ವಲಸೆ ಕಾರ್ಮಿಕರ ಜಾಗಕ್ಕೆ ಬಾಲಕಾರ್ಮಿಕರು! ಕೊರೋನಾ ನಂತರ ಬೆಂಗಳೂರಿನಲ್ಲಿ ದುಡಿಯುವ ಮಕ್ಕಳ ಸಂಖ್ಯೆ ಹೆಚ್ಚಳ

ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ರೈಲ್ವೆ ಪೊಲೀಸರು ಮತ್ತು ಎನ್‌ಜಿಒಗಳು ವಿವಿಧ ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ಮಕ್ಕಳನ್ನು ಬೆಂಗಳೂರಿಗೆ ಕರೆತರುವ ಸಂಖ್ಯೆಯಲ್ಲಿ ಏರಿಕೆಯನ್ನು ಗಮನಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ರೈಲ್ವೆ ಪೊಲೀಸರು ಮತ್ತು ಎನ್‌ಜಿಒಗಳು ವಿವಿಧ ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ಮಕ್ಕಳನ್ನು ಬೆಂಗಳೂರಿಗೆ ಕರೆತರುವ ಸಂಖ್ಯೆಯಲ್ಲಿ ಏರಿಕೆಯನ್ನು ಗಮನಿಸಿದೆ. ಕಳೆದ ವರ್ಷ ಮೊದಲ ಕೋವಿಡ್ ಅಲೆಯ ನಂತರ ತಮ್ಮ ಊರಿಗೆ ತೆರಳಿದ್ದ ಕಾರ್ಮಿಕರ ಒಂದು ಉತ್ತಮ ವರ್ಗ ಮತ್ತೆ ಹಿಂತಿರುಗಿಲ್ಲ ಹಾಗಾಗಿ ಅವರ ಸ್ಥಾನಕ್ಕೀಗ ಬಾಲ ಕಾರ್ಮಿಕರನ್ನು ಕರೆತರಲಾಗುತ್ತಿದೆ.

ರಾಜ್ಯದ ಹಲವಾರು ನಗರ,ಅಂತರರಾಜ್ಯ ರೈಲುಗಳು ಮತ್ತು ಬಸ್ಸುಗಳ ಸಂಚಾರ ಪುನಾರಂಬವಾದಂದಿನಿಂದ , ಅನೇಕ ಮಕ್ಕಳನ್ನು ಕಾರ್ಮಿಕರನ್ನಾಗಿ ಬಳಸಿಕೊಳ್ಳಲು ನಗರಕ್ಕೆ ಕರೆತರಲಾಗುತ್ತಿದೆ ಎಂದು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ನ ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. "ಈ ವರ್ಷದ ಜನವರಿಯಿಂದ ಮಾರ್ಚ್ ವರೆಗೆ, ಕಾರ್ಮಿಕರ ಕಳ್ಳಸಾಗಾಣಿಕೆಗೆ ಒಳಗಾಗಿರುವ 52 ಮಕ್ಕಳನ್ನು ರೈಲುಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಂದ ಆರ್‌ಪಿಎಫ್‌ನ ಮಕ್ಕಳ ಕಳ್ಳಸಾಗಣೆ ವಿರೋಧಿ ಘಟಕ ರಕ್ಷಿಸಿದೆ. . ಹೊಸ ಪ್ರವೃತ್ತಿಯೆಂದರೆ, ಕಾರ್ಮಿಕ ಬೇಡಿಕೆಯನ್ನು ಪೂರೈಸಲು ಹೆಣ್ಣು ಮಕ್ಕಳನ್ನು ಸಹ ಹೆಚ್ಚುವರಿಯಾಗಿ ತರಲಾಗುತ್ತಿದೆ. ಈ ಮೊದಲು ಅವರನ್ನು ಮುಖ್ಯವಾಗಿ ಮಾಂಸ ವ್ಯಾಪಾರಕ್ಕಾಗಿ ಮಾತ್ರ ಕರೆತರುತ್ತಿದ್ದರು."

ಯುನಿಸೆಫ್, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮಕ್ಕಳ ರಕ್ಷಣಾ ತಜ್ಞ ಸೋನಿಕುಟ್ಟಿ ಜಾರ್ಜ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿ “ಕಳೆದ ವಾರವೊಂದರಲ್ಲೇ ನಾವು ಕೆಎಸ್‌ಆರ್ ರೈಲ್ವೆ ನಿಲ್ದಾಣ ಮತ್ತು ಕೆಂಪೇಗೌಡ ಬಸ್ ನಿಲ್ದಾಣದಿಂದ 25 ಮಕ್ಕಳನ್ನು ರಕ್ಷಿಸಿದ್ದೇವೆ. ಅವರನ್ನು ಈಗ ಮಡಿವಾಳದ ಕೇಂದ್ರವೊಂದರಲ್ಲಿ ಇರಿಸಲಾಗುತ್ತದೆ ಮತ್ತು ಅವರು ಕೊರೋನಾ ಮುಕ್ತರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತದೆ. ”

ಪ್ರತಿ ತಿಂಗಳು ಸರಾಸರಿ 90 ರಿಂದ 100 ಮಕ್ಕಳನ್ನು ನಗರಕ್ಕೆ ಕರೆತರಲಾಗುತ್ತಿದೆ ಎಂದು ಅವರು ಹೇಳಿದರು. "ಲಭ್ಯವಿರುವ ಸೀಮಿತ ಸಾರ್ವಜನಿಕ ಸಾರಿಗೆಯನ್ನು ನೀವು ಪರಿಗಣಿಸಿದಾಗ, ಇದು ಹೆಚ್ಚು ಕಾಳಜಿಯ ವಿಷಯವಾಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯಕಾರಿ ಪ್ರವೃತ್ತಿಯಾಗಿ ಬೆಳೆಯಲು ಸಾಧ್ಯವಿದೆ. ”ಎಂದು ಅವರು ಹೇಳಿದರು. ಅವರಲ್ಲಿ ಹೆಚ್ಚಿನವರು ಗ್ರಾಮೀಣ ಮಕ್ಕಳು. "ಶಾಲೆಗಳ ಮುಚ್ಚುವಿಕೆ ಮತ್ತು ಆನ್‌ಲೈನ್‌ನಲ್ಲಿ ಅಧ್ಯಯನ ಮಾಡಲು ಸಾಧ್ಯವಾಗದ, ಪೋಷಕರ ಮೇಲಿನ ಆರ್ಥಿಕ ಒತ್ತಡವು ಅನೇಕ ಮಕ್ಕಳನ್ನು ಕೂಲಿ ಕೆಲಸಗಳಿಗೆ ತಳ್ಳುತ್ತಿದೆ."

ಕಳೆದ ಎರಡು ವರ್ಷಗಳಲ್ಲಿ ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಲ್ಲಿ 3,023 ಮಕ್ಕಳನ್ನು ರಕ್ಷಿಸಿರುವ  ಮಕ್ಕಳ ಕಳ್ಳಸಾಗಣೆ ವಿರೋಧಿ ಘಟಕದ ಮಾಹಿತಿಯ ಪ್ರಕಾರ, ಶೇಕಡಾ 52 ರಷ್ಟು ಮಕ್ಕಳನ್ನು ಕರ್ನಾಟಕದ ವಿವಿಧ ಭಾಗಗಳಿಂದ ಕರೆತರಲಾಗಿದೆ. ಇನ್ನು ಬಿಹಾರ, ಒಡಿಶಾ, ಜಾರ್ಖಂಡ್ ಮತ್ತು ಈಶಾನ್ಯ ರಾಜ್ಯಗಳಿಂದ ಸಹ ನಗರಕ್ಕೆ ಮಕ್ಕಳು ಬರುತ್ತಿದ್ದಾರೆ. "ಮಕ್ಕಳನ್ನು ಸ್ವಯಂಪ್ರೇರಣೆಯಿಂದ ಕಳುಹಿಸಲಾಗುತ್ತಿದೆ, ಅವರಿಗೆ ಮಕ್ಕಳು ಅನುಭವಿಸುವ ಕಷ್ಟಗಳ ಬಗ್ಗೆ ಯಾವುದೇ ಸುಳಿವು ಇಲ್ಲ, ಆದರೆ ಕೆಲವರನ್ನು ಸಂಬಂಧಿಕರು ಅಥವಾ ಕಳ್ಳಸಾಗಣೆಯಲ್ಲಿ ಪರಿಣತಿ ಹೊಂದಿರುವವರು ಕರೆತರುತ್ತಿದ್ದಾರೆ" ಎಂದು ಪೊಲೀಸ್ ಅಧಿಕಾರಿ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com