ಒಂದು ವರ್ಷದಲ್ಲಿ ಕರ್ನಾಟಕದ 10 ಸಾವಿರ ಪೊಲೀಸರಿಗೆ ಕೊರೋನಾ ಸೋಂಕು!

ಕಳೆದ ವರ್ಷದ ಏಪ್ರಿಲ್ ತಿಂಗಳಿಂದ ಪ್ರತಿದಿನ ಸರಾಸರಿ 27 ಪೋಲೀಸ್ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ ಸಿಬ್ಬಂದಿ ಕೊರೋನಾ ಸೋಂಕಿಗೆ ಒಳಗಾಗುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಳೆದ ವರ್ಷದ ಏಪ್ರಿಲ್ ತಿಂಗಳಿಂದ ಪ್ರತಿದಿನ ಸರಾಸರಿ 27 ಪೋಲೀಸ್ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ ಸಿಬ್ಬಂದಿ ಕೊರೋನಾ ಸೋಂಕಿಗೆ ಒಳಗಾಗುತ್ತಿದ್ದಾರೆ.

ಇದುವರೆಗೂ ಒಟ್ಟು 9,990 ಸಿಬ್ಬಂದಿ ಸೋಂಕಿಗೊಳಗಾಗಿದ್ದು, 107 ಮಂದಿ ಸಾವನ್ನಪ್ಪಿದ್ದಾರೆ, ರಾಜ್ಯ ಸರ್ಕಾರ ಇದುವರೆಗೂ ಬಹುತೇಕ ಸಿಬ್ಬಂದಿಗೆ ಕೊರೋನಾ ಲಸಿಕೆ ನೀಡಿದೆ, ಆದರೆ ಅವರ ಕುಟುಂಬದ ಸದಸ್ಯರಿಗೆ ಲಸಿಕೆ ನೀಡುವುದು ಸವಾಲಾಗಿದೆ, 

ಇದುವರೆಗೂ ಸುಮಾರು 1 ಲಕ್ಷ ಸಿಬ್ಬಂದಿಗೆ ಲಸಿಕೆ ನೀಡಿ ಸೋಂಕಿನಿಂದ ರಕ್ಷಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಕೊರೋನಾ ಮೊದಲ ಅಲೆಯಲ್ಲಿ 9,695 ಸಿಬ್ಬಂದಿ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಏಪ್ರಿಲ್ 1 2021 ರವರೆಗೆ 295 ಸಿಬ್ಬಂದಿಗೆ ಪಾಸಿಟಿವ್ ಕಂಡು ಬಂದಿದೆ ಎಂದು ಎಡಿಜಿಪಿ ಎಂಎ ಸಲೀಂ ತಿಳಿಸಿದ್ದಾರೆ. ಕಳೆದ ವರ್ಷ ಇಡಿ ಪೊಲೀಸಿ ಸಿಬ್ಬಂದಿಯಲ್ಲಿ. ಶೇ10 ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದರು. ದುರಾದೃಷ್ಟವೆಂದರೇ ನಮ್ಮ ಸಿಬ್ಬಂದಿಯಲ್ಲಿ ಶೆ.1 ರಷ್ಟು ಮಂದಿನ್ನು ನಾವು ಕಳೆದುಕೊಂಡಿದ್ದೇವೆ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.

ಮೃತ ಸಿಬ್ಬಂದಿ ಕುಟುಂಬಕ್ಕೆ ಸುಮಾರು 30 ಲಕ್ಷ ರು ಪರಿಹಾರ ಹಣ ನೀಡಿದ್ದೇವೆ,ಜೊತೆಗೆ ಮೃತ ಕುಟುಂಬದ ಒಬ್ಬ ಸದಸ್ಯನಿಗೆ ವೇತನದ ಆಫರ್ ನೀಡಿದ್ದು, ಅದು ವಿವಿಧ ಹಂತದಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಮೊದಲ ಹಂತದಲ್ಲಿ  76 ಸಾವಿರ ಪೊಲೀಸ್ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ, ಎರಡನೇ ಹಂತದಲ್ಲಿ 46 ಸಾವಿರ ಮಂದಿಗೆ ಕೊಡಲಾಗಿದೆ. ಅವರಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ತಾಯಂದಿರು, ಹೊಸ ತಾಯಂದಿರು ಮತ್ತು ಕಾಯಿಲೆ ಇರುವವರು - ವ್ಯಾಕ್ಸಿನೇಷನ್ ತೆಗೆದುಕೊಂಡಿಲ್ಲ. ತೆಗೆದುಕೊಂಡಿಲ್ಲ.

ಏಪ್ರಿಲ್ ತಿಂಗಳ ಅಂತ್ಯದೊಳಗೆ ನಾವು ಎಲ್ಲಾ ಸಿಬ್ಬಂದಿಗೂ ಕೊರೋನಾ ಲಸಿಕೆ ನೀಡುವ ವಿಶ್ವಾಸ ಹೊಂದಿದ್ದೇವೆ. ಕಳೆದ ಕೆಲವು ವಾರಗಳಿಂದ ಸುಮಾರು 312 ಪೊಲೀಸ್ ಸಿಬ್ಬಂದಿ ಕೊರೋನಾ ಪಾಸಿಟಿವ್ ಹೊಂದಿದ್ದಾರೆ. ಅದರಲ್ಲಿ ಶೇ. 95 ರಷ್ಟು ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ. ಉಳಿದ 294 ಸಿಬ್ಬಂದಿ ಹೋಮ್ ಐಸೋಲೇಷನ್ ನಲ್ಲಿದ್ದಾರೆ.  18 ಮಂದಿ ಆಸ್ಪತ್ರೆಯಲ್ಲಿದ್ದು, ಇವರಲ್ಲಿ 8 ಸಿಬ್ಬಂದಿ ಲಸಿಕೆ ತೆಗದುಕೊಂಡಿಲ್ಲ, ಇನ್ನೂ 7 ಮಂದಿ 2ನೇ ಹಂತದ ಲಸಿಕೆಗಾಗಿ ಕಾಯುತ್ತಿದ್ದಾರೆ,  ಎರಡು ಹಂತದ ಲಸಿಕೆ ತೆಗೆದುಕೊಂಡ ಮೂವರಿಗೆ ಸೋಂಕು ತಗುಲಿದೆ ಎಂದು ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com