ಮೈಸೂರು: ತಾಯಿ ಕಿತ್ತುಕೊಂಡ ಕೊರೋನಾ, ತಂದೆ ಉಳಿಸಿಕೊಳ್ಳಲು ಆಕ್ಸಿಜನ್ ಗಾಗಿ ಪರದಾಡಿದ ಸಹೋದರಿಯರು!
ಮೈಸೂರಿನಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಹೇಳಿದರೂ, ಪರಿಸ್ಥಿತಿಯನ್ನು ಗಮನಿಸಿದರೆ ಆತಂಕವನ್ನು ಸೃಷ್ಟಿಸುತ್ತಿವೆ. ಮಹಾಮಾರಿ ಕೊರೋನಾದಿಂದ ತಾಯಿಯನ್ನು ಕಳೆದುಕೊಂಡ ಸಹೋದರಿಯಬ್ಬರು ತಂದೆಯನ್ನು ಬದುಕುಳಿಸಲು ಆಕ್ಸಿಜನ್ ಗಾಗಿ ಪರದಾಡಿದ ಘಟನೆ ನಡೆದಿದೆ.
Published: 25th April 2021 07:38 AM | Last Updated: 25th April 2021 07:38 AM | A+A A-

ಸಂಗ್ರಹ ಚಿತ್ರ
ಮೈಸೂರು: ಮೈಸೂರಿನಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಹೇಳಿದರೂ, ಪರಿಸ್ಥಿತಿಯನ್ನು ಗಮನಿಸಿದರೆ ಆತಂಕವನ್ನು ಸೃಷ್ಟಿಸುತ್ತಿವೆ. ಮಹಾಮಾರಿ ಕೊರೋನಾದಿಂದ ತಾಯಿಯನ್ನು ಕಳೆದುಕೊಂಡ ಸಹೋದರಿಯಬ್ಬರು ತಂದೆಯನ್ನು ಬದುಕುಳಿಸಲು ಆಕ್ಸಿಜನ್ ಗಾಗಿ ಪರದಾಡಿದ ಘಟನೆ ನಡೆದಿದೆ.
ಸೋಂಕು ಕಾಣಿಸಿಕೊಂಡ ತಾಯಿಯನ್ನು ಏಪ್ರಿಲ್ 15 ರಂದು ಆಸ್ಪತ್ರೆಗೆ ದಾಖಲಿಸಲು ಸಹೋದರಿಬ್ಬರು ಪ್ರತೀ ಆಸ್ಪತ್ರೆಗೂ ತಿರುಗಾಡಿದ್ದಾರೆ. ಆದರೆ, ಯಾವುದೇ ಆಸ್ಪತ್ರೆಯೂ ಅವರನ್ನು ದಾಖಲು ಮಾಡಿಕೊಂಡಿಲ್ಲ. ಹಾಸಿಗೆ ಸಿಗದೆ, ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೆ ಮಹಿಳೆ ಸಾವನ್ನಪ್ಪಿದ್ದಾರೆ. ಈ ನಡುವೆ ತಂದೆ ಕೂಡ ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ಆಕ್ಸಿಜನ್ ಪ್ರಮಾಣ ಕುಸಿದ ಹಿನ್ನೆಲೆಯಲ್ಲಿ ಆಮ್ಲಜನಕ ಕೊಡಿಸಲು ಎಲ್ಲೆಡೆ ಯತ್ನ ನಡೆಸಿದರು ಸಾಧ್ಯವಾಗಿಲ್ಲ.
ತಂದೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ, ಹೋಂ ಐಸೋಲೇಷನ್ ನಲ್ಲಿದ್ದರೂ ಅವರಿಗೆ ಅಕ್ಸಿಜನ್ ಬೆಂಬಲ ಅಗತ್ಯವಿತ್ತು. ಆಮ್ಲಜನಕ ಪ್ರಮಾಣ 90 ಮಾತ್ರವೇ ಇತ್ತು. ಬಳಿಕ ಆಕ್ಸಿಜನ್ ಗಾಗಿ 10 ಸರಬರಾಜು ಸಂಸ್ಥೆಗಳಿಗೆ ಕರೆ ಮಾಡಿದೆವು. ಎಲ್ಲಿಯೂ ಲಭ್ಯವಾಗಲಿಲ್ಲ. ಎಲ್ಲಾ ಸರಬರಾಜುದಾರರೂ ಆಕ್ಸಿಜನ್ ಸರಬರಾಜು ಮಾಡುತ್ತಿಲ್ಲ ಎಂದು ಹೇಳುತ್ತಿದ್ದರು ಎಂದು ಮೃತಪಟ್ಟ ಮಹಿಳೆಯ ಪುತ್ರಿ ಪದ್ಮಜಾ ಅವರು ಹೇಳಿದ್ದಾರೆ.
ತಾಯಿ ಶಾಂತಾ ಅವರ ಆರ್'ಟಿ-ಪಿಸಿಆರ್ ವರದಿ ನೆಗೆಟಿವ್ ಬಂದಿತ್ತು. ಆದರೆ, ಅವರಿಗೆ ಏಪ್ರಿಲ್ 7ರಂದು ಅತೀವ್ರ ಬೆನ್ನು ಹಾಗೂ ಕಾಲಿನ ನೋವು ಕಾಣಿಸಿಕೊಂಡಿತ್ತು. ನಂತರ ಸಾಕಷ್ಟು ಆಸ್ಪತ್ರೆಗಳಿಗೆ ಕರೆದುಕೊಂಡು ಹೋದೆವು. ಆದರೆ, ಯಾವುದೇ ವೈದ್ಯರೂ ಮತ್ತೆ ಪರೀಕ್ಷೆ ಮಾಡಿಸುವಂತೆ ಹೇಳಲೇ ಇಲ್ಲ. ಏಪ್ರಿಲ್ 15 ರಂದು ತಾಯಿಯವರ ಆಕ್ಸಿಜನ್ ಪ್ರಮಾಣ ಶೇ.54ಕ್ಕೆ ಇಳಿದಿತ್ತು. ಬಳಿಕ 15-20 ಆಸ್ಪತ್ರೆಗಳಿಗೆ ಸುತ್ತಾಡಿದರೂ ಯಾವುದೇ ಆಸ್ಪತ್ರೆ ಅವರನ್ನು ದಾಖಲಿಸಿಕೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ತಂದೆಯೂ ಕೊರೋನಾ ವರದಿ ನೆಗೆಟಿವ್ ಬಂದಿತ್ತು. ಆದರೆ, ಅವರ ಆಮ್ಲಜನಕ ಪ್ರಮಾಣ ಶೇ.90ರಷ್ಟಿದ್ದ ಕಾರಣ ಕೋವಿಡ್ ವಾರ್ಡ್ ನಲ್ಲಿ ದಾಖಲು ಮಾಡಿಕೊಂಡಿದ್ದರು. ಇದೇ ಆಸ್ಪತ್ರೆ ತಾಯಿಯವರನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿತ್ತು. ತಾಯಿಯ ಪರಿಸ್ಥಿತಿ ನೋಡಿ, ಅವರಿಗೆ ಚಿಕಿತ್ಸೆ ನೀಡಲು ಹಾಸಿಗೆ ಖಾಲಿಯಿಲ್ಲ ಎಂದು ಹೇಳಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.