ಬಿಬಿಎಂಪಿಯಿಂದ ಆಕ್ಯುಪೆನ್ಸಿ ಸರ್ಟಿಫಿಕೇಟ್ ಇನ್ನು ಮುಂದೆ ಆನ್ ಲೈನ್ ನಲ್ಲಿ: ದಾಖಲಾತಿ ಪರಿಶೀಲನೆ ಕಠಿಣ!

ಕಾಲಮಿತಿಯಲ್ಲಿ ಜನರಿಗೆ ಸೇವೆಗಳು ದೊರಕುವಂತೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ.
ಬಿಬಿಎಂಪಿಯಿಂದ ಆಕ್ಯುಪೆನ್ಸಿ ಸರ್ಟಿಫಿಕೇಟ್ ಇನ್ನು ಮುಂದೆ ಆನ್ ಲೈನ್ ನಲ್ಲಿ: ದಾಖಲಾತಿ ಪರಿಶೀಲನೆ ಕಠಿಣ!

ಬೆಂಗಳೂರು: ಕಾಲಮಿತಿಯಲ್ಲಿ ಜನರಿಗೆ ಸೇವೆಗಳು ದೊರಕುವಂತೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ. ನಗರ ಯೋಜನೆಗೆ ಅನುಮೋದನೆ ಆನ್ ಲೈನ್ ನಲ್ಲಿ ಸಿಗುವಂತೆ ಮಾಡಿದ ಬಳಿಕ ಇದೀಗ ಬಿಬಿಎಂಪಿ ಆಕ್ಯುಪೆನ್ಸಿ ಸರ್ಟಿಫಿಕೇಟ್ ಆನ್ ಲೈನ್ ನಲ್ಲಿ ನಾಗರಿಕರಿಗೆ ಸಿಗುವಂತೆ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ.

ದಾಖಲಾತಿ ಮತ್ತು ಸೂಕ್ತ ಪ್ರಮಾಣಪತ್ರ ಹೊಂದಿದ ವಾಸ್ತುಶಿಲ್ಪಿಗಳಿಂದ ಪರಿಶೀಲನೆ ಮಾಡಿದ ನಂತರ ಬಿಬಿಎಂಪಿ ಈಗ ಕಟ್ಟಡಗಳಿಗೆ ಯೋಜನೆ ಅನುಮೋದನೆ(ಬಿಲ್ಡಿಂಗ್ ಪ್ಲಾನ್ ಅಪ್ರೂವಲ್)ಯನ್ನು ನೀಡಲು ಆರಂಭಿಸಿದೆ. ಇದೀಗ ತಾಂತ್ರಿಕವಾಗಿ ಸುಧಾರಣೆಯನ್ನು ತರಲು ಮುಂದಾಗಿರುವ ಬಿಬಿಎಂಪಿ ನಾಗರಿಕರಿಗೆ ಸೇವೆಯನ್ನು ನೀಡಲು ವಿಳಂಬವಾಗುತ್ತಿದೆ ಎಂಬ ಅಪವಾದವನ್ನು ದೂರ ಮಾಡಲು ಸಂಪೂರ್ಣವಾಗಿ ಆನ್ ಲೈನ್ ವ್ಯವಸ್ಥೆ ನೀಡಲು ಮುಂದಾಗಿದೆ.

ಕಮೆನ್ಸ್ ಮೆಂಟ್ ಸರ್ಟಿಫಿಕೇಟ್(ಸಿಸಿ)ನ್ನು ಆನ್ ಲೈನ್ ನಲ್ಲಿ ನೀಡಲು ಆರಂಭಿಸಿದ್ದು, ಆಕ್ಯುಪೆನ್ಸಿ ಸರ್ಟಿಫಿಕೇಟ್(ಒಸಿ)ನ್ನು ಕೂಡ ಆನ್ ಲೈನ್ ನಲ್ಲಿ ನೀಡಲು ಮುಂದಾಗಿದ್ದೇವೆ. ವಿಧಾನಗಳು ತಯಾರಾದ ಕೂಡಲೇ ಈಗ ಸರ್ಟಿಫಿಕೇಟ್ ನೀಡಲು ಇರುವ ಸಮಯ 45 ದಿನಗಳಿಂದ ಆನ್ ಲೈನ್ ನಲ್ಲಿ ನಾಗರಿಕರಿಗೆ ಕೇವಲ 5 ದಿನಗಳಲ್ಲಿ ಸರ್ಟಿಫಿಕೇಟ್ ಸಿಗುತ್ತದೆ. ಫೀಲ್ಡ್ ಸಿಬ್ಬಂದಿ ಪ್ರತಿ ಪ್ರಾಜೆಕ್ಟ್ ನ್ನು ತಳಮಟ್ಟದಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ದಾಖಲೆ ಹೋಗಿ ಪರಿಶೀಲನೆಯಾಗಿ ಬರುತ್ತದೆ ಎಂದು ಬಿಬಿಎಂಪಿ ನಗರ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com