ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಡ್ರಗ್ಸ್ ಪೆಡ್ಲರ್; ಗಾಂಜಾ, ಶಸ್ತ್ರಾಸ್ತ್ರ ವಶಕ್ಕೆ
ಡ್ರಗ್ಸ್ ಪೆಡ್ಲರ್ ಓರ್ವ ರೆಡ್ ಹ್ಯಾಂಡ್ ಆಗಿಸಿಕ್ಕಿಬಿದ್ದಿದ್ದು, ಆತನಿಂದ ಅಪಾರ ಪ್ರಮಾಣದ ಗಾಂಜಾ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
Published: 23rd April 2021 02:05 PM | Last Updated: 23rd April 2021 02:05 PM | A+A A-

ಗಾಂಜಾ ಬೆಳೆ ಬೆಳೆದಿದ್ದಾತನ ಬಂಧನ
ಚಿಕ್ಕಮಗಳೂರು: ಡ್ರಗ್ಸ್ ಪೆಡ್ಲರ್ ಓರ್ವ ರೆಡ್ ಹ್ಯಾಂಡ್ ಆಗಿಸಿಕ್ಕಿಬಿದ್ದಿದ್ದು, ಆತನಿಂದ ಅಪಾರ ಪ್ರಮಾಣದ ಗಾಂಜಾ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ ರವಿ ಅಲಿಯಾಸ್ ರಾಮೆಗೌಡ ಎಂಬಾತನನ್ನು ಕುದುರೇ ಮುಖ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಬಂಧಿತ ರಾಮೇಗೌಡನಿಗೆ ಭೂಗತ ಲೋಕದ ಸಂಪರ್ಕ ಇದೆ ಎನ್ನಲಾಗಿದ್ದು, ತನ್ನ ಜಮೀನಿನಲ್ಲಿ ರಾಜಾರೋಷವಾಗಿ ಗಾಂಜಾ ಬೆಳೆಯುತ್ತಿದ್ದನು ಮತ್ತು ಅವುಗಳನ್ನು ಸ್ಯಾಮ್ಸೆ ಬಳಿಯ ಸಂಪಾನೆ ಗ್ರಾಮದಲ್ಲಿರುವ ತನ್ನ ತೋಟದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಎಎಸ್‌ಐ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ತೋಟದ ಮನೆಯಲ್ಲಿದ್ದ 3.2 ಕೆಜಿ ಗಾಂಜಾ ಮತ್ತು ಒಂದಷ್ಟು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಬಂಧಿತ ರಾಮೇಗೌಡ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್, 1985 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ರವಿ ಅಲಿಯಾಸ್ ರಾಮೇಗೌಡ (41 ವರ್ಷ) ಕಳಸಾದಿಂದ ಮೂರು ವರ್ಷಗಳ ಹಿಂದೆ ಸಂಪಾನೆ ಗ್ರಾಮಕ್ಕೆ ಬಂದು ಕಾಫಿ ಬೆಳೆಯುವುದಾಗಿ ಹೇಳಿ ಮೂರು ಎಕರೆ ಜಮೀನನ್ನು ಖರೀದಿಸಿದ್ದ. ಆದರೆ ಅಲ್ಲಿ ಕಾಫಿ ಬೆಳೆಗಳ ನಡುವೆಯೇ ಗಾಂಜಾ ಬೆಳೆ ಬೆಳೆದಿದ್ದ. ಅಧಿಕಾರಿಗಳ ಶೋಧ ಕಾರ್ಯಾಚರಣೆ ವೇಳೆ ಈ ಘಟನೆ ಬೆಳಕಿಗೆ ಬಂದಿತ್ತು. ಮಂಗಳೂರಿನಲ್ಲಿಯೂ ಆತನ ವಿರುದ್ಧ ಎರಡು-ಮೂರು ಪ್ರಕರಣಗಳು ದಾಖಲಾಗಿವೆ. ರವಿಯನ್ನು ಅದೇ ದಿನ ಸಂಜೆ ಚಿಕ್ಕಮಾಗಲೂರು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 4 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.