ಸಾಗಣೆ ದರ ಹೆಚ್ಚಳ: 'ಹಣ್ಣುಗಳ ರಾಜ' ಮಾವಿನ ಹಣ್ಣಿನ ರಫ್ತಿನ ಮೇಲೆ ಎಫೆಕ್ಟ್!

ಹಣ್ಣುಗಳ ರಾಜ ಮಾವು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದೆ, ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿನದ್ದೇ ದರ್ಬಾರ್. ಆದರೆ ಸಾಗಣೆ ವೆಚ್ಚ ಅಧಿಕವಾಗಿರುವ ಕಾರಣ ಈ ಬಾರಿಯು ರಪ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಣ್ಣುಗಳ ರಾಜ ಮಾವು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದೆ, ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿನದ್ದೇ ದರ್ಬಾರ್. ಆದರೆ ಸಾಗಣೆ ವೆಚ್ಚ ಅಧಿಕವಾಗಿರುವ ಕಾರಣ ಈ ಬಾರಿಯು ರಪ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಸರಕು ಸಾಗಣೆ ದರ ಹೆಚ್ಚಿರುವ ಹಿನ್ನೆಲೆಯಲ್ಲಿ ರೈತರಿಗೆ ರಪ್ತು ಅನಪೇಕ್ಷಿತವಾಗಿದೆ.ಪ್ರತಿ ಕೆಜಿಗೆ 250 ರು ದರ ನಿಗದಿ ಪಡಿಸಿರುವ ಕಾರಣ ರಪ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ  ನಿಗಮದ ಅಧ್ಯಕ್ಷ ಕೆವಿಎನ್ ನಾಗರಾಜ್ ಹೇಳಿದ್ದಾರೆ.

ಸರಕು ಸಾಗಣೆ ದರ 100 ರು ಹೆಚ್ಚಾಗಿದ್ದು ಅದರ ವೆಚ್ಚವನ್ನು ರೈತರೇ ಭರಿಸಬೇಕಾಗಿದೆ. ಆದರೆ ಅದು ರೈತರಿಗೆ ಬೇಕಾಗಿಲ್ಲ,  ಒಂದು ಕೆಜಿ  ಆಲ್ಪಾನ್ಸೋ ಮಾವಿನ ಹಣ್ಣಿನ ಬೆಲೆ 200-250 ರು.ರಾಮನಗರದಿಂದ ತರಲು ಪ್ರತಿ ಕೆಜಿಗೆ 100 ರು ವೆಚ್ಚ ಭರಿಸಬೇಕಾಗುತ್ತದೆ.

ಗಲ್ಫ್ ದೇಶಗಳಿಂದ ರಾಜ್ಯದ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆಯಿದೆ, ಇದರ ಜೊತೆಗೆ ಮಧ್ಯ ಪ್ರಾಚ್ಯ ದೇಶಗಳಿಂದಲೂ ಮಾವಿಗೆ ಬೇಡಿಕೆಯಿದೆ. ರಾತು ಮತ್ತು ಕೊಳ್ಳುವವರ ನಡುವೆ ಸುಗಮ ವ್ಯಾಪಾರಕ್ಕಾಗಿ ಮಾವು ಮಂಡಳಿ ಬದ್ಧವಾಗಿದೆ ಎಂದು ತಿಳಿಸಿದೆ.

ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ  ಮಾವಿನ ಹಣ್ಣು ಆನ್ ಲೈನ್ ನಲ್ಲಿ ಹೆಚ್ಚು ಮಾರಾಟವಾಗಿತ್ತು.  ರೈತರು ಮಂಡಳಿಯ ಆನ್‌ಲೈನ್ ಪೋರ್ಟಲ್ ಮೂಲಕ ಬೆಂಗಳೂರಿನಲ್ಲಿ 100 ಟನ್ ಮಾರಾಟ ಮಾಡಿದ್ದಾರೆ. ಅಲ್ಲದೆ, ಅಪಾರ್ಟ್ಮೆಂಟ್ ಸಂಘಗಳೊಂದಿಗೆ ಸಹಭಾಗಿತ್ವದಿಂದ ಸುಮಾರು 600 ಟನ್ ಮಾರಾಟವಾಯಿತು. ಈ ವರ್ಷ ಉತ್ಪಾದನೆಯು 14 ಲಕ್ಷ ಟನ್ ಎಂದು ಅವರು ನಿರೀಕ್ಷಿಸುತ್ತಿದ್ದಾರೆ, ಆದರೆ ಮಳೆಯಿಂದಾಗಿ ಉತ್ಪಾದನೆಯು 4-5 ಲಕ್ಷ ಟನ್ಗಳಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ನಾಗರಾಜ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com