ಮುಷ್ಕರ ನಿರತ ಬಿಎಂಟಿಸಿ ಸಿಬ್ಬಂದಿಗೆ ಶಾಕ್: ಒಂದೇ ದಿನ 2,443 ಸಿಬ್ಬಂದಿ ವಜಾ!

ನೋಟಿಸ್ ನೀಡಿದರೂ ಕೆಲಸಕ್ಕೆ ಹಾಜರಾಗದಿದ್ದಕ್ಕೆ ಮುಷ್ಕರ ನಿರತ ಬಿಎಂಟಿಸಿಯ 2,443 ಸಿಬ್ಬಂದಿಯನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದೆ. 
ಬಿಎಂಟಿಸಿ ಬಸ್ ಸಾಂದರ್ಭಿಕ ಚಿತ್ರ
ಬಿಎಂಟಿಸಿ ಬಸ್ ಸಾಂದರ್ಭಿಕ ಚಿತ್ರ

ಬೆಂಗಳೂರು: ನೋಟಿಸ್ ನೀಡಿದರೂ ಕೆಲಸಕ್ಕೆ ಹಾಜರಾಗದಿದ್ದಕ್ಕೆ ಮುಷ್ಕರ ನಿರತ ಬಿಎಂಟಿಸಿಯ 2,443 ಸಿಬ್ಬಂದಿಯನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದೆ. 

ಮುಷ್ಕರ ನಿರತ ಬಿಎಂಟಿಸಿ ಸಿಬ್ಬಂದಿ ಮೇಲೆ ಆಡಳಿತ ಮಂಡಳಿ ಅಮಾನತು ಅಸ್ತ್ರ ಪ್ರಯೋಗಿಸಿದೆ. ಇಂದು ಬರೋಬ್ಬರಿ 2,443 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಪೈಕಿ 1,974 ಮಂದಿ ಹಿರಿಯ ನೌಕರರಾಗಿದ್ದಾರೆ. 

ವಜಾ ಮಾಡಲಾಗಿರುವ ಸಿಬ್ಬಂದಿಗಳಿಗೆ ನೋಟಿಸ್ ನೀಡಿದ್ದ ಉತ್ತರ ನೀಡಲು ಸೋಮವಾರದವರೆಗೆ ಗಡುವು ನೀಡಿದೆ. ಇನ್ನು ಸೂಕ್ತ ಕಾರಣ ನೀಡದ ಎಲ್ಲಾ ಸಿಬ್ಬಂದಯನ್ನು ಸೇವೆಯಿಂದ ವಜಾ ಮಾಡಲಾಗುತ್ತದೆ ಎಂದು ಬಿಎಂಟಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. 

ಕಳೆದ ದಿನಗಳಿಂದ ಆಡಳಿತ ಮಂಡಳಿ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡುತ್ತಾ ಬಂದಿತ್ತು. ಆದರೆ ಮುಷ್ಕರ ನಿರಂತರವಾಗಿ ನಡೆಯುತ್ತಿರುವುದರಿಂದ ಬಿಎಂಟಿಸಿ ಹಲವು ದಿನಗಳಿಂದ ನೌಕರರನ್ನು ವಜಾ ಮಾಡುತ್ತಾ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com