ರೌಡಿಶೀಟರ್ ಕಾರ್ತಿಕ್​ ಒಂದು ವರ್ಷ ಬೆಂಗಳೂರಿನಿಂದ ಗಡಿಪಾರು

ರೌಡಿಶೀಟರ್ ವಿರುದ್ಧ ಇದೇ ಮೊದಲ ಬಾರಿಗೆ ಒಂದು ವರ್ಷ ಕಾಲ ಬೆಂಗಳೂರು ನಗರ ಜಿಲ್ಲೆಯಿಂದ‌ ಗಡಿಪಾರು ಮಾಡಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆದೇಶ ಹೊರಡಿಸಿದ್ದಾರೆ.

Published: 27th April 2021 06:19 PM  |   Last Updated: 27th April 2021 06:19 PM   |  A+A-


Rowdysheetar Kartik Deported from Bangalore for 1 year 

ರೌಡಿಶೀಟರ್ ಕಾರ್ತಿಕ್​ ಒಂದು ವರ್ಷ ಬೆಂಗಳೂರಿನಿಂದ ಗಡಿಪಾರು

Posted By : Srinivas Rao BV
Source : UNI

ಬೆಂಗಳೂರು: ವಿವಿಧ ಅಪರಾಧ‌ ಕೃತ್ಯಗಳಲ್ಲಿ ಭಾಗಿಯಾಗಿ ಗೂಂಡಾ ವರ್ತನೆ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ರೌಡಿಶೀಟರ್ ವಿರುದ್ಧ ಇದೇ ಮೊದಲ ಬಾರಿಗೆ ಒಂದು ವರ್ಷ ಕಾಲ ಬೆಂಗಳೂರು ನಗರ ಜಿಲ್ಲೆಯಿಂದ‌ ಗಡಿಪಾರು ಮಾಡಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆದೇಶ ಹೊರಡಿಸಿದ್ದಾರೆ.

ಹಲಸೂರು ಪೊಲೀಸ್ ಠಾಣೆಯ ರೌಡಿಶೀಟರ್ ಕಾರ್ತಿಕ್ ಗೆ ಏ.26ರಿಂದ ಮುಂದಿನ ವರ್ಷ ಏ.26 ವರೆಗೂ ಬೆಂಗಳೂರು ನಗರ ಜಿಲ್ಲೆಯಿಂದ ಗಡಿಪಾರು ಮಾಡಿದ್ದಾರೆ. ಈ ಆದೇಶದನ್ವಯ ರೌಡಿಶೀಟರ್​ ಕಾರ್ತಿಕ್ ನಗರದಲ್ಲಿ ಎಲ್ಲಿಯೂ ಇರುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದಲ್ಲಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.

ಹಲಸೂರಿನ ಗೌತಮಪುರದ ನಿವಾಸಿ ಕಾರ್ತಿಕ್, ಅತ್ಯಾಚಾರ ಯತ್ನ, ದರೋಡೆ, ಕೊಲೆಗೆ ಯತ್ನ, ಸುಲಿಗೆ, ಸರ್ಕಾರಿ ನೌಕರರ ವಿರುದ್ಧ ಹಲ್ಲೆ ಸೇರಿ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ನಿರಂತರವಾಗಿ ಗೂಂಡಾ ಚಟುವಟಿಕೆಯಲ್ಲಿ ಭಾಗಿಯಾಗಿ ಕಾನೂನು‌ ಸುವ್ಯವಸ್ಥೆಗೆ ಧಕ್ಕೆ‌ ಹಾಗೂ ಸಮಾಜದ‌ ಸ್ವಾಸ್ಥ್ಯ ಹಾಳುಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದನು. 

ಈ ಸಂಬಂಧ ಅಪರಾಧ ಪ್ರಕರಣಗಳಲ್ಲಿ ಬಂಧಿಸಿ ಜೈಲಿಗಟ್ಟಿದ್ದರೂ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದನು. ಸುಮಾರು 10-11 ವರ್ಷಗಳಿಂದ ಆತ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಲ್ಲಿ ತೊಡಗಿದ್ದನು. ಹೀಗಾಗಿ ನಗರ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ಅಪರಾಧ ಹಿನ್ನೆಲೆ ವರದಿ ಪರಿಶೀಲಿಸಿ‌ ಒಂದು ವರ್ಷದವರೆಗೂ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp