ಮಣಿಪಾಲ್‌ ಆಸ್ಪತ್ರೆಯಲ್ಲಿ ಹೆಚ್‌ಡಿಕೆಗೆ ಹಾಸಿಗೆ ಕೊರತೆಯಾಗಿಲ್ಲ: ಸಚಿವ ಸುಧಾಕರ್ ಸ್ಪಷ್ಟನೆ

ಕೋವಿಡ್ ಸೋಂಕಿಗೊಳಗಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆಯುಂಟಾಗಿಲ್ಲ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಶನಿವಾರ ಸ್ಪಷ್ಟನೆ ನೀಡಿದ್ದಾರೆ‌.
ಡಾ. ಕೆ. ಸುಧಾಕರ್
ಡಾ. ಕೆ. ಸುಧಾಕರ್

ಬೆಂಗಳೂರು: ಕೋವಿಡ್ ಸೋಂಕಿಗೊಳಗಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆಯುಂಟಾಗಿಲ್ಲ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಶನಿವಾರ ಸ್ಪಷ್ಟನೆ ನೀಡಿದ್ದಾರೆ‌.

ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಮಾಜಿ ಸಿಎಂ ಕುಮಾರಸ್ವಾಮಿಗೆ ಬೆಡ್ ಕೊರತೆಯುಂಟಾಗಿರುವ ಬಗ್ಗೆ ನಾನೇ ಖುದ್ದಾಗಿ ಅವರ ಹತ್ರ ಮಾತಾಡಿದ್ದೇನೆ. ಅಲ್ಲದೇ ಮಣಿಪಾಲ್ ಆಸ್ಪತ್ರೆ ಜತೆ ಸಹ ಮಾತಾಡಿದ್ದೇನೆ ಎಂದರು.

ಕುಮಾರಸ್ವಾಮಿಗೆ ಹೃದಯದ ಸರ್ಜರಿಯಾಗಿರುವುದರಿಂದ ಅಪೋಲೊ ಆಸ್ಪತ್ರೆಯಲ್ಲಿ ಸಂಬಂಧಪಟ್ಡ ವೈದ್ಯರು ಇದ್ದಾರೆ. ಹೀಗಾಗಿ ಅವರೇ ಮಣಿಪಾಲ್ ಆಸ್ಪತ್ರೆ ಬಿಟ್ಟು ಅಪೋಲೋಗೆ ಹೋಗಿರುವುದಾಗಿ ಹೇಳಿದ್ದಾರೆ. ಅವರಿಗೆ ಅಪೋಲೊ ಆಸ್ಪತ್ರೆಯ ಸಿಇಒ ಬಳಿ ಸರ್ಕಾರದ ಪರವಾಗಿ ಮಾತಾಡಿದ್ದೇವೆ ಎಂದು ತಿಳಿಸಿದ್ದೇನೆ. ಆದಷ್ಟು ಬೇಗ ಕುಮಾರಸ್ವಾಮಿ ಗುಣಮುಖರಾಗಲಿ. ಅವರಿಗೆ ಈಗಲೂ ಮಣಿಪಾಲ್ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆ. ಈ ಮಾಹಿತಿಯನ್ನು ಖುದ್ದಾಗಿ ಹೆಚ್ ಡಿ ಕೆ ಯಿಂದ ಪಡೆದಿದ್ದು, ಅನಗತ್ಯವಾಗಿ ಈ ರೀತಿ ಯಾರೂ ಸಹ ಸುಳ್ಳು ಸುದ್ದಿ ಹಬ್ಬಿಸಬಾರದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com