ಕೊರೋನಾ ಕರ್ಫ್ಯೂ: ರಾಜ್ಯ ಸರ್ಕಾರದ ನಿರ್ಧಾರಕ್ಕೆ ತಜ್ಞರ ಸ್ವಾಗತ

ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ವಿಧಿಸಿರುವ 14 ದಿನಗಳ ಕೊರೋನಾ ಕರ್ಫ್ಯೂ ನಿರ್ಧಾರವನ್ನು ವೈದ್ಯರು ಹಾಗೂ ತಜ್ಞರು ಸ್ವಾಗತಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ವಿಧಿಸಿರುವ 14 ದಿನಗಳ ಕೊರೋನಾ ಕರ್ಫ್ಯೂ ನಿರ್ಧಾರವನ್ನು ವೈದ್ಯರು ಹಾಗೂ ತಜ್ಞರು ಸ್ವಾಗತಿಸಿದ್ದಾರೆ. 

ತಜ್ಞರು ಹಾಗೂ ವೈದ್ಯರು ಸರ್ಕಾರದ ನಿರ್ಧಾರವನ್ನು ಲಾಕ್ಡೌನ್ ಎಂದು ಕರೆದಿಲ್ಲ. ಬದಲಿ ಸರ್ಕಾರ ಜಾರಿಗೆ ತಂದಿರುವ ಸಾಮಾಜಿಕ ಅಂತರ ಎಂದು ಹೇಳಿದ್ದಾರೆ.
 
ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಪ್ರತಿಕ್ರಿಯೆ ನೀಡಿ, ರಾಜಕೀಯ ನಾಯಕರೂ ಸೇರಿದಂತೆ ಸಾಮಾನ್ಯ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರದ ಮೂಲಕ ಸಾಮಾಜಿಕ ಅಂತರ ವಿಧಿಸಿದೆ. ಸಮಿತಿಯ ಶಿಫಾರಸುಗಳನ್ನು ಕೊನೆಯೂ ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದ್ದಾರೆ. 

ಮತ್ತೊಂದು ಅಲೆಗಾಗಿ ಕಾಯದೆ ನಿಯಮ ಜಾರಿಗೆ ತಂದಿರುವುದು ಸಂತಸ ತಂದಿದೆ. ಕೆಲವ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ವಿನಾಯಿತಿ ನೀಡಬಾರದು ಎಂದು ಪ್ರಾರ್ಥಿಸುತ್ತಿದ್ದೇನೆ. ಒಂದು ವೇಳೆ ಸರ್ಕಾರ ವಿನಾಯಿತಿ ನೀಡಿದ್ದೇ ಆದರೆ, ಪರಿಸ್ಥಿತಿ ಬಿಗಡಾಯಿಸಲಿದೆ. ಕೊರೋನಾ ಸೋಂಕು ಸರಪಳಿಯನ್ನು ಬಿಡಿಸಲು ಲಾಕ್ಡೌನ್ ಒಂದೇ ವಿಧಾನ ಎಂದು ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ವಿಶಾಲ್ ರಾವ್ ಅವರು ಹೇಳಿದ್ದಾರೆ. 

ಈಗಾಗಲೇ ಕೊರೋನಾ ಸೋಂಕು ಸಾಕಷ್ಟು ಹರಡಿದ್ದು, ಪರಿಸ್ಥಿತಿ ನಿಭಾಯಿಸಲು ಹೆಚ್ಚೆಚ್ಚು ಆ್ಯಕ್ಸಿಜನ್, ಹಾಸಿಗೆಗಳ ಅಗತ್ಯವಿದೆ. ಸರ್ಕಾರ ಲಾಕ್ಡೌನ್ ನಿರ್ಧಾರ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲಿದೆ. ನಾರಾಯಣ ನೇತ್ರಾಲಯದ ವೈದ್ಯ ಡಾ.ಕೆ.ಭುಜಂಗ್ ಶೆಟ್ಟಿಯವರು ಹೇಳಿದ್ದಾರೆ. 

ವೀಕೆಂಡ್ ಹಾಗೂ ನೈಟ್ ಕರ್ಫ್ಯೂಗಿಂತಲೂ ಸರ್ಕಾರ ಇದೀಗ ತೆಗೆದುಕೊಂಡಿರುವ 14 ದಿನಗಳ ಕೊರೋನಾ ಕರ್ಫ್ಯೂ ಉತ್ತಮ ನಿರ್ಧಾರವಾಗಿದೆ. ಪ್ರಸುತ್ತ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಸರ್ಕಾರದೊಂದಿಗೆ ನಾವು ಸಹಕಾರ ನೀಡಲೇಬೇಕಿದೆ ಎಂದು ತಿಳಿಸಿದ್ದಾರೆ. 

ಹಾಸಿಗೆ, ವೈದ್ಯರು, ನರ್ಸ್'ಗಳನ್ನು ರಾತ್ರೋರಾತ್ರಿ ತಯಾರು ಮಾಡಲು ಸಾಧ್ಯವಿಲ್ಲ. 2 ವಾರಗಳ ಲಾಕ್ಡೌನ್ ಉತ್ತಮ ನಿರ್ಧಾರವಾಗಿದೆ. ಎರಡು ವಾರಗಳ ಬಳಿಕ ಪರಿಸ್ಥಿತಿ ಅವಲೋಕನ ನಡೆಸಲಾಗುತ್ತದೆ ಎಂದು ಡಾ.ಗೋವಿಂದಯ್ಯ ಯತೀಶ್ ಎಂಬುವವರು ಹೇಳಿದ್ದಾರೆ. 

ಈ ನಡುವೆ ಸರ್ಕಾರದ ನಿರ್ಧಾರದ ಕುರಿತು ಸಮುದಾಯ ಆರೋಗ್ಯ ತಜ್ಞ ಡಾ.ಶ್ರೀನಿವಾಸ್ ಕಕ್ಕಿಲಾಯ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ವಿರೋಧ ವ್ಯಕ್ತಪಡಿಸಿದ್ದಾರೆ. 

ಹೊಸ ಸಮಸ್ಯೆಗಳಿಗೆ ವಿನೂತನ ಪರಿಹಾರಗಳನ್ನು ಹುಡುಕಬೇಕಿದೆ. ಮನೆಗಳಲ್ಲಿದ್ದಾಗಲೂ ಜನರಿಗೆ ಕೊರೋನಾ ಹರಡಬಹುದು. ಲಾಕ್ಡೌನ್ ಜನರನ್ನು ನಿಯಂತ್ರಿಸಬಹುದು ಆದರೆ, ಒಬ್ಬರನ್ನೊಬ್ಬರು ಭೇಟಿ ಮಾಡುತ್ತಲೇ ಇರುತ್ತಾರೆ. ಜನರು ದೂರ ಇರಲು ವ್ಯವಸ್ಥೆಗಳನ್ನು ಕಲ್ಪಿಸಬೇಕು. ಲಾಕ್ಡೌನ್ ಸಮಯದಲ್ಲಿ ಮನೆಗಳಲ್ಲಿ ಹೆಚ್ಚೆಚ್ಚು ಜನರು ಸೇರುತ್ತಾರೆ. ನೆರೆಮನೆಯವರು ಒಂದೆಡೆ ಸೇರುತ್ತಾರೆ. ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಸರ್ಕಾರ ಸಮಯ ನಿಗದಿ ಪಡಿಸಿದ್ದು, ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗುತ್ತದೆ. ಹೀಗಾಗಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿವರೆಗೂ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಬೇಕು. ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಮಾಸ್ಕ್ ಧಾರಣೆ ನಿಯಮ ಅನುಸರಿಸಲಾಗುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com