ಕೋವಿಡ್ ಚಿಕಿತ್ಸೆ ಸೇವೆಗೆ ನಾಳೆಯಿಂದ ವೆಬ್‌ಫೋರ್ಟಲ್ ಆರಂಭ: ಸಚಿವ ಡಾ. ಸುಧಾಕರ್

ಕೋವಿಡ್ ಚಿಕಿತ್ಸೆ ಮಾಹಿತಿಗಾಗಿ‌ ನಾಳೆ ಒಂದು ಪೋರ್ಟಲ್ ಲಾಂಚ್ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಕೋವಿಡ್ ಚಿಕಿತ್ಸೆ ಮಾಹಿತಿಗಾಗಿ‌ ನಾಳೆ ಒಂದು ಪೋರ್ಟಲ್ ಲಾಂಚ್ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ಹಲವಾರು ಜನ ಕೋವಿಡ್ ಚಿಕಿತ್ಸೆಗಾಗಿ ಅಳಿಲು ಸೇವೆ ಮಾಡುತ್ತೇವೆ ಎಂದು ಕರೆ ಮಾಡುತ್ತಿದ್ದಾರೆ.

ರಾಜ್ಯದ ಜನರಿಗೆ ಕರೆ ಕೊಡುತ್ತೇವೆ ನಮ್ಮ ಪೋರ್ಟಲ್, ವೆಬ್ ಸೈಟ್ ಆ್ಯಡ್ ಕೊಡುತ್ತೇವೆ. ನೀವು ಫಿಸಿಕಲ್ ಕೆಲಸ ಮಾಡಬೇಕಿಲ್ಲ, ನೀವು ಮನೆಯಲ್ಲಿ ಕೂತು ಮಾಡಬಹುದು. ಮೆಡಿಕಲ್ ಅಡ್ವೈಸ್ ಕೊಡಬಹುದು.

ಪದವೀಧರರು, ನಿವೃತ್ತ ಅಧಿಕಾರಿಗಳು ಸೇವೆ ಮಾಡಬಹುದು. ಕೋವಿಡ್ ಕೇರ್ ಸೆಂಟರ್ ನಲ್ಲಿ ಸೇವೆ ಮಾಡುತ್ತೇವೆ ಎನ್ನುವವರು ಬರಬಹುದು. ಜಿಲ್ಲೆಗಳಲ್ಲಿ ಕೂಡ ಕೆಲಸ ಮಾಡಬಹುದು. ನಮ್ಮ ಪೋರ್ಟಲ್ ನಲ್ಲಿ ದಾಖಲು ಮಾಡಬಹುದು. ಅವಶ್ಯಕತೆ ಇದ್ದರೆ ಅವರಿಗೆ ಭತ್ಯೆ ಅಥವಾ ವಿಶೇಷ ಸರ್ಟಿಫಿಕೇಟ್ ಕೊಡುವುದಕ್ಕೆ ಪ್ರಯತ್ನ ಮಾಡಲಾಗುವುದು ಎಂದರು.

ನಿಮ್ಮ ಸೇವೆ ಮುಖ್ಯ, ಅದಕ್ಕಾಗಿ ನೆನಪಿಗೆ ಸರ್ಟಿಫಿಕೇಟ್ ಕೊಡುತ್ತೇವೆ ಎಂದರು.

ಪ್ರಾರಂಭದಲ್ಲಿ ಆರೋಗ್ಯ ಆಪ್ತಮಿತ್ರ ಆಪ್ ಉಪಯೋಗ ಮಾಡಿದ್ದೆವು. ಜನವರಿ ಫೆಬ್ರವರಿ ನಲ್ಲಿ ಅದನ್ನು ಹಿಂದಕ್ಕೆ ತೆಗೆದುಕೊಂಡಿದ್ದೆವು. ನಮ್ಮ ಕೆಲಸಗಾರರು ಕಡಿಮೆ ಇದ್ದರಿಂದ ನಿಲ್ಲಿಸಲಾಗಿತ್ತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com