ಮಡಿಕೇರಿ ನಗರಸಭೆ ಚುನಾವಣೆ: ಕೊರೋನಾ ನಡುವೆಯೂ ಶೇ. 70 ರಷ್ಟು ಮತದಾನ

ಸುಮಾರು 7 ವರ್ಷಗಳ ನಂತರ ಮಡಿಕೇರಿ ನಗರಸಭೆಯ‌ 23 ವಾರ್ಡ್‌ಗಳಿಗೆ ಮಂಗಳವಾರ ಚುನಾವಣೆ ನಡೆದಿದ್ದು, ಕೊರೋನಾ ಆತಂಕದ ನಡುವೆಯೂ ಮತದರಾರರು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಹಕ್ಕು ಚಲಾಯಿಸಿದ್ದು...
ಕೊರೋನಾ ಸೋಂಕಿತ ಮತದರಾರು ಪಿಪಿಇಕಿಟ್ ಧರಿಸಿ ಮತ ಚಲಾಯಿಸಿದರು.
ಕೊರೋನಾ ಸೋಂಕಿತ ಮತದರಾರು ಪಿಪಿಇಕಿಟ್ ಧರಿಸಿ ಮತ ಚಲಾಯಿಸಿದರು.

ಮಡಿಕೇರಿ: ಸುಮಾರು 7 ವರ್ಷಗಳ ನಂತರ ಮಡಿಕೇರಿ ನಗರಸಭೆಯ‌ 23 ವಾರ್ಡ್‌ಗಳಿಗೆ ಮಂಗಳವಾರ ಚುನಾವಣೆ ನಡೆದಿದ್ದು, ಕೊರೋನಾ ಆತಂಕದ ನಡುವೆಯೂ ಮತದರಾರರು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಹಕ್ಕು ಚಲಾಯಿಸಿದ್ದು, ನಾಲ್ಕು ಗಂಟೆಯವರೆಗೆ ಶೇ. 70ರಷ್ಟು ಮತದಾನವಾಗಿದೆ.

ಒಟ್ಟು 23 ವಾರ್ಡ್‌ಗಳಲ್ಲಿ 108 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 27 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 26,887 ಮತದಾರರಿದ್ದಾರೆ ಎಂದು ತಹಶಿಲ್ದಾರ್ ಮಹೇಶ್ ಅವರು ತಿಳಿಸಿದ್ದಾರೆ.

27 ಮತಗಟ್ಟೆಗಳಲ್ಲಿ 6 ಸೂಕ್ಷ್ಮ, 3 ಅತಿಸೂಕ್ಷ್ಮ ಮತ್ತು 18 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.

ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಾಲ್ ಅವರು ಅನೇಕ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ, ಸ್ಥಳದಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಕೆಲವು ಮತದಾನ ಕೇಂದ್ರಗಳಲ್ಲಿ ಇವಿಎಂನಲ್ಲಿನ ತೊಂದರೆ ಕಂಡುಬಂದಿರುವುದು ವರದಿಯಾಗಿದೆ. ಇದು ಮತದಾನ ಪ್ರಕ್ರಿಯೆಯನ್ನು ಸುಮಾರು ಒಂದು ಗಂಟೆ ವಿಳಂಬಗೊಳಿಸಿತು. ಆದಾಗ್ಯೂ, ತೊಂದರೆಗಳನ್ನು ಬೇಗನೆ ಸರಿಪಡಿಸಲಾಯಿತು.

ಇನ್ನು ಕೊರೋನಾ ಸೋಂಕಿತ 22 ಮತದರಾರು ಪಿಪಿಇಕಿಟ್ ಧರಿಸಿ ಮತ ಚಲಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com