ಕೋವಿಡ್-19: ಪರೀಕ್ಷಾ ವರದಿ ವಿಳಂಬ, ಆತಂಕದಲ್ಲಿಯೇ ದಿನ ದೂಡುತ್ತಿರುವ ಬೆಂಗಳೂರು ಜನತೆ

ರಾಜ್ಯದಲ್ಲಿ ಕೊರೋನಾ ಸೋಂಕು ಭಾರೀ ಪ್ರಮಾಣದಲ್ಲಿ ಹರಡುತ್ತಿದ್ದು, ಈ ನಡುವೆ ಅಲ್ಪ ಸ್ವಲ್ಪ ಲಕ್ಷಣಗಳು ಕಂಡು ಬಂದರೂ ಆತಂಕಕ್ಕೊಳಗಾಗುತ್ತಿರುವ ಜನರು ಸ್ಥಳೀಯ ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳಿಗೆ ತೆರಳಿ ಪರೀಕ್ಷೆಗೊಳಗಾಗುತ್ತಿದ್ದಾರೆ. ಈ ನಡುವೆ ಲ್ಯಾಬ್ ಗಳ ವರದಿ ತಡವಾಗಿ ಬರುತ್ತಿದ್ದು, ಇದು ಜನತೆಯ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತಿದೆ. 
ಕೊರೋನಾ ಕರ್ಫ್ಯೂ ವೇಳೆ ಸಂಚರಿಸುತ್ತಿರುವ ಅಂಬ್ಯುಲೆನ್ಸ್
ಕೊರೋನಾ ಕರ್ಫ್ಯೂ ವೇಳೆ ಸಂಚರಿಸುತ್ತಿರುವ ಅಂಬ್ಯುಲೆನ್ಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಭಾರೀ ಪ್ರಮಾಣದಲ್ಲಿ ಹರಡುತ್ತಿದ್ದು, ಈ ನಡುವೆ ಅಲ್ಪ ಸ್ವಲ್ಪ ಲಕ್ಷಣಗಳು ಕಂಡು ಬಂದರೂ ಆತಂಕಕ್ಕೊಳಗಾಗುತ್ತಿರುವ ಜನರು ಸ್ಥಳೀಯ ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳಿಗೆ ತೆರಳಿ ಪರೀಕ್ಷೆಗೊಳಗಾಗುತ್ತಿದ್ದಾರೆ. ಈ ನಡುವೆ ಲ್ಯಾಬ್ ಗಳ ವರದಿ ತಡವಾಗಿ ಬರುತ್ತಿದ್ದು, ಇದು ಜನತೆಯ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತಿದೆ. 

ನಗರದಲ್ಲಿ ಸೋಂಕು ಹೆಚ್ಚಾದಂತೆ ಲ್ಯಾಬ್ ಗಳ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಹಲವು ಲ್ಯಾಬ್ ಗಳು   ಪರೀಕ್ಷಾ ವರದಿ ನೀಡಲು ಕನಿಷ್ಠ 72 ಗಂಟೆಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಹೇಳಲಾಗುತ್ತಿದೆ. ಇದರಿಂದ ಚಿಕಿತ್ಸೆ ತಡವಾಗುವ ಹಿನ್ನೆಲೆಯಲ್ಲಿ ನಗರವಾಸಿಗಳಲ್ಲಿ ಆತಂಕಕ್ಕೊಳಗಾಗಿದ್ದಾರೆ. 

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆಗೊಳಪಡಲಾಗಿತ್ತು. ಸ್ವ್ಯಾಬ್ ಸಂಗ್ರಹಿಸಿ 5 ದಿನಗಳಾದ ಬಳಿಕ ವರದಿ ಬಂದಿತ್ತು. ಪರೀಕ್ಷೆಗೊಳಪಟ್ಟ ದಿನದಿಂದಲೂ ನಾನು ಕೋವಿಡ್ ವಾರ್ ರೂಮ್ ವೆಬ್ ಸೈಟ್ ನಲ್ಲಿ ವರಿದಿಗಾಗಿ ಪರಿಶೀಲಿಸುತ್ತಲೇ ಇದ್ದೆ. ಆದರೆ, 5 ದಿನಗಳಾದರೂ ನನಗೆ ವರದಿ ಸಿಕ್ಕಿರಲಿಲ್ಲ. ಸ್ಯಾಂಪಲ್ ತೆಗೆದುಕೊಂಡ ಸಿಬ್ಬಂದಿ 48 ಗಂಟೆಗಳೊಳಗಾಗಿ ವರದಿ ನೀಡುವುದಾಗಿ ತಿಳಿಸಿದ್ದರು. ಆದರೆ, 5 ದಿನಗಳಾದ ಬಳಿಕ ವರದಿ ಬಂತಿತ್ತು. ನನಗೆ ಕೊರೋನಾದ ಜ್ವರ, ತಲೆನೋವು, ಶೀತ, ಅತಿಸಾರ ಸೇರಿದಂತೆ ಎಲ್ಲಾ ಲಕ್ಷಣಗಳೂ ಇತ್ತು. ಹೀಗಾಗಿ ಸಾಕಷ್ಟು ಆತಂಕಕ್ಕೊಳಗಾಗಿದ್ದೆ. ವರದಿ ತಡವಾಗುತ್ತಿದ್ದ ಹಿನ್ನೆಲೆಯಲ್ಲಿ ನಾನು ಔಷಧಿಗಳನ್ನು ಆರಂಭಿಸಿದ್ದೆ ಎಂದು ಹೇಳಿದ್ದಾರೆ. 

ವಾರಗಳ ಹಿಂದಷ್ಟೇ ರಾಜ್ಯ ಸರ್ಕಾರ ಕೊರೋನಾ ಪರೀಕ್ಷೆ ನಡೆಸುವ ಲ್ಯಾಬ್ ಗಳಿಗೆ ಕಠಿಣ ಸೂಚನೆಗಳನ್ನು ನೀಡಿತ್ತು. ಸ್ವ್ಯಾಬ್ ಸಂಗ್ರಹಿಸಿದ 24 ಗಂಟೆಗಳೊಳಗಾಗಿ ಪರೀಕ್ಷಾ ವರದಿ ನೀಡಬೇಕು. ಹಾಗೂ ಐಸಿಎಂಆರ್ ಪೋರ್ಟಲ್ ನಲ್ಲಿ ವರದಿಯನ್ನು ಅಪ್ಲೋಡ್ ಮಾಡಬೇಕು. ಸೂಚನೆಗಳನ್ನು ಪಾಲಿಸದ ಲ್ಯಾಬ್ ಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದೂ ಸೂಚಿಸಿತ್ತು. ಆದರೆ, ಪರಿಸ್ಥಿತಿ ಯಾವುದೇ ರೀತಿಯಲ್ಲಿಯೂ ಬದಲಾಗಿಲ್ಲ. ಕೇವಲ ಸರ್ಕಾರಿ ಲ್ಯಾಬ್ ಗಳಲ್ಲಿ ಅಷ್ಟೇ ಅಲ್ಲ, ಖಾಸಗಿ ಲ್ಯಾಬ್ ಗಳ ಪರಿಸ್ಥಿತಿಯೂ ಇದೇ ರೀತಿಯಾಗಿದೆ. ನಗರದ ಹಲವು ಲ್ಯಾಬ್ ಗಳು ಒಬ್ಬ ವ್ಯಕ್ತಿಯ ಕೊರೋನಾ ಪರೀಕ್ಷೆಯ ನರದಿ ನೀಡಲು 72 ಗಂಟೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. 

ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಖಾಸಗಿ ಪ್ರಯೋಗಾಲಯದಲ್ಲಿ ಸ್ವ್ಯಾಬ್ ಸ್ಯಾಂಪಲ್ ನೀಡಲಾಗಿತ್ತು. 72 ಗಂಟೆಗಳ ಬಳಿಕವಷ್ಟೇ ವರದಿ ನೀಡಲು ಸಾಧ್ಯೆ ಎಂದು ಹೇಳಿದ್ದರು. ಸರ್ಕಾರದ ಸೂಚನೆಯಂತೆ ನಮಗೆ 24 ಗಂಟೆಗಳೊಳಗಾಗಿ ವರದಿ ನೀಡಬೇಕು. ಆದರೆ, ಪ್ರಯೋಗಾಲಯಗಳು ನೀಡುತ್ತಿಲ್ಲ. ಲಕ್ಷಣಗಳಿದ್ದರೂ ಕೂಡ ನನ್ನ ಇಡೀ ಕುಟುಂಬ ವರದಿಗಾಗಿ ಕಾಯಬೇಕಾಗಿ ಬಂದಿತ್ತು. ಆದರೂ ನಾವು ಮುಂಜಾಗ್ರತಾ ಕ್ರಮವಾಗಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದೆವು. 74 ವರ್ಷದ ನನ್ನ ಅಜ್ಜಿಗೂ ಲಕ್ಷಣಗಳು ಕಂಡು ಬಂದಿತ್ತು. ವೈದ್ಯಕೀಯ ವರದಿ ಬರುವಷ್ಟರದಲ್ಲಿ ಅವರ ಪರಿಸ್ಥಿತಿ ಗಂಭೀರವಾಗಿ ಹೋಗಿತ್ತು ಎಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 33 ವರ್ಷದ ವ್ಯಕ್ತಿಯೊಬ್ಬರು ಹೇಳಿದ್ದಾರೆ. 

ಪರೀಕ್ಷಾ ಚಟುವಟಿಕೆಗಳು ಮತ್ತು ಪ್ರಯೋಗಾಲಯಗಳ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಶಾಲಿನಿ ರಜನೀಶ್ ಅವರು ಪ್ರತಿಕ್ರಿಯೆ ನೀಡಿ, ಮುಂದಿನ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ. ಈಗಾಗಲೇ ಪ್ರಯೋಗಾಲಯಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. 24 ಗಂಟೆಗಳೊಳಗಾಗಿ ವರದಿ ನೀಡುವ ಭರವಸೆಯನ್ನು ನೀಡಿದ್ದಾರೆ. ಸರ್ಕಾರದ ಸೂಚನೆ ಪಾಲಿಸದ ಲ್ಯಾಬ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com