ಆಮ್ಲಜನಕ ಕೊರತೆ: ಬಳ್ಳಾರಿ -ವಿಜಯನಗರದ ಆಕ್ಸಿಜನ್ ಘಟಕಗಳ ಮೊರೆ ಹೋದ ಇತರೆ ರಾಜ್ಯಗಳು

ಹೆಚ್ಚುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ದೇಶದ ಹಲವು ರಾಜ್ಯಗಳು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಮೊರೆ ಹೋಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಳ್ಳಾರಿ: ಹೆಚ್ಚುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ದೇಶದ ಹಲವು ರಾಜ್ಯಗಳು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಮೊರೆ ಹೋಗಿವೆ.

ಕರ್ನಾಟಕ ಸೇರಿದಂತೆ. ಮಾಹಾರಾಷ್ಟ್ರ, ಗುಜರಾತ್, ಮತ್ತು ಉತ್ತರ ಪ್ರದೇಶ ರಾಜ್ಯಗಳಿಂದ ಆಮ್ಲಜನಕಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಬಳ್ಳಾರಿಯ ಘಟಕಗಳಿಂದ ಆಮ್ಲಜನಕ ಸಂಗ್ರಹಿಸಲು ಪುಣೆ ಕಾರ್ಪೋರೇಷನ್ ಟ್ಯಾಂಕರ್ ಗಳನ್ನು ಕಳುಹಿಸಿದೆ.

ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಒಟ್ಟು 8 ಆಮ್ಲಜನಕ ತಯಾರಿಕಾ ಘಟಕಗಳಿದ್ದು ಆಕ್ಸಿಜನ್ ಉತ್ಪಾದನೆ ಹೆಚ್ಚಳ ಮಾಡಲಾಗುತ್ತದೆ ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ, ಮುಂಜಾಗರೂಕಾ ಕ್ರಮವಾಗಿ ಪ್ರತಿ ದಿನ 30 ಟನ್ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ.

ರಾಜ್ಯಕ್ಕೆ ಅಗತ್ಯ ಪ್ರಮಾಣದ ಆಕ್ಸಿಜನ್ ಸಂಗ್ರಹಿಸಿಕೊಂಡು ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರಕ್ಕೆ 300 ಟನ್ ಆಮ್ಸಜನಕ ಪೂರೈಕೆ ಮಾಡುವ ಯೋಜನೆಯಿದೆ.  ನಮ್ಮ 8 ಘಟಕಗಳಿಂದ ಪ್ರತಿದಿನ 10 ಟನ್ ಆಮ್ಲಜನಕವನ್ನು ಪೂರೈಕೆ ಮಾಡಬಹುದಾಗಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ 300 ಟನ್ ಆಕ್ಸಿಜನ್ ಗೆಆರ್ಡರ್ ನೀಡಿದೆ ಎಂದು ಬಳ್ಳಾರಿ ಜಿಲ್ಲಾಡಳಿತದ ಅಧಿಕಾರಿಗಗಳು ತಿಳಿಸಿದ್ದಾರೆ.

ಇದರ ಜೊತೆಗೆ ಗುಜರಾತ್, ಮಧ್ಯಪ್ರದೇಶ, ಮತ್ತು ಉತ್ತರ ಪ್ರದೇಶಗಳಿಂದಲೂ ಕೂಡ ಆಕ್ಸಿಜನ್ ಗಾಗಿ ಬೇಡಿಕೆ ಬಂದಿದೆ, ಆಕ್ಸಿಜನ್ ಸಿಲಿಂಡರ್  45 ಕೆಜಿ ತುಂಬುವ ಸಾಮರ್ಥ್ಯವಿರುತ್ತದೆ.

ಬಳ್ಳಾರಿಯಲ್ಲಿ ಅಧಿಕ ಸಂಖ್ಯೆ ಕಾರ್ಖಾನೆಗಳಿದ್ದು, ಬೇರೆ ಜಿಲ್ಲೆಗಳಿಗೆ ಹೋಲಿಸಿದರೇ ಆಕ್ಸಿಜನ್ ತಯಾರಿಸಲು ಬೇಕಾಗುವ ಕಚ್ಚಾ ಸಾಮಾಗ್ರಿಗಗಳು ಸುಲಭವಾಗಿ ಸಿಗುತ್ತವೆ.

ಉತ್ತರ ಕರ್ನಾಟಕದ 8 ಜಿಲ್ಲೆಗಳಿಗೆ ಬಳ್ಳಾರಿ ಘಟಕದಿಂದಲೇ ಆಕ್ಸಿಜನ್ ಪೂರೈಕೆಯಾಗುತ್ತಿದೆ, ಇದರ ಜೊತೆಗೆ ಉತ್ಪದನಾ ಪ್ರಮಾಣವನ್ನು ಕೂಡ ಹೆಚ್ಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com