ರಾಜ್ಯದಲ್ಲಿ ಕೊರೋನಾ ಹೆಚ್ಚಳ: ಕೆಲ ಖಾಸಗಿ ಆಸ್ಪತ್ರೆಗಳಿಂದ 'ಹೋಂ ಕೇರ್' ಪ್ಯಾಕೇಜ್ ವ್ಯವಸ್ಥೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನಕಳೆದಂತೆ ಕೊರೋನಾ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಕೊರೋನಾ ಪಾಸಿಟಿವ್ ಬರುತ್ತಿದ್ದಂತೆಯೇ ಆಸ್ಪತ್ರೆಗೆ ದಾಖಲಾಗಲು ಜನರು ಮುಗಿ ಬೀಳುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನಕಳೆದಂತೆ ಕೊರೋನಾ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಕೊರೋನಾ ಪಾಸಿಟಿವ್ ಬರುತ್ತಿದ್ದಂತೆಯೇ ಆಸ್ಪತ್ರೆಗೆ ದಾಖಲಾಗಲು ಜನರು ಮುಗಿ ಬೀಳುತ್ತಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಎದುರಾಗಿದೆ. ಹೀಗಾಗಿ ನಗರದ ಖಾಸಗಿ ಆಸ್ಪತ್ರೆಗಳು ಸೋಂಕಿಗೊಳಗಾದ ಜನರಿಗೆ ಹೋಂ ಕೇರ್ ಪ್ಯಾಕೇಜ್ ಗಳನ್ನು ನೀಡಲು ಮುಂದಾಗಿದೆ. 

ಸೋಂಕಿನ ಲಕ್ಷಣಗಳು ಅಷ್ಟಾಗಿ ಗೋಚರಿಸದವರಿಗೆ ಮನೆ ಆರೈಕೆಗೆ ಒಳಗಾಗಲು ಸರ್ಕಾರವು ಅವಕಾಶ ನೀಡಿದೆ. ಇದರಿಂದಾಗಿ ಕೋವಿಡ್ ಪೀಡಿತರಲ್ಲಿ ಶೇ 90ರಷ್ಟು ಮಂದಿ ಮನೆ ಆರೈಕೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, 60 ವರ್ಷ ಮೇಲ್ಪಟ್ಟವರು ಸೇರಿದಂತೆ ಕೆಲವರಿಗೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಇಳಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಕಾರಣ ಕೆಲ ದಿನಗಳಿಂದ ಆಸ್ಪತ್ರೆಗೆ ತೆರಳುವವರ ಸಂಖ್ಯೆ ಏರಿಕೆ ಕಂಡಿದೆ. 

ಇದರಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಬಹುತೇಕ ಹಾಸಿಗೆಗಳು ಭರ್ತಿಯಾಗಿವೆ. 

ಈ ಹಿನ್ನೆಲೆಯಲ್ಲಿ ನಗರದ ಕೆಲ ಆಸ್ಪತ್ರೆಗಳು 14 ದಿನಗಳ ಕಾಲ ಸೋಂಕಿತರಿಗೆ ಹೋಂ ಐಸೋಲೇಷನ್ ಸೇವೆ ನೀಡಲು ಮುಂದಾಗಿವೆ. ಇನ್ನೂ ಕೆಲ ಆಸ್ಪತ್ರೆಗಳು 7 ದಿನಗಳ ಸೇವೆ ಒದಗಿಸಲು ಮುಂದಾಗಿದವೆ. ಈ ಸೇವೆಗಳು ರೋಗಿಗಳ ಅಗತ್ಯತೆಗಳಿಗೆ ಅನುಸಾರವಾಗಿ ಒದಗಿಸಲಾಗುತ್ತದೆ ಎಂದು ಆಸ್ಪತ್ರೆಗಳು ಮಾಹಿತಿ ನೀಡಿವೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯೆ ಬೃಂದಾ ಎಂಎಸ್ ಅವರು, ಪ್ರಸ್ತು ನಮ್ಮ ಆಸ್ಪತ್ರೆಯಿಂದ ಸೋಂಕಿತ ವ್ಯಕ್ತಿಗಳಿಗೆ ರೂ.8,000 ವೆಚ್ಚದಲ್ಲಿ 14 ದಿನಗಳ ಹೋಮ್ ಐಸೋಲೇಷನ್ ಸೇವೆ ನೀಡುತ್ತಿದ್ದೇನೆ. ನಗರದಲ್ಲಿ ಸೋಂಕು ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಎರಡನೇ ಅಲೆ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಹೋಂ ಕೇರ್ ಸೇವೆಗಳಿಗೆ ಶೇ.200ರಷ್ಟು ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 

ಕೆಲ ಆಸ್ಪತ್ರೆಗಳು ಸೋಂಕಿತರು ದೂರವಾಣಿ ಕರೆ ಹಾಗೂ ವಿಡಿಯೋ ಮೂಲಕ ವೈದ್ಯರನ್ನು ಸಂಪರ್ಕಿಸುವ ಅವಕಾಶವನ್ನು ಮಾಡಿಕೊಡುತ್ತಿವೆ. ನರ್ಸ್ ಗಳು ಎರಡು ದಿನಗಳಿಗೊಮ್ಮೆ ಮನೆಗಳಿಗೆ ಭೇಟಿ ನೀಡಿ ರೋಗಿಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆಂದು ತಿಳಿದುಬಂದಿದೆ. 

ನಗರದ ಅರ್ಕಾ ಆಸ್ಪತ್ರೆಯಲ್ಲಿಯೂ ಹೋಂ ಕೇರ್ ಸೇವೆಗಳನ್ನು ನೀಡಲಾಗುತ್ತಿದ್ದು, ಸೋಂಕಿತರಿಗೆ 14 ದಿನಗಳ ಹೋಮ್ ಕೇರ್ ಸೇವೆಗಳನ್ನು ಈ ಆಸ್ಪತ್ರೆ ನೀಡುತ್ತಿದೆ. ಪ್ಯಾಕೇಜ್ ನಲ್ಲಿ ಪ್ರತೀನಿತ್ಯ ವೈದ್ಯರ ಪರಿಶೀಲನೆ, ದಿನಕ್ಕೆ ಮೂರು ಬಾರಿ ಮನೆಗಳಿಗೆ ನರ್ಸ್ ಭೇಟಿ, ಆರೋಗ್ಯ  ಪರಿಶೀಲನೆ, ಅಗತ್ಯವಿದ್ದರೆ ತಜ್ಞ ವೈದ್ಯರು, ಡಯಟೀಷಿಯನ್, ಮನೋವೈದ್ಯರ ಸಂಪರ್ಕ, ಡಿಜಿಟಲ್ ಥರ್ಮಾಮೀಟರ್, ಡಿಜಿಟಲ್ ಬಿಪಿ ಉಪಕರಣಗ, ಡಿಜಿಟಲ್ ಪಲ್ಸ್ ಆಕ್ಸಿಮೀಟರ್, 14 ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ಸ್ ಗಳನ್ನು ಪ್ಯಾಕೇಜ್ ನಲ್ಲಿ ನೀಡಲಾಗುತ್ತಿದೆ.

ಇನ್ನು ಸರ್ಜಾಪುರದಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ, ಸೋಂಕಿತ ವ್ಯಕ್ತಿಗಳಿಗೆ 7 ದಿನಗಳ ಕ್ವಾರಂಟೈನ್ ಸೇವೆಗಳನ್ನು ನೀಡಲಾಗುತ್ತಿದೆ. ಇದರಲ್ಲಿ ವೈದ್ಯರುು, ಡಯಟೀಷಿಯನ್ ಗಳೊಂದಿಗೆ ಸಮಾಲೋಚನೆ, ದಿನನಿತ್ಯ ನರ್ಸ್ ಗಳಿಂಗ ಆರೋಗ್ಯ ತಪಾಸಣೆ, ಅಗತ್ಯ ಬಿದ್ದರೆ ಹಾಸಿಗೆ ವ್ಯವಸ್ಥೆ, ಇತರೆ ಹೆಚ್ಚುವರಿ ಶುಲ್ಕದೊಂದಿಗೆ ಇನ್ನಿತರೆ ಸೇವೆಗಳನ್ನು ನೀಡಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com