ಮಹಾಬಲೇಶ್ವರ ದೇವಾಲಯ ಕುರಿತು ಸುಪ್ರೀಂ ತೀರ್ಪು: ಗೋಕರ್ಣದಲ್ಲಿ ಸಂಭ್ರಮಾಚರಣೆ

 ರಾಮಚಂದ್ರಾಪುರ ಮಠಕ್ಕೆ ಹಿಂದಿನ ಬಿಜೆಪಿ ಸರ್ಕಾರವು ನೀಡಿದ್ದ ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಮತ್ತೆ ಹಿಂತಿರುಗಿಸುವಂತೆ ಸುಪ್ರೀಂ ಕೋರ್ಟ್ ಆದೇಶಿದ್ದಲ್ಲದೆ ದೇವಾಲಯದ ನಿರ್ವಹಣೆಗಾಗಿ ಸಮಿತಿಯನ್ನು ರಚಿಸುವಂತೆ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಗೋಕರ್ಣದಲ್ಲಿ ಸಂಭ್ರಮಾಚರಣೆ
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಗೋಕರ್ಣದಲ್ಲಿ ಸಂಭ್ರಮಾಚರಣೆ

ಕಾರವಾರ: ರಾಮಚಂದ್ರಾಪುರ ಮಠಕ್ಕೆ ಹಿಂದಿನ ಬಿಜೆಪಿ ಸರ್ಕಾರವು ನೀಡಿದ್ದ ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಮತ್ತೆ ಹಿಂತಿರುಗಿಸುವಂತೆ ಸುಪ್ರೀಂ ಕೋರ್ಟ್ ಆದೇಶಿದ್ದಲ್ಲದೆ ದೇವಾಲಯದ ನಿರ್ವಹಣೆಗಾಗಿ ಸಮಿತಿಯನ್ನು ರಚಿಸುವಂತೆ ನಿರ್ದೇಶನ ನೀಡಿದೆ.

ದೇವಾಲಯದ ಪುರೋಹಿತರ ನಡುವಿನ ಹನ್ನೆರಡು ವರ್ಷಗಳ ಜಗಳ ಇದೀಗ ಅಂತ್ಯವಾಗಿದೆ, ಅವರ ಪೂರ್ವಜರು ಮಹಾಬಲೇಶ್ವರನಿಗೆ ಶತಮಾನಗಳಿಂದ ಸೇವೆ ಸಲ್ಲಿಸಿದರು, ಮತ್ತು ರಾಮಚಂದ್ರಾಪುರ ಮಠದ ಆಡಳಿತ ಇದೀಗ ಕೊನೆಯಾಗಿದೆ. ದೇವಾಲಯದ ಆಡಳಿತವನ್ನು ಮಠದಿಂದ ಹಿಂಪಡೆಯುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 2019 ರಲ್ಲಿ ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರ ಆಶ್ರಯದಲ್ಲಿ ಸಮಿತಿಯನ್ನು ರಚಿಸುವಂತೆ ಅದು ನಿರ್ದೇಶಿಸಿದೆ.

ನ್ಯಾಯಾಲಯದ ಈ ಈ ಆದೇಶವು ದೇವಾಲಯದ ಅರ್ಚಕರು ಹಾಗೂ ಯಾಜಕರಲ್ಲಿ ಸಂತೋಷವನ್ನು ತಂದಿದೆ. ಅವರ ಪೂರ್ವಜರು ಮಹಾಬಲೇಶ್ವರನನ್ನು ಶತಮಾನದಿಂದ ಪೂಜಿಸುತ್ತಿದ್ದರು, ಇದೀಗ ಮತ್ತೆ ತಮಗೆ ದೇವಾಲಯದ ನಿರ್ವಹಣೆ ಸಿಕ್ಕಿರುವುದಕ್ಕೆ ಅವರು ಪಟಾಕಿಗಳನ್ನು ಸಿಡಿಸಿ, ಸಿಹಿತಿನಿಸನ್ನು ವಿತರಿಸಿ ಸಂಭ್ರಮಿಸಿದ್ದಾರೆ. "ತೀರ್ಪಿನ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ" ಎಂದು ಅರ್ಚಕರಲ್ಲಿ ಒಬ್ಬರೂ, ಅರ್ಜಿದಾರರಾದ ರಾಜಗೋಪಾಲ್ ಆದಿ ಹೇಳಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠವು 15 ದಿನಗಳ ಒಳಗೆ ದೇವಾಲಯವನ್ನು ಸರ್ಕಾರಕ್ಕೆ ಹಸ್ತಾಂತರಿಸುವಂತೆ ನೋಡಿಕೊಳ್ಳಬೇಕು ಮತ್ತು ತಕ್ಷಣವೇ ಸಮಿತಿಯನ್ನು ರಚಿಸಬೇಕೆಂದು ಸೋಮವಾರದ ತನ್ನ ಆದೇಶದಲ್ಲಿ ಹೇಳಿದೆ.

ಹಿನ್ನೆಲೆ

ಹಿಂದಿನ ಬಿ.ಎಸ್.ಯಡಿಯೂರಪ್ಪ ಸರ್ಕಾರವು 2008 ರಲ್ಲಿ ದೇವಾಲಯವನ್ನು ಮಠಕ್ಕೆ ಹಸ್ತಾಂತರಿಸಿದ ನಂತರ, ಶ್ರೀ ಕ್ಷೇತ್ರ ಗೋಕರ್ಣ ಹಿತರಕ್ಷಣಾ ಸಮಿತಿಯು ದೇವಾಲಯವನ್ನು ಹಸ್ತಾಂತರಿಸುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಅರ್ಜಿದಾರರು ತಮ್ಮ ಅರ್ಜಿಯಲ್ಲಿ ದೇವಾಲಯವನ್ನು ಹಸ್ತಾಂತರಿಸುವುದು ಕಾನೂನುಬಾಹಿರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸರಿಯಲ್ಲ ಎಂದು ವಾದಿಸಿತ್ತು, ದೇವಾಲಯವು ಸಾರ್ವಜನಿಕರಿಗೆ ಸೇರಿದ್ದು, ಇಲ್ಲಿನ ಪುರೋಹಿತರು ಆನುವಂಶಿಕರಾಗಿದ್ದಾರೆ ಎಂದು ಅವರು ಹೇಳಿದರು.ನ್ಯಾಯಮೂರ್ತಿ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ದೇವಾಲಯವನ್ನು ಮಠಕ್ಕೆ ಹಸ್ತಾಂತರಿಸುವ ಸರ್ಕಾರದ ಆದೇಶವನ್ನು ರದ್ದುಪಡಿಸುವವರೆಗೂ ಈ ವಿಷಯವನ್ನು 10 ವರ್ಷಗಳಿಗಿಂತ ಹೆಚ್ಚು ಕಾಲ ಎಳೆದುಕೊಂಡೊಯ್ದಿತು. ಆ ಬಳಿಕ ನ್ಯಾಯಮೂರ್ತಿ ಶ್ರೀ ಕೃಷ್ಣ ಅವರೊಂದಿಗೆ ಸಮಿತಿ ರಚಿಸುವಂತೆ ಅದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಆದರೆ ವಿಭಾಗೀಯ ಪೀಠದ ಆದೇಶಕ್ಕೆ ತಡೆ ಕೋರಿ ಮಠವು ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com