ರಾಜ್ಯದಲ್ಲಿ ಮುಂದುವರಿದ ವಾರಾಂತ್ಯ ಕರ್ಫ್ಯೂ: ಬಿಕೋ ಎನ್ನುತ್ತಿರುವ ರಸ್ತೆಗಳು, ಬೆಳಗ್ಗೆಯೇ ಖರೀದಿ ಮುಗಿಸಿದ ಜನರು

ಕೋವಿಡ್-19 ಸೋಂಕನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹೇರಿರುವ ವಾರಾಂತ್ಯ ಕರ್ಫ್ಯೂ ಭಾನುವಾರ ಮುಂದುವರಿದಿದೆ.
ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ಇಂದು ಬೆಳಗ್ಗೆ ಕಂಡುಬಂದ ದೃಶ್ಯ
ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ಇಂದು ಬೆಳಗ್ಗೆ ಕಂಡುಬಂದ ದೃಶ್ಯ

ಬೆಂಗಳೂರು: ಕೋವಿಡ್-19 ಸೋಂಕನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹೇರಿರುವ ವಾರಾಂತ್ಯ ಕರ್ಫ್ಯೂ ಭಾನುವಾರ ಮುಂದುವರಿದಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ರಸ್ತೆಗಳು ಬೀಕೋ ಎನ್ನುತ್ತಿವೆ. ಜನಸಂಚಾರವಿಲ್ಲ, ವ್ಯಾಪಾರ-ವಹಿವಾಟು ಇಲ್ಲದೆ ಅಂಗಡಿ-ಮುಂಗಟ್ಟುಗಳು ಮುಚ್ಚಿವೆ. ದಾವಣಗೆರೆಯಲ್ಲಿ ಇಂದು ಬೆಳಗ್ಗೆ ರಸ್ತೆಯ ವಾತಾವರಣ ಹೀಗೆ ಕಂಡುಬಂದಿದೆ.

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆಯೇ ಕರ್ಫ್ಯೂ ಹಿನ್ನೆಲೆಯಲ್ಲಿ ಜನರು ರಸ್ತೆಗಿಳಿದು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವುದು ಕಂಡುಬಂತು.

ವಿಜಯಪುರದಲ್ಲಿ ಜನರು ವಾರಾಂತ್ಯ ಕರ್ಫ್ಯೂನ ಮೊದಲ ದಿನವಾದ ನಿನ್ನೆ ಜನರು ಮನೆಯಿಂದ ಹೊರಬರದೆ ಒಳಗೆ ಕುಳಿತಿದ್ದರು. ಈಶಾನ್ಯ ಸಾರಿಗೆ ಬಸ್ಸುಗಳು ಮಾತ್ರ ವಾರಾಂತ್ಯ ಸಂಚಾರ ಮಾಡುತ್ತಿವೆ.ಆದರೆ ಕರ್ಫ್ಯೂ ಇರುವ ಕಾರಣ ಪ್ರಯಾಣಿಕರು ಕೇಂದ್ರ ಬಸ್ ನಿಲ್ದಾಣದಲ್ಲಿ ಕೂಡ ಅಷ್ಟೊಂದು ಇಲ್ಲ.

ಪೊಲೀಸರು ನಗರದಲ್ಲಿ ಕಣ್ಗಾವಲು ಇರಿಸಿದ್ದು, ವಾಹನಗಳಲ್ಲಿ ಸಂಚರಿಸುವವರನ್ನು ಪೊಲೀಸರು ತಪಾಸಣೆ ಮಾಡಿಯೇ ಬಿಡುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ವಾರಾಂತ್ಯ ಕರ್ಫ್ಯೂ ನಿನ್ನೆ ಬಹುತೇಕ ಯಶಸ್ವಿಯಾಗಿದ್ದು, ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ಕಂಡುಬಂದಿದ್ದು ಹೀಗೆ.
ಬಳ್ಳಾರಿಯಲ್ಲಿ ಕೂಡ ಪೊಲೀಸರು ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಸರಿಯಾಗಿ ತಪಾಸಣೆ ಮಾಡಿ ಬಿಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com