ಪರೀಕ್ಷೆಗೂ ಮುನ್ನ ಕೊರೋನಾ ಲಸಿಕೆ ನೀಡಿ: ಸರ್ಕಾರಕ್ಕೆ ಬೆಂಗಳೂರು ವಿದ್ಯಾರ್ಥಿಗಳ ಸಮುದಾಯ ಆಗ್ರಹ

ಪರೀಕ್ಷೆಗಳನ್ನು ನಡೆಸಲು ಸರ್ಕಾರ ಪಟ್ಟುಹಿಡಿದಿದ್ದೇ ಆದರೆ, ಪರೀಕ್ಷೆಗಳಿಗೂ ಮುನ್ನ ವಿದ್ಯಾರ್ಥಿಗಳಿಗೆ ಕೊರೋನಾ ಲಸಿಕೆ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಬೆಂಗಳೂರು ವಿದ್ಯಾರ್ಥಿಗಳ ಸಮುದಾಯ ಆಗ್ರಹಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪರೀಕ್ಷೆಗಳನ್ನು ನಡೆಸಲು ಸರ್ಕಾರ ಪಟ್ಟುಹಿಡಿದಿದ್ದೇ ಆದರೆ, ಪರೀಕ್ಷೆಗಳಿಗೂ ಮುನ್ನ ವಿದ್ಯಾರ್ಥಿಗಳಿಗೆ ಕೊರೋನಾ ಲಸಿಕೆ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಬೆಂಗಳೂರು ವಿದ್ಯಾರ್ಥಿಗಳ ಸಮುದಾಯ ಆಗ್ರಹಿಸಿದೆ. 

ಈ ಕುರಿತು ವಿದ್ಯಾರ್ಥಿಗಳ ಸಮುದಾಯ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಪತ್ರ ಬರೆದಿದ್ದು, ಮೇ ತಿಂಗಳಲ್ಲಿ 22 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಲಿರುವ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಪರೀಕ್ಷೆಗಳನ್ನು ರದ್ದುಗೊಳಿಸುವುದು ಪ್ರಮುಖ ಆದ್ಯತೆಯಾಗಿದೆ. ಒಂದು ವೇಳೆ ಸರ್ಕಾರ ಪರೀಕ್ಷೆ ನಡೆಸಲು ಪಟ್ಟು ಹಿಡಿದಿದ್ದೇ ಆದರೆ, ಮುಂದಿನ ಎರಡು ತಿಂಗಳುಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೋನಾ ಲಸಿಕೆ ನೀಡಬೇಕೆಂದು ಆಗ್ರಹಿಸಿದ್ದಾರೆ. 

ಇತ್ತೀಚಿನ ಅಂಕಿಅಂಶಗಳನ್ನು ಗಮನಿಸಿದರೆ, ಯುವಕರಿಗೆ ಕೊರೋನಾ ಸೋಂಕು ಹೆಚ್ಚಾಗಿ ಹರಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸರ್ಕಾರ ಶೀಘ್ರಾತಿ ಶೀಘ್ರದಲ್ಲಿ ಲಸಿಕೆಯನ್ನು ನೀಡಬೇಕು. ಲಸಿಕೆಗೆ ವ್ಯವಸ್ಥೆ ಕಲ್ಪಿಸುವಂತೆ ನೂರಾರು ಪತ್ರಗಳು ನಮಗೆ ಬರುತ್ತಿವೆ ಎಂದು ಬೆಂಗಳೂರು ವಿದ್ಯಾರ್ಥಿ ಸಮುದಾಯದ ಅಧ್ಯಕ್ಷ ದೃವ್ ಜಟ್ಟಿಯವರು ಹೇಳಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು, ವಿಶ್ವವಿದ್ಯಾಲಯ ಮಟ್ಟದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್, ಡಿಪ್ಲೋಮಾ ಸೇರಿದಂತೆ ಉನ್ನತ ಶಿಕ್ಷಣ ವ್ಯಾಪ್ತಿಗೆ ಬರುವ ಎಲ್ಲಾ ವಿಭಾಗದ ಪರೀಕ್ಷೆಗಳು ನಿಗದಿತ ವೇಳಾ ಪಟ್ಟಿಯಂತೆ ನಡೆಯಲಿವೆ ಎಂದು ಹೇಳಿದ್ದರು. 

ಈಗಾಗಲೇ ಶೈಕ್ಷಣಿಕ ವರ್ಷದ ನಾಲ್ಕೈದು ತಿಂಗಳು ತಡವಾಗಿದೆ. ಮತ್ತೆ ತಡವಾದರೆ ಓದು, ಪರೀಕ್ಷೆ, ಫಲಿತಾಂಶ, ಉದ್ಯೋಗ, ಮುಂದಿನ ವ್ಯಾಸಂಗಕ್ಕೆ ಸಮಸ್ಯೆಯಾಗುತ್ತದೆ. ಆದ್ದರಿಂದ ಈ ಸಾಲಿನ ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ ಬೇಸಿಗೆ ರಜೆ ನೀಡದೆ, ಕೂಡಲೇ ತರಗತಿಗಳನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com