ಬೆಂಗಳೂರು: ಸರಗಳ್ಳನಿಗೆ ಮನ ಬಂದಂತೆ ಥಳಿಸಿದ ಸಾರ್ವಜನಿಕರು; ನಿಮ್ಹಾನ್ಸ್ ನಲ್ಲಿ ಸಾವು

ವೃದ್ಧೆಯೊಬ್ಬರ ಸರ ಕಸಿದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ಸಾರ್ವಜನಿಕರು ಮನಬಂದಂತೆ ಥಳಿಸಿದ ಕಾರಣ ಆತ ಸಾವನ್ನಪ್ಪಿದ್ದಾನೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವೃದ್ಧೆಯೊಬ್ಬರ ಸರ ಕಸಿದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ಸಾರ್ವಜನಿಕರು ಮನಬಂದಂತೆ ಥಳಿಸಿದ ಕಾರಣ ಆತ ಸಾವನ್ನಪ್ಪಿದ್ದಾನೆ.

ಭಾನುವಾರ ಮಧ್ಯಾಹ್ನ ಮಹೇಶ್.ಜಿ ಎಂಬಾತ ಮಹಿಳೆಯೋರ್ವರ ಸರ ಕಸಿದು ಪರಾರಿಯಾಗಲು ಯತ್ನಿಸಿದ, ಈ ವೇಳೆ ಆತನನ್ನು ಹಿಡಿದ ಮಾದನಾಯಕನಹಳ್ಳಿ ಸಾರ್ವಜನಿಕರು ಮನ ಬಂದಂತೆ ಥಳಿಸಿದ್ದಾರೆ, ಗಾಯಗೊಂಡಿದ್ದ ಆತನನ್ನು  ನಿಮ್ಹಾನ್ಸ್ ಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಸೋಮವಾರ ಸಾವನ್ನಪ್ಪಿದ್ದಾನೆ.

ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಹೇಶ್, ಸರಣಿ ಸರಗಳ್ಳತನದಲ್ಲಿಯೂ ಭಾಗಿಯಾಗಿದ್ದ, ಜೊತೆಗೆ ಕೊಲೆ ಯತ್ನ ಪ್ರಕರದಲ್ಲಿಯೂ ಆತನ ಹೆಸರಿತ್ತು.  ಜೂಜಾಟದ ಆರೋಪದ ಮೇಲೆ ಇತ್ತೀಚೆಗೆ ಸೂರ್ಯ ಸಿಟಿ ಪೊಲೀಸರು ಆತನನ್ನು ಬಂಧಿಸಿದ್ದರು.

ಶಾಂತಮ್ಮ ಎಂಬುವರು ಮಧ್ಯಾಹ್ನ 12.30ರ ಸುಮಾರಿಗೆ ತಮ್ಮ ಇಬ್ಬರು ಮೊಮ್ಮಕ್ಕಳೊಂದಿಗೆ ಅಂಗಡಿಗೆ ತೆರಳುತ್ತಿದ್ದರು, ಈ ವೇಳೆ ಸ್ಕೂಟರ್ ನಲ್ಲಿ ಬಂದ ಮಹೇಶ್ ಆಕೆಯ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದ, ಈ ವೇಳೆ ಮಹಿಳೆ ಶಾಂತಮ್ಮ ಜೋರಾಗಿ ಕೂಗಿಕೊಂಡಿದ್ದಾರೆ.

ಇದನ್ನು ಗಮನನಿಸಿದ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ನಂತರ ಪೊಲೀಸರಿಗೊಪ್ಪಿಸಿದ್ದಾರೆ.ಆತನನ್ನು ಪ್ರಥಮ ಚಿಕಿತ್ಸೆ ಕೊಡಿಸಿ ನಿಮ್ಹಾನ್ಸ್ ಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಫಲಿಸದೇ ಆತನ ಸಾವನಪ್ಪಿದ್ದಾನೆ. ಈ ಸಂಬಂಧ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com