ಬೆಂಗಳೂರು ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ: ರೋಗಿಗಳ ಜೀವ ಉಳಿಸಿದ ಅಧಿಕಾರಿಗಳ ಹರಸಾಹಸ!

ಕೊರೋನಾ ಸೋಂಕಿತರಿಗೆ ಸರಿಯಾಗಿ ವೈದ್ಯಕೀಯ ನೆರವು ಸಿಗುತ್ತಿಲ್ಲ, ಆಸ್ಪತ್ರೆಯಲ್ಲಿ ನರಕಸದೃಶ್ಯ ರೂಪವನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಆಕ್ಸಿಜನ್ ಕೊರತೆಯಿಂದ ಅನೇಕ ರೋಗಿಗಳು ಸಾಯುತ್ತಿದ್ದಾರೆ ಎಂದು ಸಹ ಕೇಳಿದ್ದೇವೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಹತ್ತಿರವಿರುವ ರೈಲ್ವೆ ವಿಭಾಗೀಯ ಆಸ್ಪತ್ರೆಯಲ್ಲಿ ರೋಗಿಗಳು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಹತ್ತಿರವಿರುವ ರೈಲ್ವೆ ವಿಭಾಗೀಯ ಆಸ್ಪತ್ರೆಯಲ್ಲಿ ರೋಗಿಗಳು

ಬೆಂಗಳೂರು: ಕೊರೋನಾ ಸೋಂಕಿತರಿಗೆ ಸರಿಯಾಗಿ ವೈದ್ಯಕೀಯ ನೆರವು ಸಿಗುತ್ತಿಲ್ಲ, ಆಸ್ಪತ್ರೆಯಲ್ಲಿ ನರಕಸದೃಶ್ಯ ರೂಪವನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಆಕ್ಸಿಜನ್ ಕೊರತೆಯಿಂದ ಅನೇಕ ರೋಗಿಗಳು ಸಾಯುತ್ತಿದ್ದಾರೆ ಎಂದು ಸಹ ಕೇಳಿದ್ದೇವೆ.

ನಿನ್ನೆ ಸಾಯಂಕಾಲ 7.30ರ ಹೊತ್ತಿಗೆ ಬೆಂಗಳೂರು ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ 13 ರೋಗಿಗಳು ಕೋವಿಡ್-19 ನಿಂದ ಐಸಿಯುನಲ್ಲಿ ದಾಖಲಾಗಿದ್ದ ರೋಗಿಗಳಿದ್ದರು, ಕೇವಲ ಒಂದು ಗಂಟೆಗಾಗುವಷ್ಟು ಮಾತ್ರ ಆಕ್ಸಿಜನ್ ಉಳಿದಿತ್ತು.

ಪೀಣ್ಯದಿಂದ ಪ್ರತಿನಿತ್ಯ ಆಕ್ಸಿಜನ್ ಪೂರೈಸುವವರು ನಿಗದಿತ ಸಮಯಕ್ಕೆ ಪೂರೈಕೆ ಮಾಡಿರಲಿಲ್ಲ, ಆಸ್ಪತ್ರೆಯ ಮುಖ್ಯ ವೈದ್ಯಕೀಯ ಸೂಪರಿಂಟೆಂಡೆಂಟ್ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕೊನೆಗೆ ಹೇಗೋ ಸಮಯಕ್ಕೆ ಆಕ್ಸಿಜನ್ ಪೂರೈಕೆಯಾಯಿತು. ಆದರೆ ಇದಕ್ಕೂ ಮುನ್ನ ಕಂಡ ಘೋರ ಪರಿಸ್ಥಿತಿ ಮಾತ್ರ ಚಿಂತಾಜನಕ.

65 ಬೆಡ್ ಗಳ 15 ಐಸಿಯು ಬೆಡ್ ಗಳನ್ನು ಹೊಂದಿರುವ ಈ ಆಸ್ಪತ್ರೆ ಇರುವುದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ಬಸ್ ನಿಲ್ದಾಣದ ಹಿಂದಿನ ಪ್ರವೇಶ ದ್ವಾರದ ಹತ್ತಿರ, ಅಂದರೆ ಬೆಂಗಳೂರು ನಗರದ ಹೃದಯ ಭಾಗದಲ್ಲಿ. ಅದೀಗ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿದೆ. ಉತ್ತಮ ಆಕ್ಸಿಜನ್ ಪೂರೈಕೆಯ ಸೌಲಭ್ಯವನ್ನು ಹೊಂದಿದೆ.

ಸದರ್ನ್ ಗ್ಯಾಸ್ ಸಪ್ಲೈ ಜಂಬೊ ಸಿಲಿಂಡರ್ ನಲ್ಲಿ ಸುಮಾರು 70 ಲೀಟರ್ ಆಕ್ಸಿಜನ್ ನ್ನು ಆಸ್ಪತ್ರೆಗೆ ಪ್ರತಿದಿನ ನೀಡುತ್ತಿತ್ತು. ನಿನ್ನೆ ಸಾಯಂಕಾಲ 4 ಗಂಟೆ ಹೊತ್ತಿಗೆ ಎಂದಿನ ನಿಗದಿತ ಸಮಯದಂತೆ ಆಕ್ಸಿಜನ್ ನ್ನು ಪೂರೈಕೆದಾರ ಆಸ್ಪತ್ರೆಗೆ ವಿತರಿಸಬೇಕಾಗಿತ್ತು. ಬೇರೆ ಆಸ್ಪತ್ರೆಗಳಿಂದ ಹೆಚ್ಚಿನ ಬೇಡಿಕೆಯಿದೆ, ಹೀಗಾಗಿ ಇಂದು ನೀಡಲಾಗುತ್ತಿಲ್ಲ ಎಂದು ಹೇಳಿದರು. ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಮೀರಾ ಎನ್ ಪಾಟೀಲ್ ಇದನ್ನು ರೈಲ್ವೆ ಆಡಳಿತ ವರ್ಗದ ಗಮನಕ್ಕೆ ತಂದರು. ಅದು ಅವರು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಹೇಳುವ ಹೊತ್ತಿಗೆ ಇನ್ನೇನು ಆಕ್ಸಿಜನ್ ಮುಗಿಯುವ ಹಂತಕ್ಕೆ ಬಂದಿತ್ತು ಎನ್ನುತ್ತಾರೆ ರೈಲ್ವೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು.

ಇನ್ನು ಕೇವಲ ಒಂದು ಗಂಟೆಯಿರುವುದು ಎಂದಾಗ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಕಚೇರಿಗೆ ಏನು ಮಾಡುವುದೆಂದು ದಿಕ್ಕು ತೋಚಲಿಲ್ಲ. ಹಲವು ಕಡೆಗಳಿಗೆ ಕರೆ ಮಾಡಿದರು. ಬೇರೆ ಸಿಬ್ಬಂದಿ ಕೂಡ ಆಕ್ಸಿಜನ್ ನ್ನು ಆಸ್ಪತ್ರೆಗೆ ತರಿಸಲು ಶ್ರಮಿಸುತ್ತಿದ್ದರು. ಕೆಲವು ಕಡೆಗಳಿಂದ ತಂದ ಒಂದೆರಡು ಸಿಲೆಂಡರ್ ಆಕ್ಸಿಜನ್ ಕೂಡ ಖಾಲಿಯಾದವು. ತೀವ್ರ ಒತ್ತಡ ಹಾಕಿದ ನಂತರ ಕೊನೆಗೂ ದಿನನಿತ್ಯ ಆಕ್ಸಿಜನ್ ಪೂರೈಸುವವರು ರಾತ್ರಿ 9 ಗಂಟೆಗೆ ಕೆಲವು ಸಿಲಿಂಡರ್ ವಿತರಣೆ ಮಾಡಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬರುವಾಗ ರಾತ್ರಿ 10 ಗಂಟೆಯಾಗಿತ್ತು ಎನ್ನುತ್ತಾರೆ ಅಧಿಕಾರಿಗಳು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯ ನಿರ್ಲಕ್ಷ್ಯದಿಂದ ಹೀಗೆ ಆಗಿದ್ದು, ವೈದ್ಯರಿಗೆ ವಿಷಯ ಹೊರಗೆ ತಿಳಿಸದಂತೆ ಸೂಚಿಸಲಾಗಿತ್ತು ಎಂದು ಸಿಬ್ಬಂದಿ ಹೇಳುತ್ತಾರೆ.

ನಿನ್ನೆ ಸಾಯಂಕಾಲ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ, ಆಕ್ಸಿಜನ್ ಕೊರತೆಯಿಂದಾಗಿ ಎಂದು ಗೊತ್ತಾದರೂ ಆಕ್ಸಿಜನ್ ಸಮಸ್ಯೆಯಿಂದ ರೋಗಿಗಳು ಮೃತಪಟ್ಟಿದ್ದು ಅಲ್ಲ ಎನ್ನುತ್ತಾರೆ.

ರೈಲ್ವೆ ಇಲಾಖೆಯಲ್ಲಿ ಕೂಡ ಹಲವರು ನೌಕರರು ಕೊರೋನಾಗೆ ತುತ್ತಾಗುತ್ತಿದ್ದಾರೆ, ಅವರ ಕುಟುಂಬಸ್ಥರು ಕೂಡ ಸೋಂಕಿಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಕೇಳೋಣವೆಂದರೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಸಂಪರ್ಕಕ್ಕೆ ಸಿಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com