ಬೆಂಗಳೂರಿನಲ್ಲಿ ಅಕ್ರಮ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಸಿಸಿಬಿ ದಾಳಿ: ಮೂವರ ಬಂಧನ

ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು ಪಶ್ಚಿಮ ಬಂಗಾಳ ಮೂಲದ ಮೂವರನ್ನು ಸೆರೆಹಿಡಿದ್ದಾರೆ.
ಸಿಸಿಬಿನಿಂದ ಬಂಧಿತರಾದ ದಂಧೆಕೋರರು
ಸಿಸಿಬಿನಿಂದ ಬಂಧಿತರಾದ ದಂಧೆಕೋರರು

ಬೆಂಗಳೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು ಪಶ್ಚಿಮ ಬಂಗಾಳ ಮೂಲದ ಮೂವರನ್ನು ಸೆರೆಹಿಡಿದ್ದಾರೆ.

ಬಂಧಿತರನ್ನು ನೌಶದ್ ಅಲಿ (55), ರಿಯಾಜುಲ್ ಶೇಕ್ (31), ಸಮೀರ್ (40) ಎಂದು ಗುರುತಿಸಲಾಗಿದೆ.

ಇವರುಗಳು ಬೇರೆಯವರ ಹೆಸರಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಂಡು ಮಹಿಳೆಯರ ಕಳ್ಳಸಾಗಣೆ ನಡೆಸಿ ಈ ದಂಧೆ ನಡೆಸಿದ್ದರೆಂದು ಪೋಲೀಸರು ಹೇಳಿದ್ದಾರೆ. ದಾಳಿಯ ವೇಳೆ ಬೇರೆ ಹೆಸರಲ್ಲಿದ್ದ 11 ಆಧಾರ್ ಕಾರ್ಡ್ ಗಳು ಹಾಗೂ ಕೆಲ ಗುರುತಿನ ಚೀಟಿ ವಶಪಡಿಸಿಕೊಂಡು, ವೈಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರೂ ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ

ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com