ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ಬಗ್ಗೆ ಅನಗತ್ಯವಾಗಿ ಭೀತಿ ಸೃಷ್ಟಿಸಬೇಡಿ- ಡಾ.ಕೆ.ಸುಧಾಕರ್ 

ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ಬಗ್ಗೆ ಅನಗತ್ಯವಾಗಿ ಭಯ ಸೃಷ್ಟಿಸದಂತೆ ಪ್ರತಿಯೊಬ್ಬರಲ್ಲಿ ಮನವಿ ಮಾಡುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಭಾನುವಾರ ಹೇಳಿದ್ದಾರೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್
ಆರೋಗ್ಯ ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ಬಗ್ಗೆ ಅನಗತ್ಯವಾಗಿ ಭಯ ಸೃಷ್ಟಿಸದಂತೆ ಪ್ರತಿಯೊಬ್ಬರಲ್ಲಿ ಮನವಿ ಮಾಡುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಭಾನುವಾರ ಹೇಳಿದ್ದಾರೆ.

ರಾಜ್ಯದಲ್ಲಿ ಪ್ರತಿದಿನ 812 ಟನ್ ಉತ್ಪಾದನಾ ಸಾಮರ್ಥ್ಯವಿರುವ ಏಳು ವೈದ್ಯಕೀಯ ಆಮ್ಲಜಕ ಉತ್ಪಾದನಾ ಘಟಕಗಳಿವೆ. ಶನಿವಾರ 272.61 ಟನ್ ಗಳಷ್ಟು ವೈದ್ಯಕೀಯ ಆಮ್ಲಜನಕವನ್ನು ಬಳಸಲಾಗಿದೆ. ಆದ್ದರಿಂದ ಯಾರೊಬ್ಬರು ಕೂಡಾ ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ಬಗ್ಗೆ ಅನಗತ್ಯವಾಗಿ ಭೀತಿ ಸೃಷ್ಟಿಸಬೇಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಆಮ್ಲಜನಕ ಪೂರೈಕೆಗೆ ಔಷಧ ನಿಯಂತ್ರಕರ ಕಛೇರಿಯಲ್ಲಿ ವಾರ್ ರೂಮ್ ರಚಿಸಲಾಗಿದೆ ಎಂದು ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಅಲ್ಲದೇ, ಆಸ್ಪತ್ರೆಗಳಲ್ಲಿನ ಲಭ್ಯವಿರುವ ಹಾಸಿಗೆ ಸಾಮರ್ಥ್ಯದ  ವಸ್ಥುಸ್ಥಿತಿ ಬಗ್ಗೆ ಮಾಹಿತಿ ತಿಳಿಯಲು ಲಿಂಕ್ ವೊಂದನ್ನು ಅವರು ಹಂಚಿಕೊಂಡಿದ್ದಾರೆ. ಇದು  ಸ್ವಯಂ ಚಾಲಿತವಾಗಿ ಪ್ರತಿ 5 ನಿಮಿಷಗಳಿಗೊಮ್ಮೆ ಅಪ್ ಡೇಟ್ ಆಗುವುದಾಗಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com