ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಬೆಂಗಳೂರು ನಗರದಲ್ಲಿಯೇ ಅಧಿಕ: ಪಾಸಿಟಿವ್ ಪ್ರಮಾಣ ಶೇ.12ಕ್ಕೆ ಏರಿಕೆ

ರಾಜ್ಯದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದರ ಮಧ್ಯೆ ಬೆಂಗಳೂರು ನಗರದಲ್ಲಿಯೇ ಕೊರೋನಾ ಕೇಸುಗಳು ಹೆಚ್ಚಿದ್ದು ಏಪ್ರಿಲ್ ತಿಂಗಳಲ್ಲಿ ಪಾಸಿಟಿವ್ ಪ್ರಕರಣಗಳು ನಗರದಲ್ಲಿ ಶೇಕಡಾ 12ಕ್ಕೆ ಹೆಚ್ಚಳವಾಗಿದೆ.
ಬೆಂಗಳೂರು ನಗರದಲ್ಲಿ ಕೊರೋನಾ ಪಾಸಿಟಿವ್ ಏರಿಕೆ
ಬೆಂಗಳೂರು ನಗರದಲ್ಲಿ ಕೊರೋನಾ ಪಾಸಿಟಿವ್ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದರ ಮಧ್ಯೆ ಬೆಂಗಳೂರು ನಗರದಲ್ಲಿಯೇ ಕೊರೋನಾ ಕೇಸುಗಳು ಹೆಚ್ಚಿದ್ದು ಏಪ್ರಿಲ್ ತಿಂಗಳಲ್ಲಿ ಪಾಸಿಟಿವ್ ಪ್ರಕರಣಗಳು ನಗರದಲ್ಲಿ ಶೇಕಡಾ 12ಕ್ಕೆ ಹೆಚ್ಚಳವಾಗಿದೆ.

ಪಾಸಿಟಿವ್ ದರಗಳೆಂದರೆ ಪ್ರತಿ 100 ಪರೀಕ್ಷೆಗಳಿಗೆ ಪಾಸಿಟಿವ್ ರೋಗಿಗಳ ಸಂಖ್ಯೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶೇಕಡಾ 12.21ಕ್ಕೆ ತಲುಪಿತ್ತು. ನಂತರ ಇಳಿಮುಖವಾಗಿದ್ದ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಇದೀಗ ಏಪ್ರಿಲ್ ತಿಂಗಳಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.

ಮೊನ್ನೆ ಮಂಗಳವಾರದ ಲೆಕ್ಕ ತೆಗೆದುಕೊಂಡರೆ ಬೆಂಗಳೂರು ನಗರದಲ್ಲಿ ಪಾಸಿಟಿವ್ ರೋಗಿಗಳ ಸಂಖ್ಯೆ ಶೇಕಡಾ 12ಕ್ಕೆ ತಲುಪಿದ್ದು 20 ಲಕ್ಷದ 82 ಸಾವಿರದ 897 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಕಳೆದ ತಿಂಗಳು ಬೆಂಗಳೂರು ನಗರದಲ್ಲಿ ಇದ್ದ ಸಂಖ್ಯೆ ಶೇಕಡಾ 2.31ರಷ್ಟಿದ್ದು 13 ಲಕ್ಷದ 78 ಸಾವಿರದ 753 ಪರೀಕ್ಷೆಗಳನ್ನು ಮಾಡಲಾಗಿತ್ತು.

ಫೆಬ್ರವರಿ, ಇದು ಶೇಕಡಾ 0.94 ರಷ್ಟಿದ್ದು, ಪರೀಕ್ಷೆಗೊಳಗಾದವರ ಸಂಖ್ಯೆ 7,27,314 ರಷ್ಟಾಗಿತ್ತು. ಜನವರಿ ತಿಂಗಳಲ್ಲಿ ಶೇಕಡಾ 0.91 ಮಂದಿ ಕೊರೋನಾ ಕೇಸುಗಳು  11 ಲಕ್ಷದ 29 ಸಾವಿರದ 909 ಮಂದಿ ಪರೀಕ್ಷೆಗೊಳಪಟ್ಟಿದ್ದರು. ಡಿಸೆಂಬರ್ ನಲ್ಲಿ ಶೇಕಡಾ 1.42ರಷ್ಟು ಸೋಂಕಿತರೊಂದಿಗೆ ಪರೀಕ್ಷೆ ಮಾಡಿಸಿಕೊಂಡವರ ಸಂಖ್ಯೆ 13 ಲಕ್ಷದ 8 ಸಾವಿರದ 060, ನವೆಂಬರ್ ನಲ್ಲಿ ಶೇಕಡಾ 2.19ರೊಂದಿಗೆ 14 ಲಕ್ಷದ 64 ಸಾವಿರದ 614 ಮಂದಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದರು.

ಅಕ್ಟೋಬರ್ ತಿಂಗಳಲ್ಲಿ ಶೇಕಡಾ 7.85ರಷ್ಟು ಕೊರೋನಾ ಸೋಂಕಿತರ ಸಂಖ್ಯೆಯಿದ್ದು 14 ಲಕ್ಷದ 64 ಸಾವಿರದ 614 ಪರೀಕ್ಷೆ ನಡೆಸಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಶೇಕಡಾ 12.21ರಷ್ಟಿದ್ದರೆ 8 ಲಕ್ಷದ 53 ಸಾವಿರದ 743 ಮಂದಿಗೆ ಪರೀಕ್ಷೆ ನಡೆಸಲಾಗಿತ್ತು. ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ವರದಿಯಾಗಿದ್ದು ಕಳೆದ ಜುಲೈಯಲ್ಲಿ ಅದು ಶೇಕಡಾ 23.8ರಷ್ಟು.

ಬೆಂಗಳೂರಿನಲ್ಲಿ ಶೇಕಡಾ 12ರಷ್ಟು ಎಂದರೆ ನಗರದಲ್ಲಿ ಕೊರೋನಾ ಸೋಂಕಿನ ಗುಣಲಕ್ಷಣಗಳನ್ನು ಹೊಂದಿರುವವರ ಪರೀಕ್ಷೆ ಮಾಡುವ ಸಾಮರ್ಥ್ಯ ಹೆಚ್ಚಾಗಿದೆ ಎಂದರ್ಥ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com