24 ಗಂಟೆಗಳಲ್ಲಿ ಕೋವಿಡ್ ಆರ್​ಟಿ-ಪಿಸಿಆರ್ ವರದಿ ಒದಗಿಸಿ; ಲ್ಯಾಬ್ ಗಳಿಗೆ ರಾಜ್ಯ ಸರ್ಕಾರ ಸೂಚನೆ

ಸ್ಯಾಂಪಲ್ ಸಂಗ್ರಹಿಸಿದ 24 ಗಂಟೆಗಳಲ್ಲಿ ಕೋವಿಡ್ ಆರ್​ಟಿ-ಪಿಸಿಆರ್ ವರದಿ ನೀಡಬೇಕೆಂದು ರಾಜ್ಯದ ಎಳ್ಲಾ ಲ್ಯಾಬ್ ಗಳು ಹಾಗೂ ಪರೀಕ್ಷಾ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಬುಧವಾರ ಸೂಚನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸ್ಯಾಂಪಲ್ ಸಂಗ್ರಹಿಸಿದ 24 ಗಂಟೆಗಳಲ್ಲಿ ಕೋವಿಡ್ ಆರ್​ಟಿ-ಪಿಸಿಆರ್ ವರದಿ ನೀಡಬೇಕೆಂದು ರಾಜ್ಯದ ಎಳ್ಲಾ ಲ್ಯಾಬ್ ಗಳು ಹಾಗೂ ಪರೀಕ್ಷಾ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಬುಧವಾರ ಸೂಚನೆ ನೀಡಿದೆ. 

ಕೆಲ ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಕೊವಿಡ್ ಆರ್​ಟಿ-ಪಿಸಿಆರ್ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿದ ಬಳಿಕ ಪರೀಕ್ಷಾ ಫಲಿತಾಂಶವನ್ನು ಅತಿ ಶೀಘ್ರದಲ್ಲಿ ಪ್ರಕಟಿಸಬೇಕು. ಪರೀಕ್ಷೆಯ ವರದಿಯನ್ನು 24 ಗಂಟೆಯೊಳಗೆ ನೀಡುವಂತೆ ಸೂಚನೆ ನೀಡಿತ್ತು. ಅಲ್ಲದೇ, ಪರೀಕ್ಷಾ ಮಾಹಿತಿಯನ್ನು 24 ಗಂಟೆಗಳ ಅವಧಿಯೊಳಗಾಗಿ ICMR ಪೋರ್ಟಲ್​ನಲ್ಲಿ ನಮೂದಿಸಬೇಕು ಎಂದು ಆದೇಶಿಸಿತ್ತು. 

ಪರೀಕ್ಷಾ ವರದಿಗಳನ್ನು ತಡವಾಗಿ ನೀಡಲಾಗುತ್ತಿದೆ ಎಂದು ಸಾಕಷ್ಟು ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್ ಈ ನಿರ್ದೇಶನ ನೀಡಿತ್ತು ಎಂದು ಮೂಲಗಳು ತಿಳಿಸಿವೆ.
 
ಹೈಕೋರ್ಟ್ ಆದೇಶದ ಬೆನ್ನಲ್ಲೇ ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರು ಎಲ್ಲಾ ಪ್ರಯೋಗಾಲಯಗಳು ಹಾಗೂ ಪರೀಕ್ಷಾ ಸಂಸ್ಥೆಗಳಿಗೆ ಸ್ಯಾಂಪಲ್ ಸಂಗ್ರಹಿಸಿದ 24 ಗಂಟೆಗಳಲ್ಲಿ ಕೋವಿಡ್ ಆರ್​ಟಿ-ಪಿಸಿಆರ್ ವರದಿ ನೀಡಬೇಕೆಂದು ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com