ರಾಜ್ಯದ ಕೋವಿಡ್ ರೋಗಿಗಳಿಗಾಗಿ ರೈಲ್ವೆಯಲ್ಲಿ 258 ಕೋಚ್ ಗಳಲ್ಲಿ 4100 ಹಾಸಿಗೆ ಸಿದ್ದ!

ನೈಋತ್ಯ ರೈಲ್ವೆ ವಲಯವು ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ವಿಭಾಗಗಳಲ್ಲಿ 4128 ಹಾಸಿಗೆಗಳನ್ನು ಒಳಗೊಂಡ 258 ಕೋವಿಡ್ ಆರೈಕೆ ಕೋಚ್ ಗಳನ್ನು ಸಿದ್ಧ ಸ್ಥಿತಿಯಲ್ಲಿ ಇರಿಸಿದೆ, ಇದರಿಂದಾಗಿ ರಾಜ್ಯಕ್ಕೆ ಅಗತ್ಯವಿದ್ದರೆ ಅವುಗಳನ್ನು ತುರ್ತು ಆಧಾರದ ಮೇಲೆ ಬಳಸಿಕೊಳ್ಳಬಹುದು ಎಂದು ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ಕೋವಿಡ್ ರೋಗಿಗಳಿಗಾಗಿ ರೈಲ್ವೆಯಲ್ಲಿ 258 ಕೋಚ್ ಗಳಲ್ಲಿ 4100 ಹಾಸಿಗೆ ಸಿದ್ದ!

ಬೆಂಗಳೂರು: ನೈಋತ್ಯ ರೈಲ್ವೆ ವಲಯವು ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ವಿಭಾಗಗಳಲ್ಲಿ 4128 ಹಾಸಿಗೆಗಳನ್ನು ಒಳಗೊಂಡ 258 ಕೋವಿಡ್ ಆರೈಕೆ ಕೋಚ್ ಗಳನ್ನು ಸಿದ್ಧ ಸ್ಥಿತಿಯಲ್ಲಿ ಇರಿಸಿದೆ, ಇದರಿಂದಾಗಿ ರಾಜ್ಯಕ್ಕೆ ಅಗತ್ಯವಿದ್ದರೆ ಅವುಗಳನ್ನು ತುರ್ತು ಆಧಾರದ ಮೇಲೆ ಬಳಸಿಕೊಳ್ಳಬಹುದು ಎಂದು ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಾರ್ಪಡಿಸಿದ ಸ್ಲೀಪರ್ ಕೋಚ್ ಗಳ ಬಳಕೆ ಕುರಿತು ಚರ್ಚಿಸಲು ಬೆಂಗಳೂರಿನ ಕೇಂದ್ರ ಸಂಸದ ಪಿಸಿ ಮೋಹನ್ ಅವರು ಬೆಂಗಳೂರಿನಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರನ್ನು ಬುಧವಾರ ಭೇಟಿಯಾದರು.

"ಸೋಮವಾರ, ನಾವು ಎಲ್ಲಾ ರಚನಾತ್ಮಕ ಮತ್ತು ಎಲೆಕ್ಟ್ರಿಕ್ಅಂಶಗಳನ್ನು ಪರಿಶೀಲಿಸಿದ್ದೇವೆ. ಕೋಚ್ ಗಳ ಸಂಪೂರ್ಣ ಶುಚಿಗೊಳಿಸುವಿಕೆಯನ್ನು ಸಹ ಮಾಡಲಾಗಿದೆ. ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ನಾವು ಸಂಪೂರ್ಣವಾಗಿ ಸಿದ್ಧರಾಗಲು ನಿರ್ಧರಿಸಿದ್ದೇವೆ. ಒಂದೊಮ್ಮೆ ರಾಜ್ಯ ಬಯಸಿದರೆ ನಾವು ನೆರವು ನೀಡಲು ಸಿದ್ದ" ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹುಬ್ಬಳ್ಳಿ ವಿಭಾಗದಲ್ಲಿ 90 ಕೋಚ್ ಗಳು ಮೈಸೂರು ವಿಭಾಗ 95 ಮತ್ತು ಬೆಂಗಳೂರು ವಿಭಾಗ 73 ಕೋಚ್ ಗಳಿದೆ. "ಪ್ರತಿ ಕೋಚ್ ಪ್ರಸ್ತುತ ಎಂಟು ಹಾಸಿಗೆಗಳನ್ನು ಹೊಂದಿದೆ. ಆದರೆ ಅಗತ್ಯವಿದ್ದಲ್ಲಿ ಕೆಳ ಬರ್ತ್ ಅನ್ನು ಹಾಸಿಗೆಯಾಗಿ ಪರಿವರ್ತಿಸಬಹುದು ಇದರಿಂದ ಪ್ರತಿ ಕೋಚ್‌ನಲ್ಲಿ 16 ಹಾಸಿಗೆಗಳಿರಲಿದೆ. ಇವೆಲ್ಲವೂ ಮೊಬೈಲ್ ಬೆಡ್ ಗಳಾಗಿದ್ದು ರೈಲ್ವೆ ಹಳಿಗಳಿರುವ ಪ್ರದೇಶಗಳಲ್ಲಿ ಸಾಗಿಸಬಹುದು" ಎಂದು ಮತ್ತೊಬ್ಬರು ಅಧಿಕಾರಿ ಹೇಳಿದರು.

ಬೆಂಗಳೂರಿನಲ್ಲಿ ಕೆಎಸ್‌ಆರ್ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳ ಅಂಗಳದಲ್ಲಿ ಕೋಚ್ ಗಳನ್ನು ಇರಿಸಲಾಗುತ್ತಿದೆ. ಐಸಿಯು ಮತ್ತು ಇತರ ಜೀವ ಉಳಿಸುವ ಸೌಲಭ್ಯಗಳ ಅಗತ್ಯವಿರುವ ಗಂಭೀರ ರೋಗಿಗಳಿಗೆ ಇದರ ಬಳಕೆ ಮಾಡಲಾಗುವುದಿಲ್ಲ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.

ಕೋಚ್ ನ ಒಳಗಿನ ಬೆಚ್ಚಗಿನ ವಾತಾವರಣದ ಬಗ್ಗೆ ಹೇಳಿದ ಅವರು ತಾಪಮಾನವು ಉತ್ತಮವಾಗಿದೆ ಮತ್ತು ಕೋಚ್‌ನಲ್ಲಿರುವ ಫ್ಯಾನ್ ಗಳು ತಂಪು ವಾತಾವರಣವನ್ನು ಖಚಿತಪಡಿಸುತ್ತದೆ ಎಂದರು.

ರೈಲ್ವೆ ಸಚಿವಾಲಯವು 4000 ಕೋವಿಡ್ ಆರೈಕೆ ಕೋಚ್ ಸಿದ್ಧಪಡಿಸಿದೆ, ಸುಮಾರು 64000 ಹಾಸಿಗೆಗಳು ರಾಜ್ಯಗಳ ಬಳಕೆಗೆ ಸಿದ್ಧವಾಗಿವೆ. ಪ್ರಸ್ತುತ, 169 ಬೋಗಿಗಳನ್ನು ವಿವಿಧ ರಾಜ್ಯಗಳಿಗೆ ಹಸ್ತಾಂತರಿಸಲಾಗಿದೆ. ಮಹಾರಾಷ್ಟ್ರದ ನಂದ್ರುಬಾರ್ ನಲ್ಲಿ ಪ್ರಸ್ತುತ 56 ರೋಗಿಗಳು ಈ ಸೌಲಭ್ಯವನ್ನು ಬಳಸುತ್ತಿದ್ದಾರೆ ಮತ್ತು 322 ಹಾಸಿಗೆಗಳು ಇನ್ನೂ ಲಭ್ಯವಿದೆ. ಈ ಸಂಬಂಧ ವಿನಂತಿಯನ್ನು ಅನುಸರಿಸಿ ರೈಲ್ವೆ ಮಹಾರಾಷ್ಟ್ರದ ಅಜ್ನಿ ಐಸಿಡಿ ಪ್ರದೇಶದಲ್ಲಿ ಪ್ರತ್ಯೇಕ ಕೋಚ್ ಗಳನ್ನು ಸಜ್ಜುಗೊಳಿಸುತ್ತಿದೆ. "ದೆಹಲಿಯಲ್ಲಿ, 1200 ಹಾಸಿಗೆಗಳ ಸಾಮರ್ಥ್ಯವಿರುವ 75 ಕೋವಿಡ್ ಆರೈಕೆ ಕೋಚ್ ಗಳಿಗಾಗಿ ರಾಜ್ಯ ಸರ್ಕಾರದ ಬೇಡಿಕೆಯನ್ನು ರೈಲ್ವೆ ಪೂರೈಸಿದೆ. 50 ಕೋಚ್ ಗಳನ್ನು ಶಕುರ್ ಬಸ್ತಿ ಮತ್ತು 25 ಆನಂದ್ ವಿಹಾರ್ ನಿಲ್ದಾಣಗಳಲ್ಲಿ ಇರಿಸಲಾಗಿದೆ" ಎಂದು ಪ್ರಕಟಣೆ ಹೇಳಿದೆ.

ಪಶ್ಚಿಮ ರೈಲ್ವೆಯ ರತ್ನಂ ವಿಭಾಗವು ಇಂದೋರ್ ಬಳಿಯ ತಿಹಿ ನಿಲ್ದಾಣದಲ್ಲಿ 320 ಹಾಸಿಗೆಗಳ ಸಾಮರ್ಥ್ಯವಿರುವ 20 ಕೋಚ್ ಗಳನ್ನಿರಿಸಿದೆ. ಉತ್ತರ ಪ್ರದೇಶದಲ್ಲಿ ಕೋಚ್ ಗಳನ್ನು ಇನ್ನೂ ರಾಜ್ಯ ಸರ್ಕಾರವು ಕೋರಿಲ್ಲವಾದರೂ, ತಲಾ 10 ಕೋಚ್ ಗಳನ್ನು ಫೈಜಾಬಾದ್, ಭಾದೋಹಿ, ವಾರಣಾಸಿ, ಬರೇಲಿ ಮತ್ತು ನಾಜಿಬಾಬಾದ್‌ನಲ್ಲಿ ನಿಯೋಜಿಸಲಾಗಿದ್ದು ಅವು 800 ಹಾಸಿಗೆಗಳ (50 ಕೋಚ್ ಗಳು) ಸಾಮರ್ಥ್ಯ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com