ಖಾಸಗಿ ಭೂಮಿಯಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರಕ್ಕೆ ರಾಜ್ಯ ಸರ್ಕಾರ ಅನುಮತಿ

ಕೋವಿಡ್-19 ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾದ ನಂತರ, ಕರ್ನಾಟಕ ಸರ್ಕಾರವು ಕೋವಿಡ್ ನಿಂದ ಮೃತಪಟ್ಟವರ ಶವಗಳನ್ನು ಮೃತಪಟ್ಟವರ ಸಂಬಂಧಿಕರ ಒಡೆತನದ ಖಾಸಗಿ ಭೂಮಿಯಲ್ಲಿ ಹೂಳಲು ಅಥವಾ ಸುಡಲು ಅನುಮತಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್-19 ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾದ ನಂತರ, ಕರ್ನಾಟಕ ಸರ್ಕಾರವು ಕೋವಿಡ್ ನಿಂದ ಮೃತಪಟ್ಟವರ ಶವಗಳನ್ನು ಮೃತಪಟ್ಟವರ ಸಂಬಂಧಿಕರ ಒಡೆತನದ ಖಾಸಗಿ ಭೂಮಿಯಲ್ಲಿ ಹೂಳಲು ಅಥವಾ ಸುಡಲು ಅನುಮತಿಸಿದೆ.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹೊರಡಿಸಿದ ಹೊಸ ಸುತ್ತೋಲೆಯ ಪ್ರಕಾರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವವರು ಮಾಸ್ಕ್ ಗಳನ್ನು ಧರಿಸಬೇಕು.ತರ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಸತ್ತವರನ್ನು ಸ್ಪರ್ಶಿಸಲು ಅಗತ್ಯವಿರುವವರು ಪೂರ್ಣ ಪಿಪಿಇ ಕಿಟ್ ಮತ್ತು ಕೈಗವಸುಗಳನ್ನು ಧರಿಸುವುದು ಕಡ್ಡಾಯವಾಗಿದೆ.

ಕೋವಿಡ್ ಮೃತ ದೇಹಗಳನ್ನು ಸಾಗಿಸಲು ಬಳಸುವ ವಾಹನವನ್ನು ಶೇಕಡಾ ಒಂದು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಬಳಸಿ ಸೋಂಕುರಹಿತಗೊಳಿಸಬೇಕಾಗುತ್ತದೆ, ಇದನ್ನು ಸಾಮಾನ್ಯವಾಗಿ ಬ್ಲೀಚ್ ಎಂದು ಕರೆಯಲಾಗುತ್ತದೆ.

ರೋಗಿಯು ಮೃತಪಟ್ಟ ಸ್ಥಳವನ್ನು ಹೊರತುಪಡಿಸಿ ಅಂತಹ ಮೃತ ದೇಹವನ್ನು ಸಾಗಿಸುವ ಸಂದರ್ಭದಲ್ಲಿ, ಸರಿಯಾಗಿ ಸಹಿ ಮಾಡಿದ ಪ್ರಮಾಣಪತ್ರವನ್ನು ಕೊಂಡೊಯ್ಯುವಂತಹ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಶವದೊಡನೆ ತೆರಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com