ರೈಲಿಗಾದ ಪರಿಸ್ಥಿತಿಯೇ ಮೆಟ್ರೋಗೂ ಆಗಲಿದೆ: ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗದ ಕುರಿತು ತಜ್ಞರ ಅಭಿಪ್ರಾಯ

ಬೆಂಗಳೂರು ನಗರದಿಂದ ನಗರವನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೂತನ ಮೆಟ್ರೋ ರೈಲು ಮಾರ್ಗದ ಕುರಿತು ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದು, ರೈಲಿಗಾದ ಪರಿಸ್ಥಿಯೇ ಮೆಟ್ರೋ ಕೂಡ ಎದುರಿಸಲಿದ್ದು, ವಿಮಾನಯಾನಿಗಳು ಮೆಟ್ರೋ ರೈಲಿನಿಂದ ವಿಮುಖರಾಗಲಿದ್ದಾರೆ ಎಂದು  ಎಚ್ಚರಿಸಿದೆ.
ಮೆಟ್ರೋ ರೈಲು (ಸಂಗ್ರಹ ಚಿತ್ರ)
ಮೆಟ್ರೋ ರೈಲು (ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರು ನಗರದಿಂದ ನಗರವನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೂತನ ಮೆಟ್ರೋ ರೈಲು ಮಾರ್ಗದ ಕುರಿತು ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದು, ರೈಲಿಗಾದ ಪರಿಸ್ಥಿಯೇ ಮೆಟ್ರೋ ಕೂಡ ಎದುರಿಸಲಿದ್ದು, ವಿಮಾನಯಾನಿಗಳು ಮೆಟ್ರೋ ರೈಲಿನಿಂದ ವಿಮುಖರಾಗಲಿದ್ದಾರೆ ಎಂದು  ಎಚ್ಚರಿಸಿದೆ.

ಈ ಕುರಿತಂತೆ ಮಾತನಾಡಿರುವ ಸಾರ್ವಜನಿಕ ಸಾರಿಗೆ ಪ್ರಚಾರಕ ಸಂಜೀವ್ ದ್ಯಾಮಣ್ಣವರ್ ಅವರು ನಿಗದಿತ ಗಡುವಿನೊಳಗೆ ಈ ಮಾರ್ಗದ ಮೆಟ್ರೋ ರೈಲು ಯೋಜನೆ ಪೂರ್ಣಗೊಳ್ಳುವುದು ಅನುಮಾನವಾಗಿದೆ. ಈ ಲೈನ್ ಪೂರ್ಣಗೊಳ್ಳುವ ಹೊತ್ತಿಗೆ, 2030 ಆಗಿರುತ್ತದೆ ಮತ್ತು ಈಯೋಜನೆಯ ವೆಚ್ಚ ಕೂಡ  ಸುಮಾರು 30,000 ಕೋಟಿ ರೂ. ದಾಟಿರುತ್ತದೆ. ಸಿಲ್ಕ್ ಬೋರ್ಡ್ ನಿಲ್ದಾಣದವರೆಗೆ ಇಂಟರ್ಚೇಂಜ್ಗಳು, ಕ್ರಾಸ್ ಓವರ್ಗಳು ಮತ್ತು ಹಲವಾರು ನಿಲುಗಡೆ ಇರುವುದರಿಂದ ವಿಮಾನ ನಿಲ್ದಾಣವನ್ನು ತಲುಪಲು 1.5-2 ಗಂಟೆಗಳ ಸಮಯ ಬೇಕಾಗುತ್ತದೆ. ಇದರಿಂದ ವಿಮಾನ ಪ್ರಯಾಣಿಕರು ಮೆಟ್ರೋ ರೈಲು ಪ್ರಯಾಣ  ಮಾಡುವುದರಿಂದ ವಿಮುಖರಾಗುವ ಅಪಾಯವಿದೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಸಾರಿಗೆ ತಜ್ಞ ಎಂ ಎನ್ ಶ್ರೀಹಾರಿ ಅವರು, 'ವಿಮಾನ ನಿಲ್ದಾಣಕ್ಕೆ ಹೊಸ ಮಾರ್ಗಗಳು ಅತ್ಯಗತ್ಯ. ಈ ಮಾರ್ಗದಿಂದ ಐಟಿ ವೃತ್ತಿಪರರು ವಿಮಾನ ಪ್ರಯಾಣಿಕರಿಗಿಂತ ಹೆಚ್ಚಿನ ಲಾಭ ಪಡೆಯುತ್ತಾರೆ. ಔಟರ್ ರಿಂಗ್ ರಸ್ತೆಯಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಇರುವುದರಿಂದ ಇಲ್ಲಿನ  ವಾಹನಗಳು ಕಡಿಮೆ ವೇಗದಲ್ಲಿ ಅಂದರೆ ಗರಿಷ್ಠ ಗಂಟೆಗೆ 9 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಇದರಿಂದ ಹೆಚ್ಚಿನ ಮಾಲಿನ್ಯವಾಗುತ್ತದೆ. ಹೀಗಾಗಿ ಮೆಟ್ರೋ ಮಾರ್ಗ ಐಟಿ ವೃತ್ತಿಪರರಿಗೆ ನೆರವಾಗುತ್ತದೆ. ಆದರೆ ಯೋಜನೆ ಆದಷ್ಟು ಬೇಗ ಪೂರ್ಣವಾಗುವಂತೆ ಅಥವಾ ನಿಗದಿತ ಗಡುವಿನೊಳಗೇ ಪೂರ್ಣಗೊಳ್ಳುವಂತೆ ಕ್ರಮ  ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇಲ್ಲದೇ ಹೋದರೆ ರೈಲಿನಂತೆಯೇ ಪ್ರಯಾಣಿಕರು ಮೆಟ್ರೋ ಪ್ರಯಾಣದಿಂದಲೂ ವಿಮುಖರಾಗಲಿದ್ದಾರೆ ಎಂದು ಹೇಳಿದರು. 

ಚಿಪ್ ಡಿಸೈನರ್ ಪ್ರದೀಪ್ ಕನಪೂರೆ ಅವರು ಈ ಬಗ್ಗೆ ಮಾತನಾಡಿದ್ದು, ಸಿಲ್ಕ್ ಬೋರ್ಡ್‌ನಲ್ಲಿರುವ ತಮ್ಮ ಮನೆಯಿಂದ ಒಆರ್ ಆರ್ ಮೂಲಕ ಮಹಾದೇವಪುರದಲ್ಲಿರುವ ತಮ್ಮ ಕಚೇರಿಗೆ ತೆರಳಲು ಸುಮಾರು 45 ನಿಮಿಷಗಳ ತಗುಲುತ್ತದೆ. ಇದು ದೊಡ್ಡ ತಲೆನೋವು.. ಪ್ರಯಾಣ ಮಾಡುವ ವೇಳೆ ಮಳೆ ಬಂದರೆ  ಅಥವಾ ಈ ಮಾರ್ಗದಲ್ಲಿ ಯಾರಾದರೂ ವಿಐಪಿಗಳು ಪ್ರಯಾಣಿಸಿದರೆ ಟ್ರಾಫಿಕ್ ಜಾಮ್ ಉಂಟಾಗಿ ಮತ್ತಷ್ಟು ಸಮಯ ತೆಗೆದುಕೊಳ್ಳುತ್ತದೆ. ಮನೆಗೆ ಹಿಂದಿರುಗುವಾಗ ನಾನು ಒಮ್ಮೆ ಎರಡು ಗಂಟೆಗಳ ಸಮಯವನ್ನು ಟ್ರಾಫಿಕ್ ನಲ್ಲೇ ಕಳೆದಿದ್ದೇನೆ. ಮೆಟ್ರೋ ಮಾರ್ಗ ಆರಂಭವಾದರೆ ಕೊಂಚ ನೆರವಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com