಕ ಇದ್ದರೆ ಬೇರೆ ಕಾಲೇಜಿಗೆ ಹೋದರೆ ಕಷ್ಟ. ಆದರೆ ಕಾಲೇಜು ಸೇರುವಾಗ ಅಂಕ ಪ್ರಶ್ನಿಸುತ್ತಾರೆ. ಹೀಗಾಗಿ ಸರ್ಕಾರ ಪರೀಕ್ಷೆಯನ್ನು ನಡೆಸಬೇಕು, ಪರೀಕ್ಷೆ ನಡೆಸುವ ಸಂಬಂಧ  ಡಿಹೆಚ್ ಒ, ಡಿಡಿಪಿಐಗೆ ಕಠಿಣ ನಿರ್ದೇಶನ ನೀಡಲಿ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆದರೆ ಉತ್ತಮ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com