ವಿಕಲಚೇತನರಿಗೆ ಲಸಿಕೆ ನೀಡಲು ಯೋಜನೆ ರೂಪಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ವಿಕಲಚೇತನರಿಗೆ ಲಸಿಕೆ ನೀಡಲು ಕಾರ್ಯವಿಧಾನಗಳು ಅಥವಾ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಕಲಚೇತನರಿಗೆ ಲಸಿಕೆ ನೀಡಲು ಕಾರ್ಯವಿಧಾನಗಳು ಅಥವಾ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ. 

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ನ್ಯಾಯ ಪೀಠವು ಈ ನಿರ್ದೇಶನ ನೀಡಿದೆ.

ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ. ‘ಲಸಿಕೆ ಪಡೆಯಲು ಅಂಗವಿಕಲರು ಪಾಳಿಗಳಲ್ಲಿ ನಿಲ್ಲುವಂತೆ ಆಗಬಾರದು. ಮನೆಗಳಿಂದ ಹೊರಗೆ ಬರಲು ಕಷ್ಟಪಡುವವರಿಗೆ ಅಂಥವರ ಮನೆಗಳಲ್ಲಿಯೇ ಲಸಿಕೆ ಸಿಗುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದೆ. 

‘ಅಂಗವಿಕಲರ ಹಕ್ಕುಗಳ ಕಾಯ್ದೆ’ಯ 25 (1) (ಸಿ) ಪರಿಚ್ಛೇದದ ಪ್ರಕಾರ ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರಿಗಳು ಅಂಗವಿಕಲರಿಗೆ ಆದ್ಯತೆ ನೀಡುವುದು ಕಡ್ಡಾಯವಾಗಿದೆ. ಚಿಕಿತ್ಸೆಯ ವಿಚಾರದಲ್ಲಿಯೂ ಅವರಿಗೆ ಆದ್ಯತೆ ಸಿಗಬೇಕು. ಲಸಿಕೆ ನೀಡುವ ವಿಚಾರದಲ್ಲಿಯೂ ಇದು ಅನ್ವಯವಾಗಬೇಕು. ಲಸಿಗೆ ನೀಡುವಿಕೆಯಲ್ಲಿಯೂ ಯೋಜನೆ ರೂಪಿಸಬೇಕು. 

ವಿಕಲಚೇತನರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗೆ ಅರ್ಜಿ ಸಲ್ಲಿಸುವ ಮೂಲಕ ಲಸಿಕೆಗೆ ವಿನಂತಿಸಬಹುದು. ಎಸ್​ಎಂಎಸ್, ಇ-ಮೇಲ್, ವಾಟ್ಸಾಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಮನೆಯಿಂದ ಹೊರಬರಲಾರದವರಿಗೆ ಮನೆಯಲ್ಲೇ ಲಸಿಕೆ ನೀಡಲು ಅವಕಾಶ ನೀಡಬೇಕು ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ, ಇದರ ಮುಂದಿನ ವಿಚಾರಣೆಯನ್ನು ಮೇ 12ಕ್ಕೆ ನಿಗದಪಡಿಸಿದ್ದು, ಈ ನಡುವೆ ತನ್ನ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com