ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಿಗದ ಬೆಡ್, ಕಾರಿಡಾರ್ ನಲ್ಲೇ ಮಲಗಿ ಕೋವಿಡ್ ರೋಗಿಗಳ ನರಳಾಟ

ಪರಿಸ್ಥಿತಿ ಅಸಮರ್ಪಕ ನಿರ್ವಹಣೆ, ಬೆಡ್ ಗಳು ಹಾಗೂ ವೆಂಟಿಲೇಟರ್ ಗಳ ಕೊರತೆ ಬೀದರ್ ಕೊರೋನಾ ರೋಗಿಗಳ ಸಮಸ್ಯೆಯನ್ನು ಮತ್ತಷ್ಟು ಭೀಕರಗೊಳಿಸಿದೆ.
ಬೀದರ್  ನ ಬ್ರಿಮ್ಸ್ ಆಸ್ಪತ್ರೆ
ಬೀದರ್ ನ ಬ್ರಿಮ್ಸ್ ಆಸ್ಪತ್ರೆ

ಬೀದರ್: ಪರಿಸ್ಥಿತಿ ಅಸಮರ್ಪಕ ನಿರ್ವಹಣೆ, ಬೆಡ್ ಗಳು ಹಾಗೂ ವೆಂಟಿಲೇಟರ್ ಗಳ ಕೊರತೆ ಬೀದರ್ ಕೊರೋನಾ ರೋಗಿಗಳ ಸಮಸ್ಯೆಯನ್ನು ಮತ್ತಷ್ಟು ಭೀಕರಗೊಳಿಸಿದೆ.

ಬೀದರ್ ಬ್ರಿಮ್ಸ್ ಆಸ್ಪತ್ರೆ ಕಾರಿಡಾರಿನಲ್ಲಿ ಹಲವು ಕೋವಿಡ್ ರೋಗಿಗಳು ನೆಲದ ಮೇಲೆ ಮಲಗಿರುವುದು ಕಂಡು ಬಂತು, ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಆಸ್ಪತ್ರೆಯ ಕಾರಿಡಾರ್‌ಗಳಲ್ಲಿ ಮಲಗುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿದ್ಧರಿದ್ದೇವೆ ಎಂದು ವೈದ್ಯರಿಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರು ಬುಧವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿದರು. ಕೋವಿಡ್ ರೋಗಿಗಳು ಆಸ್ಪತ್ರೆಯಲ್ಲಿ ನೆಲದ ಮೇಲೆ ಮಲಗಿದ್ದಾರೆ ಎಂಬ ವಿಷಯವನ್ನು ಅವರು ನಿರಾಕರಿಸಲಿಲ್ಲ.  ಆದರೆ ಅವರಲ್ಲಿ ಹೆಚ್ಚಿನವರು ರೋಗಿಗಳ ಜೊತೆಗೆ ಬಂದಿರುವವರು ಎಂದು  ಹೇಳಿದರು. ಸಣ್ಣ ಪುಟ್ಟ ರೋಗ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿವಿಧ ತಾಲೂಕುಗಳಿಂದ ಜನ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.

ಜಿಲ್ಲಾಡಳಿತ ಜಿರಾ ಕನ್ವೆನ್ಷನ್ ಹಾಲ್ ನಲ್ಲಿ 200 ಬೆಡ್, ಶಾಹಿನ್ ಪಿಯು ಕಾಲೇಜಿನಲ್ಲಿ 100 ಬೆಡ್  ವ್ಯವಸ್ಥೆ ಮಾಡಿದೆ,  ಸರ್ಕಾರ ಬಸವ ಕಲ್ಯಾಣ, ಹುಮ್ನಾಬಾದ್, ಔರಾದ್ ಮತ್ತು ಭಾಲ್ಕಿಯಲ್ಲಿ  ಕೋವಿಡ್ ಆಸ್ಪತ್ರೆ ತೆರೆದು ಸರ್ಕಾರಿ ವೈದ್ಯರನ್ನು ನಿಯೋಜಿಸಿದೆ, ಆದರೆ ಹೆಚ್ಚಿನ  ಪ್ರಮಾಣದಲ್ಲಿ ಬ್ರಿಮ್ಸ್ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.ಜಿಲ್ಲೆಯಲ್ಲಿ 2,822 ಸಕ್ರಿಯ ಕೋವಿಡ್ ಕೇಸ್ ಗಳಿದ್ದು, 905 ಬೆಡ್ ಲಭ್ಯವಿದೆ ಎಂದು ತಿಳಿದು ಬಂದಿದೆ.

ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ ನಂತರ ಅಧಿಕಾರಿಗಳು ಕೋವಿಡ್ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಿದ್ದಾರೆ, ಸದ್ಯ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ ಎಂದು ಮೂಲಗಳು ತಿಳಿಸಿವೆ.

ಔರಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಭಯ ವ್ಯಕ್ತ ಪಡಿಸಿರುವ ಭೀಮಪ್ಪ ಔರಾದ್ಕರ್ ಎಂಬ ವ್ಯಕ್ತಿ ತನ್ನ ಸಹೋದರನ ಚಿಕಿತ್ಸೆಗಾಗಿ ಬ್ರಿಮ್ಸ್ ಗೆ ಬಂದಿರುವುದಾಗಿ ತಿಳಿಸಿದರು. ಬ್ರಿಮ್ಸ್ ಆಸ್ಪತ್ರೆಯ ಕಾರಿಡಾರ್ ನಲ್ಲಿ ರೋಗಿಗಳು ಮಲಗಿರುವುದನ್ನು ನಮ್ಮ ಬೆಂಬಲಿಗರು ನೋಡಿದ್ದಾರೆ ಎಂದು ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಹೇಳಿದ್ದಾರೆ, 

ಡಿಸಿ ಉತ್ತಮ ಕೆಲಸ ಮಾಡುತ್ತಿದ್ದರೂ, ಜಿಲ್ಲಾ ಆರೋಗ್ಯ ಅಧಿಕಾರಿ ಸೇರಿದಂತೆ ಕೆಲವು ಅಧಿಕಾರಿಗಳು ರೋಗಿಗಳ ತೊಂದರೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ,ನಅಧಿಕಾರಿಗಳ ನಡುವೆ ಸರಿಯಾದ ಸಮನ್ವಯವಿಲ್ಲ. ಕೋವಿಡ್ ಚಿಕಿತ್ಸೆಗೆ ಲಭ್ಯವಿರುವ ವಿವಿಧ ಆಸ್ಪತ್ರೆಗಳ ಬಗ್ಗೆ ಅವರು ಜಾಗೃತಿ ಮೂಡಿಸಬಹುದಿತ್ತು ಎಂದು ಅವರು ಹೇಳಿದರು.

ಜಿಲ್ಲೆಯು ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿದೆ. ಜಿಲ್ಲಾಡಳಿತ ಈಗ ಎಚ್ಚರಗೊಳ್ಳದಿದ್ದರೆ, ರೋಗಿಗಳು ರಸ್ತೆಯ ಮೇಲೆ ಮಲಗುತ್ತಾರೆ ಎಂದು ಖಂಡ್ರೆ ಎಚ್ಚರಿಸಿದ್ದಾರೆ. ಬ್ರಿಮ್ಸ್ ತೀವ್ರ ಒತ್ತಡವನ್ನು ಎದುರಿಸುತ್ತಿದೆ ಮತ್ತು ಎಲ್ಲಾ ರೋಗಿಗಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಜಿಲ್ಲಾಧಿಕಾರಿಗಗಳು ಹಲವು ಕ್ರಮ ತೆಗೆದು ಕೊಂಡಿದ್ದು ರೋಗಿಗಳಿಗೆ ಸರಿಯಾದ
ವ್ಯವಸ್ಥೆ ಮಾಡಲು ಶ್ರಮಿಸುತ್ತಿದ್ದಾರೆ ಎಂದು ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com