ಕೊರೋನಾ ವೈರಸ್ ದೇಹಕ್ಕೆ ಸುಳಿಯದಂತೆ ಯೋಗ, ಪ್ರಾಣಾಯಾಮ ಮಾಡಿ: ಆರೋಗ್ಯ ಸಚಿವ ಡಾ ಸುಧಾಕರ್ ಸಲಹೆ 

ಕೊರೋನಾದಂತಹ ದೊಡ್ಡ ಸಾಂಕ್ರಾಮಿಕ ರೋಗ ಬಂದಾಗ ಎಂತಹ ವ್ಯವಸ್ಥೆಗಳಿದ್ದರೂ ಕೆಲವೊಮ್ಮೆ ವಿಫಲವಾಗುತ್ತದೆ, ಕೈಕೊಡುತ್ತದೆ, ನಮ್ಮ ಕೈಲಾದಷ್ಟು ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಪ್ರಯತ್ನಿಸುತ್ತಿದ್ದೇವೆ, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ನಂತಹ ಮುಂದುವರಿದ ದೇಶಗಳಲ್ಲೇ ಸಮಸ್ಯೆಗಳು ತಲೆದೋರುತ್ತಿವೆ. ಅಂತಹುದರಲ್ಲಿ ಕರ್ನಾಟಕ ಸೇರಿದಂತೆ ಭಾರತದಲ್ಲಿ ಇಂದಿನ ಪರಿಸ್ಥಿತಿಯಲ

Published: 23rd April 2021 01:31 PM  |   Last Updated: 23rd April 2021 01:34 PM   |  A+A-


Dr K Sudhakar

ಡಾ ಕೆ ಸುಧಾಕರ್

Posted By : Sumana Upadhyaya
Source : Online Desk

ಬೆಂಗಳೂರು: ಕೊರೋನಾದಂತಹ ದೊಡ್ಡ ಸಾಂಕ್ರಾಮಿಕ ರೋಗ ಬಂದಾಗ ಎಂತಹ ವ್ಯವಸ್ಥೆಗಳಿದ್ದರೂ ಕೆಲವೊಮ್ಮೆ ವಿಫಲವಾಗುತ್ತದೆ, ಕೈಕೊಡುತ್ತದೆ, ನಮ್ಮ ಕೈಲಾದಷ್ಟು ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಪ್ರಯತ್ನಿಸುತ್ತಿದ್ದೇವೆ, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ನಂತಹ ಮುಂದುವರಿದ ದೇಶಗಳಲ್ಲೇ ಸಮಸ್ಯೆಗಳು ತಲೆದೋರುತ್ತಿವೆ. ಅಂತಹುದರಲ್ಲಿ ಕರ್ನಾಟಕ ಸೇರಿದಂತೆ ಭಾರತದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆ ಉತ್ತಮವಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಸಚಿವರು, ಆಡಳಿತ ಸಿಬ್ಬಂದಿ ಕೈಮೀರಿ ಕೆಲಸ ಮಾಡುತ್ತಿದ್ದಾರೆ, ಸರ್ಕಾರ ಜನರ ಪರವಾಗಿದೆ, ಜನರು ವಿಶ್ವಾಸವಿಟ್ಟು ಆರೋಗ್ಯವಾಗಿರಿ, ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳಬೇಡಿ, ಆತಂಕಕ್ಕೊಳಬೇಡಿ, ಅದರಿಂದ ಖಾಯಿಲೆ ಹೆಚ್ಚಾಗುತ್ತದೆ ಎಂದರು.

ದಿನನಿತ್ಯ ಬೆಳಗ್ಗೆ ಪ್ರಾಣಾಯಾಮ ಮಾಡಿ:ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ದಿನನಿತ್ಯ ಬೆಳಗ್ಗೆ ಎದ್ದು ಎಲ್ಲರೂ ಪ್ರಾಣಾಯಾಮ ಮಾಡಿ, ಶ್ವಾಸಕೋಶ ಉತ್ತಮವಾಗಿ ಕೆಲಸ ಮಾಡಲು ಉತ್ತಮ ವಾತಾವರಣದಲ್ಲಿ ಕುಳಿತು ಪ್ರಾಣಾಯಾಮ, ಲಘು ವ್ಯಾಯಾಮ ಅಭ್ಯಾಸ ಮಾಡಿ, ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಹೆಚ್ಚಾದಾಗ ಯಾವ ರೋಗಾಣು ನಮ್ಮ ದೇಹಕ್ಕೆ ಸೋಂಕಲು ಸಾಧ್ಯವಿಲ್ಲ ಎಂದು ಮೂಲತಃ ವೈದ್ಯರಾಗಿರುವ ಡಾ ಸುಧಾಕರ್ ಜನತೆಗೆ ಸಲಹೆ ನೀಡಿದ್ದಾರೆ.

14 ದಿನಗಳು ಕೊರೋನಾ ಚೈನ್ ನ್ನು ಮುರಿಯಲು ಕಡ್ಡಾಯವಾಗಿ ಬೇಕಾಗುವಂತಹ ದಿನಗಳು, ಅದಕ್ಕಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕ್ರಮಗಳನ್ನು ತೆಗೆದುಕೊಂಡಿದೆ, ಕೆಲವರು ಈ ಬಗ್ಗೆ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಯಾರ ಟೀಕೆ, ಆಪಾದನೆಗಳಿಗೆ ಉತ್ತರ ಕೊಡುವುದಿಲ್ಲ, ಕೆಲವು ದೇಶಗಳಲ್ಲಿ 2, 3 ಮತ್ತು ನಾಲ್ಕನೇ ಅಲೆ ಕೂಡ ಬಂದಿದೆ. ಅಂತಹ ದೇಶಗಳಲ್ಲಿ ಎಲ್ಲಾ ಸಂದರ್ಭಗಳಲ್ಲಿ ಒಂದು-ಒಂದೂವರೆ ತಿಂಗಳು ಲಾಕ್ ಡೌನ್ ಮಾಡಿದ್ದಾರೆ, ನಾವು ಆ ಪರಿಸ್ಥಿತಿಗೆ ತಂದಿಲ್ಲ. ಜನಜೀವನ, ಚಟುವಟಿಕೆಗಳಿಗೆ ಅವಕಾಶ ನೀಡಿದ್ದೇವೆ. ಎಲ್ಲಾ ಚಟುವಟಿಕೆಗಳನ್ನು ಮಾಡಿಕೊಂಡು ನಿಯಂತ್ರಣ ಮಾಡಿ ಎಂದರೆ ಹೇಗೆ ಸಾಧ್ಯ ಎಂದು ಟೀಕಾಕಾರರನ್ನು ಡಾ ಸುಧಾಕರ್ ಪ್ರಶ್ನಿಸಿದರು.

ಜನತೆಗೆ ತಪ್ಪು ಸಂದೇಶ ತಲುಪಿಸುವುದು, ಇಂದಿನ ಆರೋಗ್ಯ ಹೋರಾಟದಲ್ಲಿ ರಾಜಕೀಯ ಮಾಡುವುದು, ಪರಸ್ಪರ ಆಪಾದನೆ ಮಾಡುವುದು ದಯವಿಟ್ಟು ಮಾಡಬೇಡಿ, ಅದಕ್ಕೆ ಇದು ಸಮಯವಲ್ಲ, ಇದು ಸಾಮೂಹಿಕವಾಗಿ ಹೋರಾಟ ಮಾಡಬೇಕಾದ ಸಮಯ, ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆಯ ಸಮಯವಿದು, ಈ ರೂಪಾಂತರ ವೈರಾಣು ಸಂಪೂರ್ಣ ಹೊಸದು, ವೈಜ್ಞಾನಿಕ ನೆಲೆಗಟ್ಟಿನ ಕ್ರಮಗಳನ್ನು ಪ್ರಾಯೋಗಿಕವಾಗಿ ತೆಗೆದುಕೊಳ್ಳುತ್ತಿದ್ದೇವೆ, ವೈದ್ಯಕೀಯ ಜಗತ್ತಿಗೇ ಸವಾಲು, ಜನರು ಭಯದಲ್ಲಿದ್ದಾರೆ, ಇಂತಹ ಸಂದರ್ಭದಲ್ಲಿ ನೈತಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp