ಕೋವಿಡ್ ಪರೀಕ್ಷಾ ಫಲಿತಾಂಶ ಐಸಿಎಂಆರ್'ಗೆ ಅಪ್ಲೋಡ್ ಮಾಡದ ಲ್ಯಾಬ್'ಗಳು: ಬಿಯು ನಂಬರ್ ಸಿಗದೆ ಸೋಂಕಿತರು ಸಂಕಷ್ಟದಲ್ಲಿ!

ಕೊರೋನಾ ಪರೀಕ್ಷೆಗಳನ್ನು ಮಾಡುತ್ತಿರುವ ನಗರದ ಹಲವು ಲ್ಯಾಬ್ ಗಳು ಫಲಿತಾಂಶವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡದ ಕಾರಣ  ಬಿ.ಯು (ಬೆಂಗಳೂರು ಅರ್ಬನ್‌) ಸಂಖ್ಯೆ ಸಿಗದೆ ಸೋಂಕಿತರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಪರೀಕ್ಷೆಗಳನ್ನು ಮಾಡುತ್ತಿರುವ ನಗರದ ಹಲವು ಲ್ಯಾಬ್ ಗಳು ಫಲಿತಾಂಶವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡದ ಕಾರಣ  ಬಿ.ಯು (ಬೆಂಗಳೂರು ಅರ್ಬನ್‌) ಸಂಖ್ಯೆ ಸಿಗದೆ ಸೋಂಕಿತರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. 

ಬಿಯು ನಂಬರ್ ಸಿಗದೇ ಇರುವುದಕ್ಕೆ ಮುಖ್ಯ ಕಾರಣ ಪರೀಕ್ಷೆಯ ನಂತರ ಅದರ ಮಾಹಿತಿ ಐಸಿಎಂಆರ್ ಪೋರ್ಟಲ್​ಗೆ ಪ್ರಯೋಗಾಲಯಗಳು ಸಮರ್ಪಕವಾಗಿ ಅಪ್​ಡೇಟ್ ಮಾಡುತ್ತಿಲ್ಲ. ರಾಜ್ಯ ಕೊವಿಡ್​ ವಾರ್​ ರೂಮ್ ಐಸಿಎಂಆರ್ ಪೋರ್ಟಲ್ ಮಾಹಿತಿ ಆಧರಿಸಿಯೇ ಬಿಯು ನಂಬರ್ ನೀಡುವುದರಿಂದ ಸಮಸ್ಯೆಗಳಾಗುತ್ತಿವೆ. 

ಸರ್ಕಾರದ ಹಿರಿಯ ಅಧಿಕಾರಿ ವಿ.ಪೊಣ್ಣುರಾಜ್ ಎಂಬುವವರು ಪ್ರತಿಕ್ರಿಯೆ ನೀಡಿ, ಪರೀಕ್ಷೆ ನಡೆಸುವ ಲ್ಯಾಬ್ ಗಳು ಐಸಿಎಂಆರ್ ಪೋರ್ಟಲ್ ಗಳಿಗೆ ಪರೀಕ್ಷಾ ವರದಿಗಳನ್ನು ಅಪ್ಲೋಡ್ ಮಾಡುತ್ತಿಲ್ಲ. ಇದರಿಂದಾಗಿ ಸೋಂಕಿತರಿಗೆ ಬಿಯು ನಂಬರ್ ನೀಡಲು ಸಾಧ್ಯವಾಗುತ್ತಿಲ್ಲ. ಲ್ಯಾಬ್ ಗಳಲ್ಲಿ ಸ್ವ್ಯಾಬ್ ಸಂಗ್ರಹಿಸುವ ವ್ಯಕ್ತಿ ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. 

ಲ್ಯಾಬ್ ಗಳು ಐಸಿಎಂಆರ್ ಪೋರ್ಟಲ್'ಗೆ ಪರೀಕ್ಷಾ ವರದಿ ಸಲ್ಲಿಸದರೆ ಮಾತ್ರ ಬಿಬಿಎಂಪಿ ಮಾಹಿತಿ ಲಭ್ಯವಾಗುತ್ತದೆ. ಇಲ್ಲದೇ ಹೋದರೆ, ಮಾಹಿತಿ ಸಿಗುವುದಿಲ್ಲ. ಸ್ವ್ಯಾಬ್ ಸಂಗ್ರಹಿಸುವ ವ್ಯಕ್ತಿ ಹಾಗೂ ಪ್ರಯೋಗಾಲಯಗಳು ಸರ್ಕಾರ ನಿಯಮಗಳನ್ನು ಪಾಲನೆ ಮಾಡಿದ್ದೇ ಆದರೆ, ಸಮಸ್ಯೆಗಳು ಉದ್ಭವಿಸುವುದಿಲ್ಲ. ಪ್ರಯೋಗಾಲಯಗಳು ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿದರೆ ಎಸ್​ಆರ್​ಎಫ್​ ಐಡಿ ಜನರೇಟ್ ಆಗುತ್ತದೆ.ಹೀಗಾಗಿ ಜನರೇ ಎಸ್​ಆರ್​ಎಫ್​ ಐಡಿ ವಿಚಾರದಲ್ಲಿ ಎಚ್ಚೆತ್ತುಕೊಂಡು ಕೇಳಲಾರಂಭಿಸಿದರೆ ಸಹಜವಾಗಿ ಪರೀಕ್ಷಾ ಕೇಂದ್ರಗಳು ನಿಯಮ ಪಾಲಿಸುತ್ತವೆ ಹಾಗೂ ಇದು ಬಿಯು ನಂಬರ್​ ನೀಡಲು ಸಹಕಾರಿಯಾಗುತ್ತದೆ. ವರ್ಕ್ ಲೋಡ್ ಹೆಚ್ಚಾಗಿರುವುದರಿಂದ ಪ್ರಯೋಗಾಲಯಗಳು ಪರೀಕ್ಷಾ ವರದಿಗಳನ್ನು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. 

ಖಾಸಗಿ ಲ್ಯಾಬ್ ಗಳು ಡಾಟಾ ಎಂಟ್ರಿಗಾಗಿ ವ್ಯಕ್ತಿಯೊಬ್ಬರನ್ನು ನೇಮಿಸಿಕೊಳ್ಳಬೇಕು. ಬಿಬಿಎಂಪಿ ಸರ್ಕಾರಿ ಲ್ಯಾಬ್ ಗಳಲ್ಲಿ ಈಗಾಗಲೇ ನೇಮಕ ಮಾಡಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com