ಲಾಕ್ಡೌನ್ ಭೀತಿ: ಹಣವಿಲ್ಲದೆ ತಮ್ಮೂರಿಗೆ ತೆರಳಲು ಬೆಂಗಳೂರಿನಿಂದ ಬೆಳಗಾವಿಗೆ 600 ಕಿಮೀ ನಡೆದ ಇಬ್ಬರು ಕಾರ್ಮಿಕರು!

ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ಕಾರ್ಮಿಕರು ಕೊರೋನಾ ಲಾಕ್ಡೌನ್ ಭೀತಿಯಿಂದಾಗಿ ಮರಳಿ ತಮ್ಮ ರಾಜ್ಯಕ್ಕೆ ತೆರಳಲು ಕಾಲ್ನಡಿಗೆ ಮೂಲಕ ಬೆಂಗಳೂರಿನಿಂದ ಬೆಳಗಾವಿಯವರೆಗೆ 600 ಕಿ.ಮೀ. ನಡೆದಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ಕಾರ್ಮಿಕರು ಕೊರೋನಾ ಲಾಕ್ಡೌನ್ ಭೀತಿಯಿಂದಾಗಿ ಮರಳಿ ತಮ್ಮ ರಾಜ್ಯಕ್ಕೆ ತೆರಳಲು ಕಾಲ್ನಡಿಗೆ ಮೂಲಕ ಬೆಂಗಳೂರಿನಿಂದ ಬೆಳಗಾವಿಯವರೆಗೆ 600 ಕಿ.ಮೀ. ನಡೆದಿದ್ದಾರೆ. 

ಬೆಳಗಾವಿಯ ಗಾಂಧಿನಗರ ರೈಲ್ವೇ ಕ್ರಾಸಿಂಗ್ ಬಳಿಯಿದ್ದ ಗೇಟ್ ಮ್ಯಾನ್ ಕಾರ್ಮಿಕರು ರೈಲು ಹಳಿಗಳ ಮೇಲೆ ನಡೆಯುತ್ತಿರುವುದನ್ನು ಗಮನಿಸಿದ್ದಾರೆ. ಈ ವೇಳೆ ಅವರನ್ನು ವಿಚಾರಿಸಿದಾಗ ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ. 

ಕಾಲ್ನಡಿಗೆ ಮೂಲಕ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದ ಕಾರ್ಮಿಕರನ್ನು ದಿಂಡೋರಿ ಜಿಲ್ಲೆ ಪವನ್ ಧುರ್ವೆ ಹಾಗೂ ಅಜ್ವರ್ ರಿಯಾತ್ ಎಂದು ಗುರುತಿಸಲಾಗಿದೆ. 

ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ನಾವು ಬೆಂಗಳೂರಿಗೆ ಬಂದಿದ್ದೆವು. ನಮ್ಮೊಂದಿಗೆ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಸಾವನ್ನಪ್ಪಿದ್ದೆ. ಇದಾದ ಬಳಿಕ ಮಾಲೀಕರು ನಮಗೆ ಹಲವು ವಾರಗಳಿಂದ ಕೂಲಿ ನೀಡಿರಲಿಲ್ಲ. ಬಳಿಕ ನಮ್ಮನ್ನು ಕೆಲಸದಿಂದಲೂ ತೆಗೆದು ಹಾಕಿದ್ದರು. ಹೀಗಾಗಿ ನಾವು ಮಹಾರಾಷ್ಟ್ರ ಮೂಲಕ ನಮ್ಮ ಮನೆಗಳಿಗೆ ತೆರಳಲು ನಿರ್ಧರಿಸಿ ಕಾಲ್ನಡಿಗೆ ಮೂಲಕ ತೆರಳುತ್ತಿದ್ದೇವೆಂದು ಹೇಳಿಕೊಂಡಿದ್ದಾರೆ. 

ರೈಲ್ವೇ ಗೇಟ್ ಮ್ಯಾನ್ ಉಮೇಶ್ ಅವರು ಮಾತನಾಡಿ, ರೈಲ್ವೇ ಹಳಿ ಮೇಲೆ ವ್ಯಕ್ತಿಗಳು ನಡೆದು ಹೋಗುತ್ತಿರುವುದನ್ನು ಗಮನಿಸಿದ್ದೆ. ನನ್ನ ಬಳಿ ಬಂದ ಅವರು ರೈಲ್ವೇ ಹಳಿ ಪುಣೆ ಸಂಪರ್ಕಿಸುತ್ತದೆಯೇ ಎಂದು ಕೇಳಿದ್ದರು. ಬಳಿಕ ಕಾರ್ಮಿಕರು ಕಾಲ್ನಡಿಗೆ ಮೂಲಕ ಹೋಗುತ್ತಿರುವುದು ನನಗೆ ತಿಳಿಯಿತು. ಬಳಿಕ ನೀರು, ಆಹಾರ ನೀಡಿ ಕೂಡಲೇ ಸಹಾಯಕ್ಕಾಗಿ ಸಾಮಾಜಿಕ ಕಾರ್ಯಕರ್ತರಾದ ರವಿ ನಿರ್ಮಲ್ಕರ್, ಸಚಿನ್ ಕೆಲ್ವೇಕರ್ ಮತ್ತು ಸುಭಾಕ್ ಶೆಲ್ಕೆಯವರನ್ನು ಕರೆಯಲಾಗಿತ್ತು. 

ಬಳಿಕ ಕಾರ್ಯಕರ್ತರು ಕೇವಲ ಆಹಾರ ವಷ್ಟೇ ಅಲ್ಲದೆ, ಇಬ್ಬರೂ ಕಾರ್ಮಿಕರಿಗೂ ಉಳಿಯಲು ರೂಮಿನ ವ್ಯವಸ್ಥೆಯನ್ನೂ ಮಾಡಿದರು. ಅಲ್ಲದೆ, ಟಿಕೆಟ್ ಬುಕ್ ಮಾಡಿಕೊಟ್ಟಿದ್ದರು. ಬಳಿಕ ಕಾರ್ಮಿಕರು ಶುಕ್ರವಾರ ಗೋವಾ ಎಕ್ಸ್'ಪ್ರೆಸ್ ಮೂಲಕ ಮಧ್ಯಪ್ರದೇಶಕ್ಕೆ ತೆರಳಿದರು. ಇದಕ್ಕೆ ಸಹಾಯ ಮಾಡಿದ ಬೆಳಗಾವಿಯ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದಗಳನ್ನು ಹೇಳುತ್ತೇನೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com