ಮೃತಪಟ್ಟ 8 ಗಂಟೆಯ ಬಳಿಕ ಕೋವಿಡ್ ಸೋಂಕಿತೆಗೆ ಬೆಡ್ ಹಂಚಿಕೆ ಮಾಡಿದ ಬಿಬಿಎಂಪಿ!

ಕೋವಿಡ್ ಸೋಂಕಿತೆಯೊಬ್ಬರು ಮೃತಪಟ್ಟು 8 ಗಂಟೆಗಳ ಬಳಿಕ ಬಿಬಿಎಂಪಿ ಸಿಬ್ಬಂದಿಗೆ ಅವರಿಗೆ ಬೆಡ್ ಹಂಚಿಕೆ ಮಾಡಿರುವ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್ ಸಮಸ್ಯೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆಯಾದರೂ ಇದನ್ನುಸುಳ್ಳಾಗಿಸುವ ವರದಿಗಳು ಬರುತ್ತಲೇ ಇವೆ. 

ಕೋವಿಡ್ ಸೋಂಕಿತೆಯೊಬ್ಬರು ಮೃತಪಟ್ಟು 8 ಗಂಟೆಗಳ ಬಳಿಕ ಬಿಬಿಎಂಪಿ ಸಿಬ್ಬಂದಿಗೆ ಅವರಿಗೆ ಬೆಡ್ ಹಂಚಿಕೆ ಮಾಡಿರುವ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಮೃತ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿ ದುಃಖದಲ್ಲಿದ್ದ ಕುಟುಂಬದವರಿಗೆ ಬಿಬಿಎಂಪಿ ಸಿಬ್ಬಂದಿ ಕರೆ ಮಾಡಿ, -‘ತಕ್ಷಣ ಇದು ನಿಮಿಷದೊಳಗೆ ಬರಬೇಕು, ನಿಮಗೆ ಬೆಡ್ ಹಂಚಿಕೆಯಾಗಿದೆ’ ಎಂದು ತಿಳಿಸಿದ್ದಾರೆ. ಇದು ಕೇಳಿ ಕುಟುಂಬದವರು ಹೌಹಾರಿದ್ದಾರೆ. ಸಮಯಕ್ಕೆ ಸರಿಯಾಗಿ ಸೋಂಕಿತ ಮಹಿಳೆಗೆ ಬೆಡ್ ಮತ್ತು ಆಕ್ಸಿಜನ್ ಸಿಗದೆ ಅವರು 8 ಗಂಟೆಯ ಹಿಂದೆ ಮೃತಪಟ್ಟಿದ್ದರು.

ಬೆಂಗಳೂರಿನ ಕಮ್ಮನಹಳ್ಳಿ ನಿವಾಸಿ ರೆಜಿನಾ ಅವರು ಸೋಂಕಿನ ಲಕ್ಷಣಗಳು ಕಂಡುಬಂದ ನಂತರ ಮಂಗಳವಾರ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿದೆ. ಅವರ ಕುಟುಂಬ ಸದಸ್ಯರು ಬೆಡ್ ಗಾಗಿ ಹಲವೆಡೆ ವಿಚಾರಿಸಿ ಹುಡುಕಾಡಿದ್ದಾರೆ. ಆದರೆ ಬೆಡ್ ಸಿಗಲೇ ಇಲ್ಲ.

ರೆಜಿನಾ ಗುರುವಾರ ಮುಂಜಾನೆ 4.26 ಕ್ಕೆ ತನ್ನ ಮನೆಯಲ್ಲಿ ಕೊನೆಯುಸಿರೆಳೆದರು. ಮರ್ಸಿ ಏಂಜಲ್ಸ್ ಸ್ವಯಂಸೇವಕರಾದ ಆನ್ ಮೋರಿಸ್ ಅವರ ಸಹಾಯದಿಂದ ಕುಟುಂಬವು ಬೆಳಿಗ್ಗೆ 10 ಗಂಟೆ ಸುಮಾರಿಗೆ ಕಲ್ಪಲ್ಲಿ ಸ್ಮಶಾನದಲ್ಲಿ ರೆಜಿನಾ ಅವರ ಅಂತ್ಯಸಂಸ್ಕರ ನೆರವೇರಿಸಿತು.

ಕುಟುಂಬವು ದುಃಖ ಮತ್ತು ಆಘಾತದಲ್ಲಿ ಇರುವಾಗಲೇ ನಾಗವಾರ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆ ಎಂದು 1912 ಸಹಾಯವಾಣಿಯಿಂದ ಕರೆ ಬಂದಿದೆ. ಐದು ನಿಮಿಷಗಳಲ್ಲಿ ಆಸ್ಪತ್ರೆಗೆ ತಲುಪದಿದ್ದರೆ, ಹಾಸಿಗೆಯನ್ನು ಬೇರೆಯವರಿಗೆ ನೀಡಲಾಗುವುದು ಎಂದು ಸಿಬ್ಬಂದಿ ಎಚ್ಚರಿಸುತ್ತಿದ್ದರು. ಇದನ್ನು ಕೇಳಿದ ಸಂತ್ರಸ್ತ ಕುಟುಂಬದ ಸದಸ್ಯರು ಹೌಹಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com