ಕೊರೋನಾ ಎಫೆಕ್ಟ್: ಹಲವು ವಿವಿ, ತರಗತಿಗಳು ಪರೀಕ್ಷೆಗಳು ಮುಂದೂಡಿಕೆ

ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಮತ್ತು ಸಾರ್ವಜನಿಕ ಸಾರಿಗೆ ತೊಂದರೆಯಿಂದಾಗಿ ಏಪ್ರಿಲ್ 20 ರಂದು ಪ್ರಾರಂಭವಾಗಬೇಕಿದ್ದ 2, 4 ಮತ್ತು 6ನೇ ಸೆಮಿಸ್ಟರ್ ತರಗತಿಗಳನ್ನು ಮುಂದೂಡಲು ಬೆಂಗಳೂರು ನಗರ ವಿಶ್ವವಿದ್ಯಾಲಯ ನಿರ್ಧರಿಸಿದ್ದು ಮೇ 3 ರಿಂದ ತರಗತಿಗಳು ಪ್ರಾರಂಭವಾಗಲಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಮತ್ತು ಸಾರ್ವಜನಿಕ ಸಾರಿಗೆ ತೊಂದರೆಯಿಂದಾಗಿ ಏಪ್ರಿಲ್ 20 ರಂದು ಪ್ರಾರಂಭವಾಗಬೇಕಿದ್ದ 2, 4 ಮತ್ತು 6ನೇ ಸೆಮಿಸ್ಟರ್ ತರಗತಿಗಳನ್ನು ಮುಂದೂಡಲು ಬೆಂಗಳೂರು ನಗರ ವಿಶ್ವವಿದ್ಯಾಲಯ ನಿರ್ಧರಿಸಿದ್ದು ಮೇ 3 ರಿಂದ ತರಗತಿಗಳು ಪ್ರಾರಂಭವಾಗಲಿವೆ.

ಮೈಸೂರು ವಿವಿ ಕೂಡ ಏಪ್ರಿಲ್ 19 ರಿಂದ ಮೇ 3 ರವರೆಗೆ ತರಗತಿಗಳನ್ನು ಮುಂದೂಡಿದೆ. ತುಮಕೂರು ವಿವಿ ಮೇ.5 ರಿಂದ ತರಗತಿ ಆರಂಭಿಸಲು ನಿರ್ಧರಿಸಿದೆ.

ಇನ್ನೂ ಬೆಂಗಳೂರು ನಾರ್ತ್ ಯೂನಿವರ್ಸಿಟಿ, ಏಪ್ರಿಲ್ ನಲ್ಲಿ ನಡೆಯಬೇಕಿದ್ದ ಪದವೀಧರ, ಸ್ನಾತಕೋತ್ತರ ಬಿಎಡ್ ಹಾಗೂ ಎಂಬಿಎ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿ ಮುಂದೂಡಿದೆ. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಈ ನಿರ್ಧಾರ 
ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಬೆಂಗಳೂರು ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಏಪ್ರಿಲ್ 22ರಿಂದ 30ರವರೆಗೆ ವರ್ಕ್ ಫ್ರಮ್ ಹೋಮ್ ಗೆ ಅವಕಾಶ ನೀಡಿದೆ. ಅವಶ್ಯಕತೆ ಇರುವ ಸಿಬ್ಬಂದಿ ಮಾತ್ರ ಕಚೇರಿಗೆ ರಿಪೋರ್ಟ್ ಮಾಡಿಕೊಳ್ಳಲು ತಿಳಿಸಿದೆ.

ಮೇ 4 ರವರೆಗೆ ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳಲು ಸೂಚಿಸಿಲಾಗಿದೆ. 3ನೇ ಸೆಮಿಸ್ಟರ್ ಮತ್ತು ಎಂಸಿಎ ಪರೀಕ್ಷೆಗಳನ್ನು ಅನಿರ್ಧಿಷ್ಟಾವಧಿ ಮೂಂದೂಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com