ಕೋವಿಡ್ ಕರ್ಫ್ಯೂ ನಡುವೆ ಆಂಬ್ಯುಲೆನ್ಸ್ ಚಾಲಕರಿಗೆ ಕೊಡಗು ನಿವಾಸಿಯಿಂದ ಉಚಿತ ಆಹಾರ ಸೇವೆ ಆರಂಭ

ಕೋವಿಡ್ ಕರ್ಫ್ಯೂ ಸಮಯದಲ್ಲಿ ಆಂಬುಲೆನ್ಸ್ ಚಾಲಕರಿಗೆ ಸಹಾಯ ಮಾಡಲು ಒಂದು ವಿಶಿಷ್ಟ ಕೆಲಸವನ್ನು ಮಾಡುತ್ತಿದ್ದಾರೆ ಮಡೆನಾಡು ಗ್ರಾಮದ ಅಶೋಕ್ ಬಿಎಸ್. ಹೌದು ಸಮಯಕ್ಕೆ ಸರಿಯಾಗಿ ಊಟ ಸಿಗದೆ ಸಂಕಷ್ಟಕ್ಕೆ ಸಿಲುಕುವ ಆಂಬ್ಯುಲೆನ್ಸ್ ಚಾಲಕರಿಗೆ ಉಚಿತ ಆಹಾರವನ್ನು ನೀಡುತ್ತಿದ್ದಾರೆ.
ಅಶೋಕ್
ಅಶೋಕ್

ಮಡಿಕೇರಿ: ಕೋವಿಡ್ ಕರ್ಫ್ಯೂ ಸಮಯದಲ್ಲಿ ಆಂಬುಲೆನ್ಸ್ ಚಾಲಕರಿಗೆ ಸಹಾಯ ಮಾಡಲು ಒಂದು ವಿಶಿಷ್ಟ ಕೆಲಸವನ್ನು ಮಾಡುತ್ತಿದ್ದಾರೆ ಮಡೆನಾಡು ಗ್ರಾಮದ ಅಶೋಕ್ ಬಿಎಸ್. ಹೌದು ಸಮಯಕ್ಕೆ ಸರಿಯಾಗಿ ಊಟ ಸಿಗದೆ ಸಂಕಷ್ಟಕ್ಕೆ ಸಿಲುಕುವ ಆಂಬ್ಯುಲೆನ್ಸ್ ಚಾಲಕರಿಗೆ ಉಚಿತ ಆಹಾರವನ್ನು ನೀಡುತ್ತಿದ್ದಾರೆ.

ಅಶೋಕ್ ವೃತ್ತಿಯಲ್ಲಿ ಜೀಪ್ ಚಾಲಕ. ಅರ್ಥ್ ಮೂವರ್ ಅನ್ನು ಸಹ ಹೊಂದಿದ್ದಾರೆ. ಆಗಾಗ್ಗೆ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ. ಕರ್ಫ್ಯೂ ಮಧ್ಯೆ ಕೆಲಸ ಮಾಡುತ್ತಿರುವ ಹಲವಾರು ಆಂಬುಲೆನ್ಸ್ ಚಾಲಕರಿಗೆ ಸಹಾಯ ಮಾಡಲು ಬುಧವಾರದಿಂದ ಅಶೋಕ್ ಒಂದು ವಿಶಿಷ್ಟ ಕೆಲಸವನ್ನು ಪ್ರಾರಂಭಿಸಿದ್ದಾರೆ.

ನಾನು ಆಂಬ್ಯುಲೆನ್ಸ್ ಡ್ರೈವರ್ ಆಗಿ 12 ವರ್ಷಗಳ ಕಾಲ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದೇನೆ. ಅವರಲ್ಲಿನ ಒತ್ತಡ ನನಗೆ ತಿಳಿದಿದೆ. ಕರ್ಫ್ಯೂ ಸಮಯದಲ್ಲಿ, ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಎಲ್ಲವೂ ಮುಚ್ಚುವುದರಿಂದ ಅವರಿಗೆ ಸಮಯಕ್ಕೆ ತಿನ್ನಲು ಸಾಧ್ಯವಾಗುವುದಿಲ್ಲ. ಸಾಂಕ್ರಾಮಿಕ ಈ ಸಮಯದಲ್ಲಿ ನಾನು ನನ್ನ ಕೆಲಸವನ್ನು ಮಾಡಲು ಬಯಸುತ್ತೇನೆ ಎಂದು ಅಶೋಕ್ ಹಂಚಿಕೊಂಡರು.

ಅಶೋಕ್ ತಮ್ಮ ಫೋನ್ ಸಂಖ್ಯೆಯನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಆಂಬ್ಯುಲೆನ್ಸ್ ಚಾಲಕರಿಗೆ ಉಚಿತ ಆಹಾರವನ್ನು(ಟೇಕ್-ಅವೇ) ನೀಡಲು ಮುಂದಾಗಿದ್ದಾರೆ. ಈ ಸೇವೆಯನ್ನು ಪಡೆಯಲು ಬಯಸುವ ಚಾಲಕರು ಅಶೋಕ್‌ಗೆ ಕರೆ ಮಾಡಬಹುದು. ಉಪಾಹಾರ ಅಥವಾ ಊಟವನ್ನು ಅರ್ಧ ಘಂಟೆಯ ಸಮಯದಲ್ಲಿ ಸಿದ್ಧಪಡಿಸಲಾಗುತ್ತದೆ. ಮನೆಯಲ್ಲಿ ಆಹಾರವನ್ನು ತಯಾರಿಸಿ, ಪ್ಯಾಕ್ ಮಾಡಿ ಅದನ್ನು ತೆಗೆದುಕೊಂಡು ಬಂದು ಮಡೆನಾಡು ಮುಖ್ಯ ರಸ್ತೆಯ ಬಳಿ ಕಾಯುತ್ತಾರೆ. ಅಲ್ಲಿಗೆ ಬಂದು ಆಂಬ್ಯುಲೆನ್ಸ್ ಚಾಲಕರು ತೆಗೆದುಕೊಂಡು ಹೋಗಬಹುದು.

'ನಾನು ಸರಳವಾದ ಆಹಾರವನ್ನು ತಯಾರಿಸುತ್ತೇನೆ. ಉಪಾಹಾರಕ್ಕಾಗಿ ದೋಸೆ ಮತ್ತು ಊಟಕ್ಕಾಗಿ ಅನ್ನ, ರಸಂ. ಇನ್ನು ಯಾವ ದಿನ ಮೀನುಗಳನ್ನು ತೆಗೆದುಕೊಂಡರೆ, ಆ ದಿನ ಒಂದು ಖಾದ್ಯವನ್ನು ತಯಾರಿಸುತ್ತೇನೆ ಮತ್ತು ಅವುಗಳನ್ನು ಪ್ಯಾಕ್ ಮಾಡುತ್ತೇನೆ. 

ಮೊದಲ ದಿನ ಮೂವರು ಚಾಲಕರು ಸೌಲಭ್ಯವನ್ನು ಪಡೆದುಕೊಂಡರು. ಹೆಚ್ಚಿನ ಚಾಲಕರು ಈ ಪ್ರಯೋಜನ ಪಡೆದುಕೊಂಡರೆ ನಾನು ಧನ್ಯ ಎಂದು ಅಶೋಕ್ ಹಂಚಿಕೊಂಡಿದ್ದಾರೆ. ಸೌಲಭ್ಯವನ್ನು ಪಡೆಯಲು, ಆಂಬ್ಯುಲೆನ್ಸ್ ಚಾಲಕರು 9902270046 ಮತ್ತು 9483069621 ಎಂಬ ಮೊಬೈಲ್ ಸಂಖ್ಯೆಗಳಲ್ಲಿ ಅಶೋಕ್‌ಗೆ ಕರೆ ಮಾಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com